ವಾಷಿಂಗ್ಟನ್ ಮಾರ್ಚ್ 6 ರಷ್ಯಾ ಮತ್ತು ಚೀನಾದೊಂದಿಗೆ ತ್ರಿಪಕ್ಷೀಯ ಶಸ್ತ್ರಾಸ್ತ್ರ ನಿಯಂತ್ರಣ ಕ್ರಮ ಪ್ರಸ್ತಾಪಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ. ಅನಗತ್ಯ ಮತ್ತು ದುಬಾರಿ ಶಸ್ತ್ರಾಸ್ತ್ರ ಸ್ಪರ್ಧೆ, ಪೈಪೋಟಿಯನ್ನು ತಡೆಯಲು ರಷ್ಯಾ ಮತ್ತು ಚೀನಾದೊಂದಿಗೆ ದಿಟ್ಟ, ಹೊಸ ತ್ರಿಪಕ್ಷೀಯ ಶಸ್ತ್ರಾಸ್ತ್ರ ನಿಯಂತ್ರಣ ಉಪಕ್ರಮವನ್ನು ಪ್ರಸ್ತಾಪಿಸಲಿರುವುದಾಗಿಯೂ ಹೇಳಿದ್ದಾರೆ. ಎಲ್ಲರಿಗೂ ಉತ್ತಮ, ಸುರಕ್ಷಿತ ಮತ್ತು ಸಮೃದ್ಧ ಭವಿಷ್ಯವನ್ನು ನಿರ್ಮಿಸಲು ಒಟ್ಟಾಗಿ ಕೆಲಸ ಮಾಡುವುದಾಗಿಯೂ ಟ್ರಂಪ್ ಈ ಸಂದರ್ಭದಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದದ ಐವತ್ತನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಅವರು ಈ ಹೊಸ ಭರವಸೆಯ ಮಾತು ಹೇಳಿದ್ದಾರೆ.