ಎಟಿಪಿ ಚಾಲೆಂಜರ್: ಸೆಮಿಫೈನಲ್ ತಲುಪಿದ ಬಾಲಾಜಿ-ವಿಷ್ಣು ಜೋಡಿ

ಮೀರ್ಬುಶ್, ಆ 17            ಎನ್ ಶ್ರೀರಾಮ್ ಬಾಲಾಜಿ ಹಾಗೂ ವಿಷ್ಣುವರ್ಧನ್ ಭಾರತದ ಜೋಡಿಯು ಜರ್ಮನಿಯ ಮೀರ್ಬುಶ್ನಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದೆ. 

ಒಂದು ಗಂಟೆ 12 ನಿಮಿಷಗಳ ಕಾಲ ನಡೆದ ಎಟಿಪಿ ಚಾಲೆಂಜರ್ ಕ್ವಾರ್ಟರ್ಫೈನಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತದ ಜೋಡಿಯು ಜೆಕ್ ಗಣರಾಜ್ಯದ ರೋಮನ್ ಜೆಬಾವಿ ಮತ್ತು ನೆದರ್ಲೆಂಡ್ನ ಮ್ಯಾಟ್ವೆ ಮಿಡೆಲ್ಕೂಪ್ ಅಗ್ರ ಕ್ರಮಾಂಕದ ಜೋಡಿಯ ವಿರುದ್ಧ 7-6 (2), 6-3 ಅಂತರದಲ್ಲಿ ಗೆದ್ದು ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿದೆ.  

 ಬಾಲಾಜಿ-ವಿಷ್ಣು ಜೋಡಿಯ ಗೆಲುವಿನಲ್ಲಿ ಏಳು ಏಸ್ ಅಕಗಳು ಒಳಗೊಂಡಿದ್ದವು. ಇದರಲ್ಲಿ ಎರಡು ಡಬಲ್ಸ್ ಫಾಲ್ಟ್ಗಳು ಇದ್ದವು. ಶೇ.80 ರಷ್ಟು ಮೊದಲ ಸರ್ವಿಸ್ನಲ್ಲಿ ಭಾರತದ ಯಶ ಕಂಡರೆ, ಮೊದಲ ಸವರ್ಿಸ್ನ 44ರಲ್ಲಿ 35 ಪಾಯಿಂಟ್ಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿತು. ಎರಡನೇ ಸರ್ವಿಸ್ನಲ್ಲಿ 11ರಲ್ಲಿ 7 ಅಂಕಗಳಲ್ಲಿ ಜಯ ಸಾಧಿಸಿತ್ತು.  

ರೋಮನ್ ಜೆಬಾವಿ ಮತ್ತು ಮ್ಯಾಟ್ವೆ ಮಿಡೆಲ್ಕೂಪ್ ಜೋಡಿಯು ಐದು ಡಬಲ್ಸ್ ಫಾಲ್ಟ್ ಮಾಡಿದೆ. ಇದರಲ್ಲಿ ಎರಡು ಏಸ್ ಅಂಕಗಳನ್ನು ಹೊಂದಿತ್ತು. ಮೊದಲ ಸರ್ವಿಸ್ನಲ್ಲಿ 37ರಲ್ಲಿ 21 ಪಾಯಿಂಟ್ಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿತು. ಎರಡನೇ ಸರ್ವಿಸ್ನಲ್ಲಿ 29ರಲ್ಲಿ 15 ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿತ್ತು.