ಅಮೀರ್ ಹಮ್ಜಾಗೆ ಕುವೆಂಪು ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ
Aamir Hamza wins Kuvempu Sadbhavana National Award
ಕೊಪ್ಪಳ 19: ನಗರದ ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ವೃತ್ತಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಕಳೆದ ವರ್ಷ ನಿವೃತ್ತಿಗೊಂಡಅಮೀರ್ ಹಮ್ಜಾ. ಏ. ನದಾಫ್‌ರವರನ್ನು ವಿಶ್ವ ಮಾನವ ಕುವೆಂಪು ಸದ್ಭಾವನಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡ ಲಾಗಿದ್ದು ಇದೆ ಜುಲೈ 27ರ ರವಿವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಲಿರುವ ಸರ್ವಜನಾಂಗದ ಶಾಂತಿಯ ತೋಟ ಕಾರ್ಯಕ್ರಮದ ಅಡಿಯಲ್ಲಿ ನೃತ್ಯ ಪರ್ವ ಸಮಾರಂಭದಲ್ಲಿ ದರ್ಶನ್ ಸೋಶಿಯಲ್ ಮತ್ತು ಕಲ್ಚರಲ್ ಅಕಾಡೆಮಿ ಬೆಂಗಳೂರು ವತಿಯಿಂದ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಸದರಿಯವರ ವೃತ್ತಿ ಶಿಕ್ಷಣದ ಉತ್ತಮ ಸೇವೆಗಾಗಿ ಹಾಗೂ ಸಮಾಜದಲ್ಲಿಉತ್ತಮಜನಪ್ರಿಯ ಶಿಕ್ಷಕನೆಂದು ಕರೆಯಲ್ಪಡುವಅಮೀರ್ ಹಮ್ಜಾ, ಏ. ನದಾಫ್‌ರವರಿಗೆ ಈ ಪ್ರಶಸ್ತಿ ಲಭಿಸಿರುವದು ಅವರ ಸಾಧನೆಗೆ ಹಿಡಿದಕೈಗನ್ನಡಿಯಾಗಿದೆ ,ಈ ಹಿಂದೆಯು ಸಹ ಅವರಿಗೆ ಹಲವು ಪ್ರಶಸ್ತಿ ಲಭಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ , ಕೊಪ್ಪಳದ ಅವರ ಸ್ನೇಹಿತರ ಬಳಗ ಮತ್ತು ಶಿಷ್ಯಂದರ ಬಳಗ ದಲ್ಲಿ ಹರ್ಷದ ವಾತಾವರಣ ನಿರ್ಮಾಣಗೊಂಡಿದೆ, ಸದರಿ ಮಹತ್ವದ ವಿಶ್ವಮಾನವ ಕುವೆಂಪು ಸದ್ಭಾವನಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಅವರುಆಯ್ಕೆಗೊಂಡಿರುವುದಕ್ಕೆ ಕೊಪ್ಪಳದಲ್ಲಿ ಅವರಅಭಿಮಾನಿ ಬಳಗ ಸಂಭ್ರಮಿಸಿ ಅವರಿಗೆ ಅಭಿನಂದಿಸಿದ್ದಾರೆ,
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 