ಸಾಧನೆ ಯಾರೊಬ್ಬರ ಸ್ವತ್ತಲ್ಲ, ಅದು ಪ್ರತಿಯೊಬ್ಬರ ಸ್ವತ್ತಾಗಿದೆ: ಪೀರಜಾದೆ

ರಾಣೇಬೆನ್ನೂರು: ಸಾಧನೆ ಯಾರೊಬ್ಬರ ಸ್ವತ್ತಲ್ಲ.  ಅದು ಪ್ರತಿಯೊಬ್ಬರ ಸ್ವತ್ತಾಗಿದೆ.  ಸಾಧಿಸಲು ಧೃಢ ನಿಧರ್ಾರ, ಅಚಲ ವಿಶ್ವಾಸ ಮತ್ತು ಸಾಧಿಸು ಧೈರ್ಯ ನಿರಂತರ ಪ್ರಯತ್ನ ಅಗತ್ಯವಿದೆ ಎಂದು  ನಗರಸಭಾ ಕ್ರೀಡಾಂಗಣದ ಆವರಣದಲ್ಲಿರುವ ಆರ್.ಟಿ.ಇ ಎಸ್ ಕಾಲೇಜು ಸಭಾಂಗಣದಲ್ಲಿ ನಡೆದ 2019-20ನೇ ಸಾಲಿನ ಪಠ್ಯೇತರ ಚಟುವಟಿಕೆ, ವಿದ್ಯಾಥರ್ಿ ಒಕ್ಕೂಟ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಜಿಲ್ಲಾ ಪಪೂ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಎಸ್.ಸಿ.ಪೀರಜಾದೆ ಹೇಳಿದರು. 

ಪ್ರಸ್ತುತ ದಿನಮಾನಗಳಲ್ಲಿ ಆಧುನಿಕ ಶಿಕ್ಷಣದತ್ತ ಸಾಗುತ್ತಿದ್ದೇವೆ.  ವೈಚಾರಿಕ ಚಿಂತನೆ ಮತ್ತು ತಂದೆ-ತಾಯಿಗಳಿಗೆ ಗೌರವ ಕಲಿಸಿದ ಗುರುಗಳಿಗೆ ಪೂಜ್ಯ ಭಾವನೆ ಇಟ್ಟುಕೊಂಡು ಸಾಗಿದಾಗ ಮಾತ್ರ ಆ ವಿದ್ಯಾಥರ್ಿಯ ಬದುಕು ಸಾರ್ಥಕತೆ ಪಡೆದು ಸಮಾಜದಲ್ಲಿ ಗೌರವ ಸ್ಥಾನ-ಮಾನ ಹೊಂದಲು ಸಾಧ್ಯವಾಗುವುದು ಅಂತಹ ಸಾಧಕರಲ್ಲಿ ಈ ಕಾಲೇಜಿನ ವಿದ್ಯಾಥರ್ಿಗಳು ಮುಂದಾಗಬೇಕು ಎಂದು ತಾವು ಕಲಿತ ಈ ಶಿಕ್ಷಣ-ಸಂಸ್ಥೆಯ ಸೇವೆಯನ್ನು ಸ್ಮರಿಸಿ ಮಾತನಾಡಿದರು. 

ಸಮಾರಂಭ ಉದ್ಘಾಟಿಸಿ ಮಾತನಾಡಿದ ವಿಶ್ರಾಂತ ಪ್ರಾಚಾರ್ಯ ಎಚ್.ಎ.ಭೀಕ್ಷಾವತರ್ಿಮಠ ಅವರು ಶಿಕ್ಷಣ ಸಂಸ್ಥೆಗಳು ಯಾವುದೇ ಜಾತಿ-ಮತ ಪಂಥ, ಭೇದ-ಭಾವಗಳಿಗೆ ಸಿಮಿತವಾಗದೇ, ಪ್ರಾಂಜಲ ಮನಸ್ಸಿನಿಂದ ಸೇವೆ ಸಲ್ಲಿಸಿದರೆ ಭವಿಷ್ಯದಲ್ಲಿ ಅವುಗಳಿಗೆ ಶಾಶ್ವತವಾದ ಸ್ಥಾನ-ಮಾನಗಳು ಲಭಿಸಲಿವೆ.  ಅಂತಹ ಸಂಸ್ಥೆಯ ಸಾಲಿನಲ್ಲಿ ಆರ್.ಟಿ.ಇ ಎಸ್ ಕಾಲೇಜು ಇರುವುದಾಗಿ ಹೇಳಿದರು. 

ಗ್ರಾಮೀಣ ವಿದ್ಯಾಥರ್ಿಗಳಲ್ಲಿ ಕೀಳರಿಮೆ ಹೆಚ್ಚಾಗಿ ಕಾಡುತ್ತಿದೆ.  ಇದರಿಂದ ಹೊರಬಂದಾಗ ಮಾತ್ರ ತಮ್ಮಲ್ಲಿರುವ ಅಂತ: ಶಕ್ತಿಯ ಪ್ರತಿಭೆ ಹೊರಹೊಮ್ಮಿಸಲು ಸಾಧ್ಯವಾಗುವುದು.  ವಿದ್ಯಾಥರ್ಿಗಳು ಕನಿಷ್ಠ ಎಸ್ಎಸ್ಎಲ್ಸಿ ವರೆಗೆ ಕನ್ನಡ ಮಾತೃ ಭಾಷೆಯಲ್ಲಿಯೇ ಓದಲು-ಬರೆಯಲು ಕಲಿಯಬೇಕು.  ಅದರಿಂದ ಇತರೆ ಎಲ್ಲ ಭಾಷೆಗಳಲ್ಲಿಯೂ ಪ್ರಭುದ್ಧತೆ ಸಾಧಿಸಬಹುದಾಗಿದೆ ಎಂದರು. 

ಭಾರತ ದೇಶವು ಹಳ್ಳಿಗಳ ನಾಡು, ಹಳ್ಳಿಗಳಲ್ಲಿರುವ ಪ್ರತಿಭೆಗಳು ಅಸಾಧ್ಯವಾದವುಗಳಾಗಿವೆ.  ಇಂಗ್ಲೀಷ್ ವ್ಯಾಮೋಹದ ಭ್ರಮೆಯಿಂದ ಹೊರಬರಬೇಕು.  ಇಂಗ್ಲೀಷ್ಗೂ ಬುದ್ಧಿವಂತಿಕೆಗೂ ಸಂಬಂದವಿಲ್ಲ. ಕನ್ನಡ ನಾಡು ನುಡಿ ಶ್ರೀ ರಕ್ಷೆ.  ಇಂಗ್ಲೀಷ್  ಪಾದಗಳನ್ನು ರಕ್ಷಿಸುವ  ಪಾದರಕ್ಷೆ ಇದ್ದಂತೆ ಇರಬೇಕು ಎಂದು ಇತಿಹಾಸದ ಶಿಕ್ಷಣವನ್ನು ಉಲ್ಲೇಖಿಸಿ ಮಾತನಾಡಿದ ಅವರು ಭಾರತ ದೇಶದ ಜ್ಞಾನ ಪೀಠ ಪುರಸ್ಕೃತರು, ವಿಜ್ಞಾನಿಗಳು,      ಇವರಾರು ಇಂಗ್ಲೀಷ್ ಕಲಿತು ಬಂದವರಲ್ಲ.  ಇವರೆಲ್ಲರೂ ಕನ್ನಡಿಗರೇ ಎನ್ನುವದನ್ನು ತಿಳಿಯಬೇಕು ಎಂದರು.  

ಆಧುನಿಕ ಚಲನ ಮಾಧ್ಯಮಗಳು ಇಂದು ಬಹುತೇಕ ಹಿಂಸೆ, ಕಾಮ ರಂಜಿಸಿ ತೋರಿಸುವ ಮಾಧ್ಯಮದಿಂದಾಗಿ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರ ಮರೆಯಾಗುತ್ತಲಿದೆ ಎಂದು ವಿಷಾಧಿಸಿದ ಅವರು 21ನೇ ಶತಮಾನದಲ್ಲಿ ಯಾರೂ ನಮ್ಮ ಅಂಕಪಟ್ಟಿ ನೋಡುವುದಿಲ್ಲ.  ನೋಡುವುದೊಂದೆ ಆತನಲ್ಲಿರುವ ವ್ಯವಹಾರಿಕ ಜ್ಞಾನ, ಜಾಣ್ಮೆ, ಸೃಜನಶೀಲತೆ ಮಾತ್ರ ಎನ್ನುವುದನ್ನು ಯಾರೂ ಮರೆಯಬಾರದು ಎಂದರು. 

ಕಾಲೇಜು ಪ್ರಾಚಾರ್ಯ ಪಿ.ಬಿ.ಕಟಾವಕರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಸಂಸ್ಥೆಯ ಅಧ್ಯಕ್ಷ ಸುಭಾಷ್ ಸಾವುಕಾರ ಅವರು ನೂರಾರು ಸಾಧಕ ವಿದ್ಯಾಥರ್ಿಗಳಿಗೆ ನಗದು ಮೊತ್ತವು ಸೇರಿದಂತೆ ಪ್ರಮಾಣ ಪತ್ರ ವಿತ್ತು ಅಭಿನಂದಿಸಿ ಸನ್ಮಾನಿಸಿದರು. 

ವೇದಿಕೆಯಲ್ಲಿ ಪ್ರೋ|| ಸೀತಾ ಕೋಟಿ, ಶಂಭುನಾಥ ಕಡೂರ, ಹನುಮಂತಪ್ಪ ಮಾಸ್ತಿ, ಸೋಮಶೇಖರ ಹೊನ್ನಾಳಿ, ನಾಗನಾಥ ಹೊಸಮನಿ, ಸುಮಾ ಹೊಸಮನಿ, ಎಚ್.ಜಿ.ಬಸವರಾಜ, ಎಸ್.ಎಲ್.ಕರ್ಲವಾಡ, ಜಯಮ್ಮ, ಭಾಸ್ಕರ, ಫರಹತ್ ದೊಡ್ಡಮನಿ, ಸಚಿನ್ ಹೊಳಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

 ಮೇಘನಾ ದೀಪಾ ಸಂಗಡಿಗರು ಪ್ರಾಥರ್ಿಸಿದರು, ವಿದ್ಯಾಥರ್ಿ ಕಲ್ಯಾಣಾಧಿಕಾರಿ ಡಾ|| ಓ.ಎಫ್.ದ್ಯಾವನಗೌಡ್ರ ಸ್ವಾಗತಿಸಿದರು, ಸಾಂಸ್ಕೃತಿಕ ವೇದಿಕೆ ಕಾಯರ್ಾಧ್ಯಕ್ಷ ಎನ್.ಎಚ್.ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೇರಣಾ ರಕ್ಷಿತಾ ನಿರೂಪಿಸಿ, ಬೀರೇಶ್ ಚೌಡಣ್ಣನವರ ವಂದಿಸಿದರು. ನಂತರ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಮತ್ತು ಪಾಲಕರ ಗಮನ ಸೆಳೆದವು.