ನಗರಸಭೆಯ ಅಧ್ಯಕ್ಷರಿಂದ ಸಾರ್ವಜನಿಕರ ಕುಂದು ಕೊರತೆ ಅಹವಾಲು ಸ್ವಿಕಾರ
ಕೊಪ್ಪಳ 02: ನಗರದ 21ನೇ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ಪದಕಿ ಲೇಓಟ್ ಬಡಾವಣೆಗೆ ಸೋಮವಾರದಂದು ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ಭೇಟಿ ಮಾಡಿ ಸಾರ್ವಜನಿಕರ ಕುಂದು ಕೊರತೆ ಅಹವಾಲು ದೂರು ದುಮಾನಗಳನ್ನು ಸ್ವೀಕರಿಸಿ ಅವರ ಸಮಸ್ಯೆಗಳಿಗೆ ನೇರ ಸ್ಪಂದನೆ ನೀಡಿ ಸಣ್ಣಪುಟ್ಟ ಸಮಸ್ಯೆಗಳನ್ನು ಅಲ್ಲಿಯೇ ಸ್ಥಳದಲ್ಲಿ ಬಗೆಹರಿಸಿದ್ದರು.
ಜೊತೆಯಲ್ಲಿ ಉಪಸ್ಥಿತರಿದ್ದ ನಗರಸಭೆಯ ಪೌರಾಯುಕ್ತರು ಮತ್ತು ಇತರ ಅಧಿಕಾರಿ ವರ್ಗದವರಿಗೆ ಕಟ್ಟುನಿಟ್ಟಿನಸೂಚನೆ ಜಾರಿಗೊಳಿಸಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅವರಿಗೆ ಮೂಲಭೂತ ಅಗತ್ಯ ಸೌಕರ್ಯಗಳನ್ನು ಪೂರೈಸುವಂತಹ ಕೆಲಸ ಮಾಡಬೇಕೆಂದು ಆದೇಶಿಸಿದರು. ಬಡಾವಣೆಯಲ್ಲಿರುವ ವಿದ್ಯುತ್ ದೀಪ ಕುಡಿಯುವ ನೀರು ಚರಂಡಿ ಇತ್ಯಾದಿಗಳನ್ನು ವೀಕ್ಷಣೆ ಮಾಡಿ ಅವ್ಯವಸ್ಥೆಗೊಂಡಿರುವ ಕೆಲಸ ಕಾರ್ಯಗಳನ್ನು ವ್ಯವಸ್ಥೆ ಮಾಡಬೇಕು ದುರಸ್ತಿ ಕಾರ್ಯ ಸರಿಪಡಿಸುವ ಕಾರ್ಯ ತ್ವರಿತಗತಿಯಲ್ಲಿ ಮಾಡಿ ಕೆಲಸಗಳನ್ನು ಪೂರ್ಣಗೊಳಿಸಿ ಬಡಾವಣೆಯ ಜನತೆಗೆ ಅನುಕೂಲಕರ ವಾತಾವರಣ ನಿರ್ಮಿಸುವಂತೆ ಅಧಿಕಾರಿ ವರ್ಗದವರು ಕ್ಷಮಿಸಬೇಕು,ನಿರ್ಲಕ್ಷಿಸಿದರೆ ನಡೆಯುವುದಿಲ್ಲ ತಮ್ಮ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ನಿಭಾಯಿಸಬೇಕೆಂದು ಸೂಚಿಸಿದರು.
ನಗರಸಭೆ ಅಧ್ಯಕ್ಷರು ಪದಕಿಲೇಓಟಿಗೆ ಭೇಟಿ ಮಾಡಿ ಜನರ ಸಮಸ್ಯೆಗಳನ್ನು ಆಲಿಸಿರುವುದಕ್ಕೆ ನಾಗರಿಕರು ಸಂತಸ ವ್ಯಕ್ತಪಡಿಸಿ ತಮ್ಮ ದೂರು ದುಮಾನಗಳನ್ನು ಬೇಕು ಬೇಡಿಕೆಗಳ ಮನವಿ ಪತ್ರವನ್ನು ಅಧ್ಯಕ್ಷರಿಗೆ ಸಲ್ಲಿಸಿದರು ಹಾಗೂ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ಗುರುರಾಜ್ ಹಲಗೇರಿ, ಪೌರಾಯುಕ್ತಾರಾದ ಗಣಪತಿ ಪಾಟೀಲ್ ಕಿರಿಯ ಅಭಿನಂದರಾದ ಸೋಮು, ಕುಡಿಯುವ ನೀರಿನ ವಿಭಾಗದ ವಸಂತ್ ಬೆಲ್ಲದ್, ನೈರ್ಮಲ್ಯ ವಿಭಾಗದ ಲಾಲ್ ಷಾ ಮನಿಯರ್ ಅಲ್ಲದೆ ಪದಕಿ ಲೇಓಟಿನ ನಿವಾಸಿಗಳಾದ ರಘುಪತಿ ಕುಲಕರ್ಣಿ ವಲಿಭಾಷಾ ನಿವೃತ್ತ ಶಿಕ್ಷಕ ಶ್ಯಾಮ ಸುಂದರ್ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು