ಪಡಿತರ ಅಕ್ಕಿಯ ಅಕ್ರಮ ದಂಧೆ ಮೇಲೆಮತ್ತೆ ಎಸಿ ರಾಜೇಶ್ ದಾಳಿ
AC Rajesh attacks illegal ration rice racket again
ಬಳ್ಳಾರಿ 24: ನಗರದಲ್ಲಿ ಸಾರ್ವಜನಿಕರಿಗೆ ವಿತರಣೆಯಾಗಬೇಕಿದ್ದ 50 ಕಿಲೋದ 523 ಚೀಲ ಪಡಿತರ ಅಕ್ಕಿಯನ್ನು ಗುಜರಾತಿಗೆ ಸಾಗಾಣೆ ಮಾಡಲು ಹೊರಟ್ಟಿದ್ದನ್ನು ಬಳ್ಳಾರಿ ಉಂ ವಿಭಾಗದ ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ. ಅವರು ನನ್ನೆ ರಾತ್ರಿ ತಡೆಹಿಡಿದಿದ್ದಾರೆ.ನಗರದ ಎಸ್.ಎಲ್.ಎನ್ ಮಾಲ್ ಬಳಿ ಇರುವ ದರೂರು ಪುಲ್ಲಯ್ಯ ಕಾಂಪೌಂಡ್ ಒಳ ಆವರಣದಲ್ಲಿ ಪಡಿತರ ಅಕ್ಕಿಯನ್ನು ಬಳ್ಳಾರಿಯ ವಾಹನಗಳ ಮೂಲಕ ತಂದು ಗುಜರಾತ್ ಮೂಲದ ಸರಕು ಸಾಗಣೆ ಲಾರಿಯಲ್ಲಿ ಲೋಡ್ ಮಾಡಲಾಗುತ್ತಿತ್ತು.ಹಗರಿಬೊಮ್ಮನಹಳ್ಳಿಯಿಂದ ಬಂದಿದ್ದ 10 ಜನ ಹಮಾಲಿಗಳು ಚಿಕ್ಕ ಲಾರಿಯಿಂದ ದೊಡ್ಡ ಲಾರಿಗೆ ಲೋಡ್ ಮಾಡುತ್ತಿದ್ದರು. ಇವರಿಗೆ ಶ್ರೀಧರ್ ಎಂಬಾತ 750 ಕೂಲಿ ನೀಡಿ ಈ ದಂಧೆ ಮಾಡಿಸುತ್ತಿದ್ದನಂತೆ.ಈ ಬಗ್ಗೆ ತಮಗೆ ದೊರೆತ ಮಾಹಿತಿಯಿಂದ ಸ್ವತಃ ರಾಜೇಶ್ ಅವರು ತಲೆಗೆ ಟವಕ್ ಕಟ್ಟಿಕೊಂಡು ಬೈಕ್ ನಲ್ಲಿ ಬಂದು ಈ ದಂಧೆಗೆ ಬ್ರೇಕ್ ಹಾಕಿದ್ದಾರೆ.
ಇಬ್ಬರು ಗುಜರಾತ್ ಮೂಲದ ಚಾಲಕರು, ಬಳ್ಳಾರಿ ಮೂಲದ ಒಬ್ಬ ಚಾಲಕ, 5 ಹಮಾಲಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಇನ್ನೂ ಒಬ್ಬ ಚಾಲಕ ಮತ್ತು 5 ಹಮಾಲಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.ವಿಚಾರಣೆ ವೇಳೆ ಸದರಿ ಅಕ್ಕಿ ಚೀಲಗಳನ್ನು ಅಕ್ರಮವಾಗಿ ಗುಜರಾತ್ ರಾಜ್ಯಕ್ಕೆ ತೆಗೆದುಕೊಂಡು ಹೋಗಲು ತಯಾರಿ ಮಾಡುತ್ತಿರುವುದಾಗಿ ಗುಜರಾತ್ ಮೂಲದ ಚಾಲಕ ಹೇಳಿದ್ದಾನೆ.ಸ್ಥಳಕ್ಕೆ ಎಪಿಎಂಸಿ ಪೊಲೀಸ್ ಕರೆಸಿ ಪ್ರಕರಣ ದಾಖಲಿಸಿದೆ.ಈ ಹಿಂದೆ ಸಹ ಬಳ್ಳಾರಿ ನಗರದ ಲಾಲಾ ಕಮಾನ್ ನಲ್ಲಿ ನಡೆಯುತ್ತಿದ್ದ ಅಕ್ರಮವಾಗಿ ಪಡಿತರ ಅಕ್ಕಿಯ ಸಾಗಾಣೆಯ ದಂಧೆ ಕೊರರಿಗೆ ಬಿಸಿ ಮುಟ್ಟಿಸಿದ್ದರು. ಅಲ್ಲದೆ ಹಗರಿ ನದಿಯಿಂದ ಅಕ್ರಮವಾಗಿ ಎತ್ತಿನಬಂಡಿಗಳಲ್ಲಿ ಮರಳು ಸಾಗಾಸುವ ದಂಧೆ ಕೋಋ ಮೇಲೂ ರಾಜೇಶ್ ಅವರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 