ಬೈಕ್ ಆಟೋ ನಡುವೆ ಅಪಘಾತ: ಒಬ್ಬನಿಗೆ ಗಂಭೀರ ಗಾಯ

ಬೈಕ್ ಆಟೋ ನಡುವೆ ಅಪಘಾತ: ಒಬ್ಬನಿಗೆ ಗಂಭೀರ ಗಾಯ  Accident between bike and auto: One seriously injured

ಲಕ್ಷ್ಮೇಶ್ವರ 25: ಪಟ್ಟಣದ ಸವಣೂರು ರಸ್ತೆಯ ಬಿಸಿಎನ್ ಕಾಲೇಜ್ ಹತ್ತಿರ ಇಂದು ಬೆಳಗ್ಗೆ 8:30 ಸುಮಾರಿಗೆ ಬೈಕ್ ಹಾಗೂ ಆಟೋ ಮಧ್ಯ ಅಪಘಾತ ಸಂಭವಿಸಿದೆ.  

ಅಪಘಾತದಲ್ಲಿ ಲಕ್ಷ್ಮೇಶ್ವರ ಪಟ್ಟಣದ ನಿವಾಸಿ ಸಿದ್ದನಗೌಡರು ಬಳ್ಳೊಳ್ಳಿ ಎಂಬ 62 ವರ್ಷದ ವ್ಯಕ್ತಿಯ ತೆಲೆಗೆ ಪೆಟ್ಟು ಬಿದ್ದು ಗಂಭೀರ ಗಾಯವಾಗಿದ್ದು ಪ್ರಥಮ ಹಂತದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮುಂದಿನ ಚಿಕಿತ್ಸೆಗಾಗಿ ಜಿಮ್ಸ್‌ ಆಸ್ಪತ್ರೆಗೆ ರವಾನಿಸಲಾಗಿದೆ.ಪೊಲೀಸರು ಸ್ಥಳಕ್ಕೆ ಆಗಮಿಸಿ ಅಪಘಾತದ ಬಗ್ಗೆ ಪರೀಶೀಲನೆ ನಡೆಸಿದ್ದಾರೆ