ಸಿರಿಯಾದೊಂದಿಗೆ ಅರಬ್ ರಾಷ್ಟ್ರಗಳ ಸಂಬಂಧ ಪುನರ್ ಸ್ಥಾಪನೆ

ಸಿರಿಯಾ ಮಾರ್ಚ್ 6, ಹೆಚ್ಚಿನ ಅರಬ್ ರಾಷ್ಟ್ರಗಳು ಸಿರಿಯಾದೊಂದಿಗಿನ ಸಂಬಂಧವನ್ನು ಪುನಃಸ್ಥಾಪಿಸಿವೆ  ಎಂದು , ಸಿರಿಯಾ  ಅಧ್ಯಕ್ಷ ಬಶರ್ ಅಸ್ಸಾದ್ ಗುರುವಾರ ಪ್ರಸಾರವಾದ ರೊಸ್ಸಿಯಾ  ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ . ಆದರೆ ಪಶ್ಚಿಮದ ಒತ್ತಡಕ್ಕೆ ಹೆದರಿ ಇದಕ್ಕೆ ರು ಹೆಚ್ಚಿನ ಪ್ರಚಾರ ಸಿಗದಂತೆ  ಮಾಡಿದ್ದಾರೆ ಎಂದು ಅವರು ದೂರಿದ್ದಾರೆ. "ಹೆಚ್ಚಿನ ಅರಬ್ ರಾಷ್ಟ್ರಗಳು ಸಿರಿಯಾದೊಂದಿಗಿನ ಸಂಬಂಧವನ್ನು ಪುನರ್ ಸ್ಥಾಪಿಸಿವೆ, ಆದರೆ ಸಾರ್ವಜನಿಕ , ಒತ್ತಡಕ್ಕೆ ಹೆದರಿಲ್ಲ. ಈ ದೇಶಗಳು ಸಿರಿಯಾಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿವೆ ಮತ್ತು ಭಯೋತ್ಪಾದನೆಯನ್ನು ಕೊನೆಗಾಣಿಸಬೇಕೆಂದು  ನಾವು ಸಹ  ಬಯಸುತ್ತೇವೆ ಎಂದೂ  ಅಸ್ಸಾದ್ ಹೇಳಿದ್ದಾರೆ."ಆದಾದರೂ ಸಹ ನಿರ್ದಿಷ್ಟವಾಗಿ, ಅಮೆರಿಕದ ಒತ್ತಡದಿಂದ   ಈ ದೇಶಗಳನ್ನು ದೂರವಿರಿಸಲು ಮತ್ತು ಸಿರಿಯಾದಲ್ಲಿ ತಮ್ಮ ರಾಯಭಾರ ಕಚೇರಿಗಳನ್ನು ತೆರೆಯದಂತೆ ಒತ್ತಾಯಿಸಿದೆ , ಇದು ವಿಶೇಷವಾಗಿ ಕೊಲ್ಲಿ ರಾಷ್ಟ್ರಗಳಿಗೆ ಸಂಬಂಧಿಸಿದೆ  ಎಂದೂ  ಸಿರಿಯನ್ ನಾಯಕ ಒತ್ತಿಹೇಳಿದ್ದಾರೆ.