ಎಐಡಿಎಸ್‌ಓ ನ 10ನೇ ಅಖಿಲ ಭಾರತ ಸಮ್ಮೇಳನ ಯಶಸ್ವಿ

AIDSO's 10th All India Conference was a success

ಕೊಪ್ಪಳ 02: ಶಿಕ್ಷಣ- ಸಂಸ್ಕೃತಿ- ಮಾನವತೆ ಉಳಿಸಿ, ವಿದ್ಯಾರ್ಥಿ ವಿರೋಧಿ ಓಇಕ-2020 ಅನ್ನು ತಿರಸ್ಕರಿಸಿ ಎಂಬ ಘೋಷವಾಕ್ಯದೊಂದಿಗೆ ನವೆಂಬರ್ 27-29 ರವರೆಗೆ ದೆಹಲಿಯ ತಾಲ್ ಕಟೋರ ಸ್ಟೇಡಿಯಂನಲ್ಲಿ ಎಐಡಿಎಸ್‌ಓ ನ 10ನೇ ಅಖಿಲ ಭಾರತ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ಜರುಗಿತು. 

ಸಮ್ಮೇಳನವನ್ನು ಉದ್ಘಾಟಿಸಿ ಖ್ಯಾತ ಇತಿಹಾಸ ತಜ್ಞರಾದ ಪ್ರೊ.ಇರ್ಫಾನ್ ಹಬೀಬ್, ಮುಖ್ಯ ಅತಿಥಿಗಳಾಗಿ ಖ್ಯಾತ ಬರಹಗಾರರು ಹಾಗೂ ಭಗತ್ ಸಿಂಗ್ ಆರ್ಕೈವ್ ನ ನಿರ್ದೇಶಕರಾಗಿರುವ ಪ್ರೊ. ಚಮನ್ ಲಾಲ್ ಅವರು ಉದ್ದೇಶಿಸಿ ಮಾತನಾಡಿದರು. ದೇಶದ 28 ರಾಜ್ಯಗಳಿಂದ ಸಾವಿರಾರು ವಿದ್ಯಾರ್ಥಿಗಳು ಪ್ರತಿನಿಧಿಗಳು ಭಾಗವಹಿಸಿದ್ದರು. ಅನ್ಯಾಯದ ವಿರುದ್ಧ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಿ ಬಲಿಷ್ಠ ವಿದ್ಯಾರ್ಥಿ ಚಳುವಳಿ ಬೆಳೆಸಲು ನೂತನ ಕೇಂದ್ರ ಕೌನ್ಸಿಲ್ ಮಂಡಳಿಯನ್ನು ಚುನಾಯಿಸಲಾಯಿತು.ಕೇಂದ್ರ ಕೌನ್ಸಿಲ್ ಮಂಡಳಿಯ ಅಧ್ಯಕ್ಷರಾಗಿ ಸೌರಾವ್ ಘೋಷ್, ಪ್ರಧಾನ ಕಾರ್ಯದರ್ಶಿಯಾಗಿ ಶಿಬಾ ಷಿಶ್ ಪ್ರಹಾರಾಜ್, ಕರ್ನಾಟಕದಿಂದ ಉಪಾಧ್ಯಕ್ಷರಾಗಿ ಅಶ್ವಿನಿ ಕೆ. ಎಸ್‌. ಜಂಟಿ ಕಾರ್ಯದರ್ಶಿಯಾಗಿ ಅಜಯ್ ಕಾಮತ್, ಕಾರ್ಯ ನಿರ್ವಹಣಾ ಸಮಿತಿ ಸದಸ್ಯರಾಗಿ ಹನುಮಂತು, ಅಭಯ ದಿವಾಕರ್, ಸುಭಾಷ್, ಮಹಾಂತೇಶ್, ಚಂದ್ರಕಲಾ, ಅಪೂರ್ವ, ಕಲ್ಯಾಣ್, ವಿನಯ್ ಚಂದ್ರ ಹಾಗೂ 11 ಕೌನ್ಸಿಲ್ ಸದಸ್ಯರು ಆಯ್ಕೆಯಾಗಿದ್ದಾರೆ.