ಬೀಜಿಂಗ್, ಫೆ 20, ಕೊರೊನಾವೈರಸ್ (ಕೊವಿದ್ -19) ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟ ತೀವ್ರಗೊಳಿಸುವ ನಿಟ್ಟಿನಲ್ಲಿ ಲಾವೋಸ್ ರಾಜಧಾನಿಯಲ್ಲಿ ಆಯೋಜಿಸಲಾಗಿರುವ ಚೀನಾ ಮತ್ತು ಆಸಿಯಾನ್ ಒಕ್ಕೂಟದ ವಿದೇಶಾಂಗ ಸಚಿವರ ವಿಶೇಷ ಸಭೆಯಲ್ಲಿ ಪಾಲ್ಗೊಳ್ಳಲು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ಹನೋಯ್ ತಲುಪಿದ್ದಾರೆ. ಕೊರೊನವೈರಸ್ ಕೇಂದ್ರೀಕರಿಸಿದ ಈ ಸಭೆಯು ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಮುಂದಿನ ಹಂತಗಳನ್ನು ಚರ್ಚಿಸಲು ಸಮಯೋಚಿತ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ, ಸವಾಲನ್ನು ಎದುರಿಸಲು ಮತ್ತು ಚೀನಾ-ಏಷಿಯಾನ್ ಸಮುದಾಯವನ್ನು ನಿರ್ಮಿಸಲು ಪ್ರಾದೇಶಿಕ ಬಣದೊಂದಿಗೆ ಕೈಜೋಡಿಸುವ ಚೀನಾದ ದೃಢಸಂಕಲ್ಪಕ್ಕೆ ಸಾಕ್ಷಿಯಾಗಲಿದೆ. ಹೆಚ್ಚುತ್ತಿರುವ ಇಂದಿನ ಅಂತರ್ ಸಂಪರ್ಕಿತ ಜಗತ್ತಿನಲ್ಲಿ ಪ್ರಾದೇಶಿಕ, ರಾಷ್ಟ್ರ ಅಥವಾ ಜನಾಂಗದ ಹೊರತಾಗಿಯೂ ಪ್ರಮುಖ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ಯಾರೊಬ್ಬರೂ ಚೀನಾವನ್ನು ವಿಶ್ವದ ಇತರ ಭಾಗಗಳಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಸಭೆಯ ಆಯೋಜಕರು ತಿಳಿಸಿದ್ದಾರೆ. ಚೀನಾ ಮತ್ತು ಆಸಿಯಾನ್ ದೇಶಗಳು ಸೇರಿದಂತೆ 20 ಕ್ಕೂ ಹೆಚ್ಚು ದೇಶಗಳಲ್ಲಿ ಈಗಾಗಲೇ ಕೊರೊನಾ ಸೋಂಕು ವರದಿಯಾಗಿರುವುದರಿಂದ, ಎಲ್ಲಾ ರಾಷ್ಟ್ರಗಳು ಒಟ್ಟಾಗಿ ಸಮನ್ವಯತೆಯಿಂದ ಹೋರಾಡುವುದು ಪ್ರಸಕ್ತ ಸನ್ನಿವೇಶದಲ್ಲಿ ಅತಿ ಮುಖ್ಯವಾಗಿರುವುದರಿಂದ ಹನೋಯ್ ನಲ್ಲಿ ಸಭೆ ಆಯೋಜಿಸಲಾಗಿದೆ. ಸೋಂಕು ತಡೆಗೆ ಚೀನಾ ಜವಾಬ್ದಾರಿಯುತ ಹೊಣೆಗಾರಿಕೆಯನ್ನು ತೋರಿದೆ. ಕಠಿಣ ಕ್ರಮಗಳನ್ನು ತೆಗೆದುಕೊಂಡು. ಮಹಾ ತ್ಯಾಗಗಳನ್ನು ಮಾಡಿದೆ. ದೇಶದ ಒಳಗೆ ಮತ್ತು ಹೊರಗೆ ರೋಗದ ಹರಡುವಿಕೆಯನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅಲ್ಲದೆ,ಎಲ್ಲ ರಾಷ್ಟ್ರೀಯ ಸಂಪನ್ಮೂಲಗಳನ್ನು ಸಂಗ್ರಹಿಸುತ್ತಿದೆ