ಪ್ರಥಮ ಟಾವಿಚಿಕಿತ್ಸೆ ಯಶಸ್ವಿ: ಡಾ. ರಘುಪ್ರಸಾದ ತಂಡದಿಂದ ನೂತನ ಚಿಕಿತ್ಸೆ
ಧಾರವಾಡ 15: ಇಲ್ಲಿನ ಎಸ್ಡಿಎಮ್‌ನ ರಾಯಣ ಹಾರ್ಟ್ ಸೆಂಟರ್ನ ವೈದ್ಯರು ವಿಶೇಷ ಸಾಧನೆಗೈದಿದ್ದು, ಪ್ರಥಮ ಬಾರಿಗೆ ಆಧುನಿ ಕಟಾವಿ (Transcatheter Aortic Valve Implantation (TAVI)) ಚಿಕಿತ್ಸೆಯ ಮೂಲಕ ರೋಗಿಯ ಆರೋಗ್ಯವನ್ನು ಸುಧಾರಿಸಿದ್ದಾರೆ.
62ವರ್ಷದ ಆರ್‌ಎಸ್ ಪಾಟೀಲ (ಹೆಸರು ಬದಲಾಯಿಸಲಾಗಿದೆ) ಉಸಿರಾಟದ ಸಮಸ್ಯೆ ಹಾಗೂ ಎದೆಯಲ್ಲಿ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಪರೀಕ್ಷೆಗಳ ನಂತರ ಪಾಟೀಲ ಅವರು ಕ್ಯಾಲಸಿಫಿಕ್ ಅರ್ಯೋಟಿಕ್ ಸ್ಟೆನೋಸಿಸ್ ( ಅಂದರೆ ಅವರ ಹೃದಯದ ಮುಖ್ಯ ಪಂಪಿಗ್ ಚೇಂಬರ್ನಿಂದ ದೇಹದ ಮುಖ್ಯ ಅಪಧಮನಿಗೆ ರಕ್ತಹರಿಯುವ ಕವಾಟ ಕ್ಯಾಲಸಿಯಂ ಶೇಖರಣೆಯಿಂದ ತೀವ್ರವಾಗಿ ಕಿರಿದಾಗಿತ್ತು. ಇದರಿಂದ ಹೃದಯದಿಂದ ದೇಹದ ಇತರ ಭಾಗಗಳಿಗೆ ರಕ್ತದ ಹರಿವು ಕಡಿಮೆಯಾಗಿತ್ತು).
ರೋಗಿಯನ್ನು ತಪಾಸಣೆ ಮಾಡಿದ ಹಿರಿಯ ಹೃದಯ ರೋಗ ತಜ್ಞ ಡಾ.ರಘುಪ್ರಸಾದ ಎಸ್, ರೋಗಿಗೆ ನೂತನ ಟಾವಿ ಚಿಕಿತ್ಸೆ ಬಗ್ಗೆ ತಿಳಿಹೇಳಿದರು ಮತ್ತು ಇದು ತೆರೆದ ಹೃದಯ ಚಿಕಿತ್ಸೆಗೆ ಪರ್ಯಾಯವಾಗಿದ್ದು, ಚಿಕಿತ್ಸೆ ಪರಿಣಾಮಕಾರಿಯಾಗುವದು ಎಂದು ಮನವರಿಕೆ ಮಾಡಿದರು.
ರೋಗಿಗೆ ಇತ್ತೀಚೆಗೆ ಯಶಸ್ವಿಯಾಗಿ ಈ ಚಿಕಿತ್ಸೆ ನೀಡಿದ ಡಾ. ರಘುಪ್ರಸಾದ ಅವರ ತಂಡ ಸುಮಾರು ಒಂದುವರೆ ಘಂಟೆಯ ಚಿಕಿತ್ಸೆಯಿಂದ ಅವರ ಆರೋಗ್ಯ ಸಮಸ್ಯೆಯನ್ನು ನಿವಾರಿಸಿದೆ. ಚಿಕಿತ್ಸೆಯ ಮೂರು ದಿನಗಳ ಬಳಿಕ ಮನೆಗೆ ತೆರಳಿದ ಹಿರಿಯ ಜೀವಿ ಆರೋಗ್ಯವಾಗಿದ್ದಾರೆ.
ಎಸ್ಡಿಎಮ್‌ನ ರಾಯಣ ಹಾರ್ಟ್ ಸೆಂಟರ್ನಲ್ಲಿ ದೊರೆತ ಚಿಕಿತ್ಸೆಯ ಬಗ್ಗೆ ಹರ್ಷವ್ಯಕ್ತಪಡಿಸಿದ ಪಾಟೀಲ ಅವರು ಹಾಗೂ ಅವರ ಸಂಬಂಧಿಕರು, ಹೃದಯ ಸಂಬಂಧಿ ಎಲ್ಲ ರೋಗಗಳಿಗೆ ಲಭ್ಯವಿರುವ ಅತ್ಯಾಧುನಿಕ ಚಿಕಿತ್ಸೆ ನಮ್ಮಭಾಗದಲ್ಲಿಯೇ ಇರುವುದು ಸಂತಸ, ಇದರಿಂದ ದೂರದ ಊರುಗಳಿಗೆ ಚಿಕಿತ್ಸೆಗಾಗಿ ಅಲೆದಾಡುವುದನ್ನು ತಪ್ಪಿಸಿದಂತಾಗಿದೆ ಎಂದರು.
ಡಾ. ರಘುಪ್ರಸಾದ ಮಾತನಾಡಿ, ಈ ರೀತಿಯ ಆಧುನಿಕ ಚಿಕಿತ್ಸೆಗಳು ನಮ್ಮ ಉತ್ತರ ಕರ್ನಾಟಕದ ಜನತೆಗೆ ಹೆಚ್ಚುಹೆಚ್ಚು ಲಭ್ಯವಾಗಬೇಕು, ಇದರಿಂದ ಅಮೂಲ್ಯ ಜೀವಗಳು ಉಳಿಯುತ್ತವೆ. ಟಾವಿ ಚಿಕಿತ್ಸೆ ಇಲ್ಲಿ ಯಶಸ್ವಿಯಾಗಿರುವುದು ನಮಗೆ ಹೆಮ್ಮೆ ಇದೆ, ವಿಶ್ವದ ಅತ್ಯುತ್ತಮ ಚಿಕಿತ್ಸಾ ವಿಧಾನಗಳು ಇಲ್ಲಿ ಲಭಿಸುವಂತೆ ಮಾಡುವ ನಮ್ಮ ಪ್ರಯತ್ನ ನಿರಂತರವಾಗಿರಲಿದೆ ಎಂದರು.