ಬೆಂಗಳೂರು, ಮಾ.5, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಮಂಡಿಸಿರುವುದು ದಲಿತ ವಿರೋಧಿ ಮತ್ತು ಬಡವರ ವಿರೋಧಿ ಬಜೆಟ್ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸಂಪೂರ್ಣ ನಿರಾಶದಾಯಕ ಬಜೆಟ್ ಆಗಿದೆ. ಆಯವ್ಯಯದಲ್ಲಿ ನಿರ್ದಿಷ್ಟ ಹಣ ಮೀಸಲು ಬಗ್ಗೆ ಪ್ರಸ್ತಾಪ ಇಲ್ಲ. ತೈಲ ಬೇಲೆ ಏರಿಕೆ ಮಾಡಿ ಎಲ್ಲಾ ಬೆಲೆಗಳನು ಏರಿಸುವ ಕೆಲಸ ಮಾಡಿದ್ದಾರೆ ಎಂದರು.ಬೆಂಗಳೂರು ನಗರಕ್ಕೆ ಕೇವಲ 8000 ಕೋಟಿ ನೀಡಿದ್ದಾರೆ, ಮಾನವ- ಪ್ರಾಣಿ ಸಂಘರ್ಷ ಹೆಚ್ಚುತ್ತಿದೆ, ಅದರ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. 20000 ಕೋಟಿಯ ಎತ್ತಿನಹೊಳೆಗೆ ಕೇವಲ 1500 ಕೋಟಿ ಇಟ್ಟರೆ ಅದನ್ನು ಪೂರ್ಣಗೊಳಿಸಲಾಗುವುದಿಲ್ಲ ಎಂದು ಟೀಕಿಸಿದರು.