ಎ.ಪಿ.ಜೆ ಅಬ್ದುಲ್ ಕಲಾಂ ಸಂಸ್ಥೆಯ ಕಾರ್ಯ ಶ್ಲಾಘನೀಯ : ಸಿ.ಆರ್.ಪಿ ಮಂಚದ
APJ Abdul Kalam's work commendable: CRP Bench
ಮಹಾಲಿಂಗಪುರ 29 : ಇಂದಿನ ಆಧುನಿಕ ಯುಗದಲ್ಲಿ ಸರ್ಕಾರದಿಂದ ಕೇಳುವವರೇ ಹೆಚ್ಚು ಆದರೆ ಇಲ್ಲಿರುವ ಡಾ ಎ ಪಿ ಜೆ ಅಬ್ದುಲ್ ಕಲಾಂ ಶೈಕ್ಷಣಿಕ ಹಾಗೂ ಧಾರ್ಮಿಕ ಸಂಘ ನಗರದ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ 70 ವಿದ್ಯಾರ್ಥಿಗಳಿಗೆ ಟ್ರಾಕ್ ಸೂಟ್ ಮತ್ತು ಟಿ ಶರ್ಟ್ ವಿತರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ನಗರದ ಜೋಳದ ಬಜಾರ ಮಂಗಳವಾರ ಮಾರುಕಟ್ಟೆ ಹತ್ತಿರ ಇರುವ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಇತ್ತೀಚಿಗೆ ನಡೆದ ಪಾಲಕರ ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಡಾ ಅಜಹಾರ ಕೋಲಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಿ ಆರ್ ಪಿ ಮಂಚದ ಅವರು ಮಾತನಾಡಿ ಸ್ಥಳೀಯ ಸಂಘ ಸಂಸ್ಥೆಗಳು ದಾನಿಗಳು ಉದರವಾಗಿ ದೇಣಿಗೆ ನೀಡಿ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು. ಎಂದರು. ಎಷ್ಟೋ ಮಕ್ಕಳು ಸರ್ಕಾರಿ ಶಾಲೆಗಳಲ್ಲೇ ಕಲಿತು ಉನ್ನತ ಹುದ್ದೆಗಳನ್ನು ಅಲಂಕರಿಸಿ ದೇಶದ ಆಡಳಿತ ಚಕ್ರಕ್ಕೆ ತಮ್ಮದೇ ಕೊಡುಗೆ ಸರ್ಕಾರಿ ಶಾಲೆಯ ಗೌರವ ಕಾಪಾಡುತ್ತಿದ್ದಾರೆ.
ಪಾಲಕರಿಗೆ ಕಿವಿಮಾತು ಹೇಳಿ ಬೇರೆ ಬೇರೆ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಬದಲು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಳುಹಿಸಿ ಆಡಳಿತ ಸರ್ಕಾರಗಳಿಗೆ ಸಹಕಾರ ನೀಡಬೇಕು. ಸರಕಾರಿ ಶಾಲೆಗಳು ಬೆಳೆಯಬೇಕು. ಶೈಕ್ಷಣಿಕ ಅಭಿವೃದ್ದಿ ಆಗಬೇಕು ಅಂದರು. ಸರ್ಕಾರದ ಪ್ರೋತ್ಸಾಹ ಯೋಜನೆಗಳಾದ ಸಮವಸ್ತ್ರ, ಪಠ್ಯಪುಸ್ತಕ, ಬಿಸಿಯೂಟ, ಮೊಟ್ಟೆ, ಬಾಳೆಹಣ್ಣು, ಮತ್ತು ಸಾಕ್ಸ್ ಕೊಡುವುದು ಸೇರಿ ಇನ್ನೂ ಅನೇಕ ಯೋಜನೆ ಜಾರಿಗೆ ತಂದಿದೆ ಎಂದರು. ಜಿ ಎಸ್ ಗೊಂಬಿ ಇಡ್ಲಿ ಪಾತ್ರೆ ದೇಣಿಗೆ ನೀಡಿದರು. ಗಿರಮಲ್ಲ ಯಾರಗಟ್ಟಿ ಶಾಲುಗಳನ್ನು ನೀಡಿದರು
ಇಂದಿನ ಕಾರ್ಯಕ್ರಮದಲ್ಲಿ ಪು ಸ ಸದಸ್ಯರಾದ ಅಬ್ದುಲ್ ಭಾಗವನ ಮುಖಂಡರಾದ ಲಕ್ಷ್ಮಣ ಮಾಂಗ, ಜಮೀರ್ ಯಕ್ಸಂಬಿ, ಮುನ್ನಾ ಕರಡಿ, ಭಾಷಾಸಾಬ ಬಿಸ್ತಿ, ಜಿಬಿವುಲ್ಲಾ ಮುಲ್ಲಾ ಯುನುಸ ಬೀಳಗಿ, ಪಾರುಕ ರೋಣ, ಅಬ್ದುಲ್ ಭಾಗವಾನ, ರಫೀಕ್ ಅಂಬಿ, ಸೈಯದ ನದಾಫ್ ರಿಯಾಜ್ ಯಾದಗುಡ, ಹೆಚ್ ಶಿರೋಳ, ಮೆಹಿಬುಬ್ ಬಾಗವಾನ, ಶಿಕ್ಷಕರಾದ ಶ್ರೀಮತಿ ಎಸ್ ಎಸ್ ಕುಳ್ಳೊಳ್ಳಿ, ಎಸ್ ಆರ್ ಮಾಳಬಗೆ ಸೇರಿ ಹಲವರು ಇದ್ದರು, ಡಿ ಜೆ ಕಲ್ಲೇದ ನಿರೂಪಿಸಿ ವಂದಿಸಿದರು ಶ್ರೀಮತಿ ಯು ಜಿ ಅಲ್ಲಾಖಾನ ಸ್ವಾಗತಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 