ಅಬಕಾರಿ ಇಲಾಖೆ: ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿಯ ಆರೋಪಿಗಳನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲು

ಅಬಕಾರಿ ಇಲಾಖೆ: ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿಯ ಆರೋಪಿಗಳನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲು Excise Department: Those accused of illegally brewing liquor arrested and case registered

ಲೋಕದರ್ಶನ ವರದಿ 

ಧಾರವಾಡ 24: ಬೆಳಗಾವಿಯ ಅಬಕಾರಿ ಅಪರ ಆಯುಕ್ತರು, ಅಬಕಾರಿ ಜಂಟಿ ಆಯುಕ್ತರು ಹಾಗೂ ಧಾರವಾಡ ಅಬಕಾರಿ ಉಪ ಆಯುಕ್ತರು ಮತ್ತು ಅಬಕಾರಿ ಅಧೀಕ್ಷಕರು ಉಪ ವಿಭಾಗ ಅವರ ಮಾರ್ಗದರ್ಶನದಲ್ಲಿ ಜೂನ್ 22, 2026 ರಂದು ನವಲಗುಂದ ವಲಯ ವ್ಯಾಪ್ತಿಯ ಅಣ್ಣಿಗೇರಿ ಶರಹದ್ದಿನಲ್ಲಿ ಬರುವ ಕಣಗಲ್ಲ ಹಳ್ಳದಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿಯನ್ನು ತಯಾರಿಸುವಾಗ ಅಬಕಾರಿ ನೀರೀಕ್ಷಕ ರಾಮು ಆರೆನ್ನವರ, ಉಪ ನೀರೀಕ್ಷಕ ಅನುರಾಧ ಓಲೇಕಾರ ಮತ್ತು ವಾಹನ ಚಾಲಕ ಮಲ್ಲಿಕಾರ್ಜುನ ವಾಲೀಕಾರ, ಗೃಹ ರಕ್ಷಕ ಕಲ್ಲಯ್ಯ ಹೊಸಮನಿ ಮತ್ತು ಶರೀಫ್ ಹುಡೇದ ಸಿಬ್ಬಂದಿ ಹಾಗೂ ಪಂಚರುಗಳಾದ ಮಲ್ಲಪ್ಪ ಹನುಮಂತಪ್ಪ ಮುಳಗುಂದ (ಅಣ್ಣಿಗೇರಿ ಪುರಸಭೆಯ ಅಟೆಂಡರ್), ವಿಜಯಕುಮಾರ ಎಸ್ ಕುಂಬಿಮಠ (ಅಣ್ಣಿಗೇರಿಯ ಪುರಸಭೆಯ ದ್ವಿ.ದ.ಸ) ಅವರೊಂದಿಗೆ ಆರೋಪಿಗಳನ್ನು ದಸ್ತಗಿರಿ ಮಾಡಿ ಕರ್ನಾಟಕ ಅಬಕಾರಿ ಕಾಯ್ದೆ 1965 ರಡಿಯಲ್ಲಿ ಗುನ್ನೆ ನಂ-99/2025-26 ರ ಪ್ರಕರಣವನ್ನು ದಾಖಲಿಸಿದೆ.