ನಾಳೆ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಬಳ್ಳಾರಿ28: ಆಶಾ  ಕಾರ್ಯಕರ್ತೆಯರರಿಗೆ 12 ಸಾವಿರ ಮಾಸಿಕ ಗೌರವಧನ ಖಾತರಿಪಡಿಸಬೇಕು ಮತ್ತು ಆರೋಗ್ಯ ರಕ್ಷಣಾ ಕಿಟ್ಗಳನ್ನು ನೀಡಬೇಕೆಂದು ಒತ್ತಾಯಿಸಿ ಜೂನ್ 30 ರಂದು ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕತರ್ೆಯರ ಸಂಘದ ಕಾರ್ಯದಶರ್ಿ ಡಿ. ನಾಗಲಕ್ಷ್ಮಿ ತಿಳಿಸಿದರು. 

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನರ್ಾಟಕ ರಾಜ್ಯ ಸಂಯುಕ್ತ ಆಶಾ  ಕಾರ್ಯಕರ್ತೆಯರರ ಸಂಘ ಮತ್ತು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 

ಕಳೆದ ಮೂರು ತಿಂಗಳಿಂದ ನಿರಂತರವಾಗಿ ಆಶಾ ಕಾರ್ಯಕತರ್ೆಯರು ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಸನ್ಮಾನ, ಹೂವಿನ ಸುರಿಮಳೆ ಅಗತ್ಯವಿಲ್ಲ, ಬದಲಿಗೆ ಸಕರ್ಾರ ಅವರಿಗೆ ಸೂಕ್ತ ಭತ್ಯೆ ನೀಡಬೇಕು. ಸಹಕಾರ ಇಲಾಖೆ ಮಂಜೂರು ಮಾಡಿದ್ದ 3 ಸಾವಿರ ರೂ ಹಣ 42 ಸಾವಿರ ಆಶಾ ಕಾರ್ಯಕತರ್ೆಯರಲ್ಲಿ 10 ಸಾವಿರ ಮಂದಿಗೆ ಇನ್ನು ಸರಿಯಾಗಿ ದೊರಕಿಲ್ಲ ಎಂದು ದೂರಿದರು. 

        ಹಕ್ಕೊತ್ತಾಯಗಳು : ಆಶಾ ಕಾರ್ಯಕತರ್ೆಯರಿಗೆ ಪ್ರೋತ್ಸಾಹ ಧನ ಮತ್ತು ಗೌರವ ಧನ ಎರಡೂ ಸೇರಿ ತಿಂಗಳಿಗೆ 12 ಸಾವಿರ ರೂ ನೀಡಬೇಕು., ಆಶಾ ಕಾರ್ಯಕತರ್ೆಯರಿಗೆ ಆರೋಗ್ಯ ತಪಾಸಣೆ ಮಾಡಬೇಕು. ಕೊರೊನಾ ವೈರಸ್ ಪಾಸಿಟಿವ್ ಬಂದರೆ ಉಚಿತ ಚಿಕಿತ್ಸೆ ಜೊತೆಗೆ ಚಿಕಿತ್ಸೆಯ ಅವಧಿಯಲ್ಲಿಯೂ ಸಂಪೂರ್ಣ ಗೌರವ ಧನ ಸಿಗುವಂತೆ ನೋಡಿಕೊಳ್ಳಬೇಕು. ಮಾಸ್ಕ್, ಸ್ಯಾನಿಟೈಜರ್, ಪೇಸ್ ಶೀಲ್ಡ್ ಸಮಪರ್ಕವಾಗಿ ನೀಡಬೇಕೆಂದು ಆಗ್ರಹಿಸಿದ್ದಾರೆ.