ಅಪಘಾತ ತಡೆಗೆ ತರಬೇತಿ ಅಗತ್ಯ : ಡಿಸಿ ರಾಮಚಂದ್ರನ್

ಬಾಗಲಕೋಟೆ25: ಜಿಲ್ಲೆಯಲ್ಲಿ ಸಂಬಂಧಿಸುತ್ತಿರುವ ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ರಸ್ತೆ ಸುರಕ್ಷತೆ ಹಾಗೂ ತಡೆಗಟ್ಟುವ ಕುರಿತಂತೆ ಕಾಯರ್ಾಗಾರ ಹಮ್ಮಿಕೊಳ್ಳುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪರಿಷ್ಕೃತಗೊಳಿಸಲಾದ ರಸ್ತೆ ಸುರಕ್ಷತಾ ನಿಯಮಗಳ ಹಾಗೂ ಅವುಗಳನ್ನು ತಡೆಗಟ್ಟುವ ಕುರಿತು ಕಾಯರ್ಾಗಾರ ಅಗತ್ಯವಾಗಿದ್ದು, ಶೀಘ್ರದಲ್ಲಿ ಏರ್ಪಡಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ಅವರು ರಸ್ತೆ ಸುರಕ್ಷತೆ ಹಾಗೂ ಅವುಗಳನ್ನು ತಡೆಗಟ್ಟುವ ಕುರಿತು ಖಾನ್ ಎಂಬುವವರಿಂದ ಸಭೆಯಲ್ಲಿ ಪಿಪಿಟಿ ಮೂಲಕ ವಿವರವಾಗಿ ಮಾಹಿತಿ ನೀಡಿದರು. ಇವರಿಂದ ಜಿಲ್ಲೆಯಲ್ಲಿ ಈ ಕುರಿತು ತರಬೇತಿ ಕಾಯರ್ಾಗಾರ ಹಮ್ಮಿಕೊಳ್ಳುವ ಬಗ್ಗೆ ಚಿಚರ್ಿಸುವದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು. ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ತೆಗೆದುಕೊಳ್ಳಲು ತಿಳಿಸಿದರು.

ಜಿಲ್ಲೆಯಲ್ಲಿ ಬರುವ ರಾಜ್ಯ ಮತ್ತು ರಾಷ್ಟ್ರ ಹೆದ್ದಾರಿಗಳಲ್ಲಿ ಕ್ರಾಸ್ ಬ್ಯಾರಿಯರ್ಸ್ಗಳು ಎಷ್ಟು ಇವೆ. ಎಷ್ಟು ಆಗಬೇಕಾಗಿದೆ ಹಾಗೂ ಅವುಗಳಿಗೆ ಎಷ್ಟು ಸಮಯ ಬೇಕಾಗುತ್ತದೆ ಎಂಬುದರ ಕುರಿತು ಮುಂದಿನ ಸಭೆಯಲ್ಲಿ ಸಂಪೂರ್ಣ ಮಾಹಿತಿ ನೀಡುವಂತೆ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರು. ಅಲ್ಲದೇ ಜಿಲ್ಲೆಯ ಎಲ್ಲ ಪೆಟ್ರೋಲ್ ಬಂಕ್ಗಳಲ್ಲಿ ಕಡ್ಡಾಯವಾಗಿ ಶೌಚಾಲಯ ಇರಬೇಕು. ಶೌಚಾಲಯ ಇಲ್ಲದಿದ್ದಲ್ಲಿ ಎನ್ಓಸಿ ರದ್ದುಪಡಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. 

ಸಭೆೆಯಲ್ಲಿ ಕೇವಲ ಕುಳಿತುಕೊಳ್ಳಲು ಬರಬಾರದು. ಚಚರ್ಿಸುವ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯೊಂದಿಗೆ ಬಂದು ಕೇಳಿದ ಪ್ರಶ್ನೆಗೆ ಉತ್ತರ ನೀಡುವಂತಿರಬೇಕು. ಇಲ್ಲದಿದ್ದರೆ ಕೆಲಸದಲ್ಲಿ ಬೇಜವಾಬ್ದಾರಿತನ ತೋರುತ್ತಿರುವುದು ಕಂಡುಬರುತ್ತಿದೆ. ಆದ್ದರಿಂದ ಅಧಿಕಾರಿಗಳು ಮುಂದಿನ ಸಭೆಗೆ ಮಾಹಿತಿ ಇಲ್ಲದೆ ಬರುವಂತಿಲ್ಲವೆಂದರು. ನವನಗರ ಬಸ್ ನಿಲ್ದಾಣಕ್ಕೆ ರಾತ್ರಿ ಬಸ್ಗಳು ಬರುವದಿಲ್ಲ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಪತ್ರಿಕೆಯಲ್ಲಿ ಬಂದಿದ್ದು, ಕೂಡಲೇ ಎಲ್ಲ ಬಸ್ಗಳು ನವನಗರದ ಬಸ್ ನಿಲ್ದಾಣಕ್ಕೆ ಕಡ್ಡಾಯವಾಗಿ ಬರುವಂತೆ ನಿದರ್ೇಶನ ನೀಡಲು ಎನ್ಡಬ್ಲುಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಒಟ್ಟು 33 ಅಂಬುಲೆನ್ಸ್ಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ 15 ಟಾಟಾ ವಿಂಗರ್, 11 ಮಾರುತಿ ಓಮಿನಿ, 3 ಟೆಂಪೋ ಟ್ರಾವಲರ್, 2 ಈಚರ್ ವಾಹನಗಳಿದ್ದು, ಪ್ರತಿ ವಾಹನಕ್ಕೆ ತಲಾ ಒಬ್ಬ ಚಾಲಕರಿದ್ದಾರೆಂದು ಸಭೆಗೆ ತಿಳಿಸಿದಾಗ ದಿನ 24 ಗಂಟೆಗಳಲ್ಲಿ ಅಂಬುಲೆನ್ಸ ಕಾರ್ಯನಿರ್ವಹಿಸುತ್ತಿರುವದರಿಂದ ಪ್ರತಿಯೊಂದು ಅಂಬುಲೆನ್ಸ್ಗೆ ಇಬ್ಬರು ಚಾಲಕರು ಕಡ್ಡಾಯವಾಗಿ ಇರಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ಮಾತನಾಡಿ ಜಿಲ್ಲೆಯಲ್ಲಿ ಶೇ.10 ರಷ್ಟು ಅಫಘಾತಗಳು ಕಡಿಮೆಯಾಗುತ್ತಾ ಹೋಗಬೇಕು. ಅಪಘಾತ ಸಂಭವಿಸಿದಾಗ ಪೊಲೀಸ್, ಪ್ರಾದೇಶಿಕ ಸಾರಿಗೆ ಇಲಾಖೆ, ಲೋಕೋಪಯೋಗಿ ಇಲಾಖೆಯವರು ಜಂಟಿಯಾಗಿ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತಾಗಬೇಕು. ಅಂದಾಗ ಮಾತ್ರ ಅಲ್ಲಿ ಸಂಭವಿಸುವ ಅಪಘಾತವನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. 

ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜಯ್ಯ, ಆರೋಗ್ಯ ಇಲಾಖೆಯ ಜಯಶ್ರೀ ಎಮ್ಮಿ, ಎನ್ಡಬ್ಲುಕೆಎಸ್ಆರ್ಟಿಸಿಯ ಡಿಎಂಇ ಗೋಪಾಲಕೃಷ್ಣ, ಜಮಖಂಡಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಯರಾಮ ನಾಯಕ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಯಲ್ಲಪ್ಪ ಪಡಸಾಲಿ ಪ್ರಾರಂಭದಲ್ಲಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

ಬಾಕ್ಸ್ . . . 

46 ಡ್ರಂಕ್ & ಡ್ರೈವ್ ಬ್ರೆಕ್ ಎನಲೈಜರ್ ಖರೀದಿ

ಕುಡಿದು ವಾಹನ ಚಾಲನೆ ಮಾಡುತ್ತಿರುವವರನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಯಿಂದ 46 ಡ್ರಂಕ್ & ಡ್ರೈವ್ ಬ್ರೆಕ್ ಎನಲೈಜರ್ಗಳನ್ನು ಖರೀದಿಸಲಾಗುತ್ತಿದೆ. ಇದರಿಂದ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸುತ್ತಿರುವವರನ್ನು ಪರೀಕ್ಷಿಸಲು ಅನುಕೂಲವಾಗುವದರಿಂದ ಅಪಘಾತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. 

- ಅಭಿನವ ಖರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ