ಭಾರತೀಯ ಮಹಿಳಾ ಸೈನ್ಯದಲ್ಲಿ ಆಯ್ಕೆಯಾಗಿರುವ ಆರತಿಗೆ ಸನ್ಮಾನ

ಲೋಕದರ್ಶನ ವರದಿ

ಶೇಡಬಾಳ 11: ಭಾರತೀಯ ಮಹಿಳಾ ಸೈನ್ಯದಲ್ಲಿ ಆಯ್ಕೆಯಾಗಿರುವ ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಏಕೈಕ ಮಹಿಳೆ ಅಭ್ಯರ್ಥಿ  ಕುಮಾರಿ ಆರತಿ ಜಬರದಸ್ತ ತಳವಾರ ಇವಳನ್ನು ಶೇಡಬಾಳದಲ್ಲಿ ರವಿವಾರ ದಿನಾಂಕ 10 ರಂದು ಸತ್ಕರಿಸಿ ಸನ್ಮಾನಿಸಲಾಯಿತು. ಭಾರತೀಯ ಮಹಿಳಾ ಸೈನ್ಯದಲ್ಲಿ ಆಯ್ಕೆಯಾಗಿರುವ ಶೇಡಬಾಳದ ಕುಮಾರಿ ಆರತಿ ಜಬರದಸ್ತ ತಳವಾರ ಹಾಗೂ ಅವರ ತಂದೆ ತಾಯಿಯನ್ನು ಶೇಡಬಾಳ ಪಟ್ಟಣ  ಪಂಚಾಯತ ಸದಸ್ಯ ವೃಷಭ ಚೌಗಲೆ ಕುಟುಂಬ ವರ್ಗದವರು ಈ ಸತ್ಕಾರ ಸಮಾರಂಭವನ್ನು  ಆಯೋಜಿಸಿದ್ದರು. ಇತ್ತಿಚೇಗೆ ಬೆಳಗಾವಿಯಲ್ಲಿ ಪ್ರಪ್ರಥಮ ಬಾರಿಗೆ ಭಾರತೀಯ ಮಹಿಳಾ ಸೈನ್ಯ ಭರ್ತಿರ್ಯಾಲಿ ಜರುಗಿತ್ತು.  ಸುಮಾರು ಲಕ್ಷಾಂತರ ಮಹಿಳಾ ಅಭ್ಯರ್ಥಿಗಳ ಭಾಗವಹಿಸಿದ್ದರು. ಅವರಲ್ಲಿ  100 ಮಹಿಳಾ ಅಭ್ಯರ್ಥಿಗಳನ್ನು  ಆಯ್ಕೆ ಮಾಡಿದ್ದರು. ಅದರಲ್ಲಿ  ಶೇಡಬಾಳ ಪಟ್ಟಣದ  ಆರತಿ ತಳವಾರ ಕಾಗವಾಡ ತಾಲೂಕಿನಲ್ಲಿಯೇ ಏಕೈಕ ಮಹಿಳಾ ಅಭ್ಯಥರ್ಿಯಾಗಿ ಆಯ್ಕೆಯಾಗಿದ್ದಾಳೆ. ಇವಳ ಸಾಧನೆಯನ್ನು ಮೆಚ್ಚಿ ವೃಷಭ ಚೌಗಲೆ ಕುಟುಂಬ ವರ್ಗ ಸತ್ಕರಿಸಿ ಸನ್ಮಾನಿಸಿದರು. ಈ ಸತ್ಕಾರ ಸಮಾರಂಭದಲ್ಲಿ ಶೇಡಬಾಳ ಪ ಪಂ ಸದಸ್ಯ ವೃಷಭ ಚೌಗಲೆ,  ಕಾಗವಾಡದ ವಿಶ್ರಾಂತ ನ್ಯಾಯಾಧೀಶ ಪ್ರಕಾಶ ಕಠಾರೆ, ಕೋಲ್ಹಾಪೂರದ ಅಜೀತ ಪಾಟೀಲ, ಬಾಪುಸಾಬ ರೂಗೆ, ಸುನೀಲ ಇರಾಜ, ಪ್ರತಿಭಾ ಚೌಗಲೆ, ಶೋಭಾ ಕಠಾರೆ, ವೈಶಾಲಿ ಪಾಟೀಲ, ಶಕುಂತಲಾ ರೂಗೆ, ಜಯಮಾಲಾ ಇರಾಜ, ಜಬರದಸ್ತ ತಳವಾರ, ಸಂಗೀತಾ ತಳವಾರ, ಸೇರಿದಂತೆ ಅನೇಕರು ಇದ್ದರು.