ಎಟಿಪಿ ಚಾಲೆಂಜರ್: ಭಾರತದ ಸಸಿಕುಮಾರ್ ಮುಕುಂದ್ಗೆ ಸೋಲು

 ಚಡೀಗಢ, ಆ 21      ಭಾರತದ ಸಸಿಕುಮಾರ್ ಮುಕುಂದ್ ಅವರು ಇಟಲಿಯಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಎಸ್ಟೋನಿಯಾದ ಜುರ್ಗೆನ್ ಜೋಪ್ ಅವರ ವಿರುದ್ಧ 7-5, 6-0 ನೇರ ಸೆಟ್ಗಳಲ್ಲಿ ಸೋಲು ಅನುಭವಿಸಿದ್ದಾರೆ.  ಮಂಗಳವಾರ ನಡೆದ ಪಂದ್ಯದಲ್ಲಿ ಜೋಪ್ ನಾಲ್ಕು ಬ್ರೇಕಿಂಗ್ ಪಾಯಿಂಟ್ಗಳಲ್ಲಿ ನಾಲ್ಕನ್ನೂ ಉಳಿಸಿಕೊಂಡರು. ಬಳಿಕ ಐದರಲ್ಲಿ ಎರಡು ಬ್ರೇಕಿಂಗ್ ಪಾಯಿಂಟ್ಗಳನ್ನು ಉಳಿಸಿಕೊಂಡಿದ್ದಾರೆ.  ಭಾರತದ ಮುಕುಂದ್ ಅವರು ನಾಲ್ಕು ಬ್ರೇಕಿಂಗ್ ಪಾಯಿಂಟ್ಗಳಲ್ಲಿ ಮೂರನ್ನು ಉಳಿಸಿಕೊಂಡರು. ನಂತರ ಸಿಕ್ಕ ನಾಲ್ಕು ಬ್ರೇಕಿಂಗ್ ಪಾಯಿಂಟ್ಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು.  ಎಸ್ಟೋನಿಯಾದ ಆಟಗಾರ ಪಂದ್ಯದ ಗೆಲುವಿನಲ್ಲಿ ಒಂಬತ್ತು ಏಸ್ ಅಂಕಗಳನ್ನು ಪಡೆದುಕೊಂಡಿದ್ದರು. ಶೇ. 69 ರಷ್ಟು ಮೊದಲನೇ ಸರ್ವಿಸ್ನಲ್ಲಿ ಯಶ ಕಂಡಿದ್ದರು. ಮುಕುಂದ್ ನಾಲ್ಕು ಏಸ್ ಅಂಕ ಪಡೆದು ಶೇ. 48ರಷ್ಟು ಮಾತ್ರ ಮೊದಲನೇ ಸರ್ವಿಸ್ನಲ್ಲಿ ಯಶಸ್ವಿಯಾಗಿದ್ದರು.