ಕೋಲಾರ ಬಳಿ ಕಾಳಿ ನದಿಗೆ ಟಿಪ್ಪರ್ ಬಿದ್ದು ಅಪಘಾತ
Accident as tipper falls into Kali river near Kolar
ವರದಿ ರವಿಕುಮಾರ ತುಪ್ಪದ
ಕೊಲ್ಹಾರ 01 : ರಾಷ್ಟ್ರೀಯ ಹೆದ್ದಾರಿ 52ರ ಮಾರ್ಗವಾಗಿ ಬಾಗಲಕೋಟೆ ಜಿಲ್ಲೆಯ ಬೀಳಗಿಯಿಂದ ಕೊಲ್ಹಾರದತ್ತ ಬರುತ್ತಿದ್ದ ಟಿಪ್ಪರ್ ಮತ್ತು ಕಾರಿನ ನಡುವೆ ಓವರ್‌ಟೇಕ್ ಮಾಡುವ ವೇಳೆ ಡಿಕ್ಕಿ ಸಂಭವಿಸಿ ನಿಯಂತ್ರಣ ತಪ್ಪಿದ ಟಿಪ್ಪರ್ ಕೊಲ್ಹಾರ ಸೇತುವೆ ಮೇಲಿಂದ ಕೃಷ್ಣಾ ನದಿಗೆ ಉರುಳಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ ಟಿಪ್ಪರ್ ಚಾಲಕ ಸಂತೋಷ ಕೋಟಿ, ಬಾಗಲಕೋಟೆ ಜಿಲ್ಲೆಯ ಬೆಣ್ಣೂರ ಗ್ರಾಮದ ನಿವಾಸಿಯಾಗಿದ್ದು, ಅವರು ಟಿಪ್ಪರ್ ಒಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅದೆ ಟಿಪ್ಪರ್‌ನಲ್ಲಿದ್ದ ಕ್ಲೀನರ್ ಸಂಜು ಮೂಲಗಿ (28), ಬೀದರ್ ಜಿಲ್ಲೆಯ ಯರಣಗಿ ಗ್ರಾಮದ ನಿವಾಸಿಯಾಗಿದ್ದು, ನದಿಯಲ್ಲಿ ಮುಳುಗಿದ ಟಿಪ್ಪರ್ ಮೇಲೆಯೇ ಕುಳಿತುಕೊಂಡು ರಕ್ಷಣೆಗಾಗಿ ಮೊರೆ ಇಟ್ಟಿದ್ದಾನೆ. ನಂತರ ಸ್ಥಳೀಯ ಮೀನುಗಾರರು ತೆಪ್ಪದ ಮೂಲಕ ತೆರಳಿ ಸಂಜುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಚಾಲಕನಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.ಅಪಘಾತಕ್ಕೀಡಾದ ಕಾರಿನ ನೋಂದಣಿ ಸಂಖ್ಯೆ ಏಂ 02 ಂಊ 2275 ಆಗಿದ್ದು, ಘಟನೆ ಬಳಿಕ ಕಾರಿನ ಚಾಲಕ ಹಾಗೂ ಇತರರು ವಾಹನವನ್ನು ಸ್ಥಳದಲ್ಲೇ ಬಿಟ್ಟು ತೆರಳಿರುವ ಮಾಹಿತಿ ಲಭ್ಯವಾಗಿದೆ.ಘಟನೆಯಿಂದ ಸೇತುವೆ ಮೇಲೆ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಘಟನಾ ಸ್ಥಳಕ್ಕೆ ಬೀಳಗಿ ಹಾಗೂ ಕೊಲ್ಹಾರ ಪೊಲೀಸರು ಅಪಘಾತಕ್ಕೀಡಾದ ಕಾರನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಿದ್ದಾರೆಕಲರ್ ಬಾಕ್ಸ್ ಹೇಳಿಕೆ ಕೃಷ್ಣಾ ನದಿಗೆ ಬಿದ್ದ ಟಿಪ್ಪರ್ ನೋಡಿ ಮೀನುಗಾರರು ಬಂದು ನನ್ನನ್ನು ರಕ್ಷಣೆ ಮಾಡಿದ್ದಾರೆ ನನಗೆ ನೀರಿನಲ್ಲಿ ಈಜು ಬರುವುದಿಲ್ಲ - ಸಂಜು ಮೂಲಗಿ ಅಪಘಾತ ಸಂದರ್ಭದಲ್ಲಿದ್ದ ಟಿಪ್ಪರನಲ್ಲಿದ್ದ ವ್ಯಕ್ತಿ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 