ಅಳವಂಡಿ ಪೋಲಿಸ್ ಠಾಣೆಯ ಯಲ್ಲಿ ದೌರ್ಜನ್ಯ: ಆರೋಪ: ಕ್ರಮಕ್ಕೆ ಒತ್ತಾಯ

ಅಳವಂಡಿ ಪೋಲಿಸ್ ಠಾಣೆಯ ಯಲ್ಲಿ ದೌರ್ಜನ್ಯ: ಆರೋಪ: ಕ್ರಮಕ್ಕೆ ಒತ್ತಾಯ Abuse at Alavandi Police Station: Allegations: Demand for action

ಕೊಪ್ಪಳ 20: ತಾಲೂಕಿನ ಅಳವಂಡಿ ಪೊಲೀಸ್ ಠಾಣೆಯ ಪಿಎಸ್‌ಐ ಪ್ರಹ್ಲಾದ್ ನಾಯಕ್ ಮತ್ತು ಠಾಣಾ ಕಾನಿಸ್ಟೇಬಲ್ ರವರು ವಿಚಾರಣೆ ನೆನಪದಲ್ಲಿ ತೀವ್ರ ತೊಂದರೆ ಉಂಟು ಮಾಡಿ ಅವಾಚ್ಯ ಶಬ್ದಗಳಿಂದ ಬೈದು ನಮಗೆ ಹಿಂಸೆ ನೀಡಿದ್ದಾರೆಂದು  ಬೋಚನಹಳ್ಳಿ ಗ್ರಾಮದ ಯಲ್ಲಪ್ಪ ಮೇಟಿ ಮತ್ತು ಬಸವರಾಜ್ ಬಂಡಿ ರವರು ಜಂಟಿಯಾಗಿ ಆರೋಪಿಸಿ ಅವರ ವಿರುದ್ಧ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ, ಈ ಕುರಿತು ಶನಿವಾರದಂದು ನಗರದ ಪತ್ರಿಕಾ ಭವನದಲ್ಲಿ ಏರಿ​‍್ಡಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಆರೋಪಿಸಿ ಅವರ ವಿರುದ್ಧ  ಇಲಾಖೆಗೆ ಮತ್ತು ಸರ್ಕಾರಕ್ಕೆ ದೂರು ನೀಡಿ ಒತ್ತಾಯಿಸಿದ್ದಾರೆ,

ಕಾನೂನು ವಿಧ್ಯಾರ್ಥಿಗಳಾದ ಯಲ್ಲಪ್ಪ ತಂದೆ ಸುರೆಶಪ್ಪ ಮೇಟಿ (ಅಂಗವಿಕಲ) ವಯಸ್ಸು : 26, ವಿಳಾಸ : ಬೋಚನಹಳ್ಳಿ ಮತ್ತು ಬಸವರಾಜ ತಂದೆ ಗೋಣೆಪ್ಪ ಬಂಡಿ ವಯಸ್ಸು : 26, ವಿಳಾಸ : ಬೋಚನಹಳ್ಳಿ,  ರವಿವಾರ 14-ರಂದು ರಾತ್ರಿ 8:30 ಕ್ಕೆ ಅಳವಂಡಿಯ ಪೋಲಿಸ್ ಠಾಣೆಗೆ ಹೋಗಿದ್ದೆವು ಕಾರಣ ನನ್ನ ಸ್ನೇಹಿತನಾದ ಮರಿತಿಮ್ಮಪ್ಪನನ್ನು ಸಿವಿಲ್ ವ್ಯಾಜ್ಯಕ್ಕೆ ಸಂಬಂದಿಸಿದಂತೆ ನೋಟಿಸ್ ಕೊಡದೆ ಕರೆದುಕೊಂಡು ಹೊಗಿದ್ದರು, ಇದನ್ನು ಪ್ರಶ್ನೆ ಮಾಡಲು ನಾವುಗಳು ಠಾಣೆಗೆ ಹೋದಾಗ ಮರಿತಿಮ್ಮಪ್ಪನ ಮೇಲೆ ಠಾಣೆಯಲ್ಲಿ ಹಲ್ಲೆ ಮಾಡಿದ್ದರು ಈ ಘಟನೆಯನ್ನು ಯಲ್ಲಪ್ಪರವರು ತಮ್ಮ ಮೋಬೈಲ್ ನಲ್ಲಿ ಸೆರೆಹಿಡಿಯುತ್ತಿದ್ದರು ಅದನ್ನು ಗಮನಿಸಿದ ಪಿ.ಎಸ್‌. ಐ ಪ್ರಹ್ಲಾದ್ ನಾಯಕ್ ರವರು ಮೊಬೈಲ್ ಕಸಿದುಕೊಂಡು, ಅವಾಚ್ಯ ಶಬ್ದಗಳಿಂದ ನಿಂದಿಸಿ ಅಂಗವಿಕಲನಾದ ಯಲ್ಲಪ್ಪರವರ ಮೇಲೆ ಮನಬಂದಂತೆ ದೈಹಿಕ ಹಲ್ಲೆ ನಡೆಸಿದರು,