ವಾಣಿಜ್ಯ ನಗರ ರಾಣಿಬೆನ್ನೂರಲ್ಲಿ ಇಂದಿನಿಂದ ಕರ್ನಾಟಕ ವೈಭವ ವೈಚಾರಿಕ ಹಬ್ಬ -2025
ರಾಣೇಬೆನ್ನೂರು 05: ವ್ಯವಹಾರಿಕ, ಸಾಂಸ್ಕೃತಿಕ ಮತ್ತು ಬೀಜೋತ್ಪಾದನೆಯ ಮೂಲಕ ಏಷ್ಯಾ ಖಂಡ ನಲ್ಲಿ ಖ್ಯಾತಿಯ ಪಡೆದಿರುವ ವಾಣಿಜ್ಯ ನಗರ ರಾಣೆಬೆನ್ನೂರಲ್ಲಿ ಇಂದಿನಿಂದ 3 ದಿವಸಗಳ ಕಾಲ, ಇಲ್ಲಿನ ರಾಜರಾಜೇಶ್ವರಿ ಕಾಲೇಜು ಆವರಣದಲ್ಲಿ ಅದ್ದೂರಿಯಾಗಿ ಕನ್ನಡ ನಾಡು, ನುಡಿ, ನೆಲ,ಜಲ, ಭಾಷೆ ಮತ್ತು ಸಂಸ್ಕೃತಿ ಪ್ರತಿಬಿಂಬಿತ ಕರ್ನಾಟಕ ವೈಭವ ವೈಚಾರಿಕ ಹಬ್ಬ -2025 ಅದ್ದೂರಿಯಾಗಿ ಜರುಗಲಿದೆ. ಎಂದು ಪರಿವರ್ತನಾ ಸಂಯೋಜಕ ಡಾ, ನಾರಾಯಣ ಪವಾರ,ಸಂಯೋಜಕ ಕೆ. ಎನ್. ಪಾಟೀಲ್ ಹೇಳಿದರು. ಈ ಕುರಿತು ಅಮೃತಂ ಆಸ್ಪತ್ರೆ ಸಭಾಭವನದಲ್ಲಿ ಏರಿ್ಡಸಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ನಗರದಲ್ಲಿ ಕರ್ನಾಟಕ ವೈಭವ ವೈಚಾರಿಕ ಹಬ್ಬವು ಕಳೆದ ಮೂರು ವರ್ಷಗಳಿಂದ ನಡೆಸುತ್ತಾ ಬಂದಿದ್ದೇವೆ. ಫೆಬ್ರವರಿ 7ರಂದು ಮುಂಜಾನೆ 10 ಗಂಟೆಗೆ ಹಂಪಿ ಕವಿವಿ ಕುಲಪತಿ ಡಾ. ಡಿ. ವಿ. ಪರಮಶಿವಮೂರ್ತಿ ಪ್ರದರ್ಶಿನಿ ಉದ್ಘಾಟಿಸುವರು. ದಿವ್ಯ ಸಾನಿಧ್ಯವನ್ನು ಪುಣ್ಯಕೋಟಿ ಮಠದ ಬಾಲ ಯೋಗಿ ಜಗದೀಶ್ವರ ಶ್ರೀಗಳು ವಹಿಸುವರು. ಚಲನಚಿತ್ರ ಸಾಹಸ ನಿರ್ದೇಶಕ ಡಾ.ಹಾಸನ ರಘು, ಜಾನಪದ ಕಲಾವಿದ ಡಾ. ಕೆ ಸಿ. ನಾಗರಜ್ಜಿ, ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿ, ಸ್ವಾಕರವೇ ಅಧ್ಯಕ್ಷ ನಿತ್ಯಾನಂದ್ ಕುಂದಾಪುರ ಉಪಸ್ಥಿತರಿರುವರು. ಏರುಹೊತ್ತು 11ಕ್ಕೆ ವಚನಾನಂದ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಘೆಹೋ ಲ್ಟ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಆಶಯ ಭಾಷಣ ಮಾಡುವರು. ಕರ್ನಾಟಕ ವೈಭವ ಸ್ವಾಗತ ಸಮಿತಿ ಅಧ್ಯಕ್ಷ ಪ್ರೊ, ಎಸ್. ವಿ.ಹಲಸೆ ಮತ್ತು ಅಖಿಲ ಭಾರತ ಸಹ ಸಂಯೋಜಕ ರಘುನಂದನ್ ಉಪಸ್ಥಿತರಿರುವರು. ಎಂದರು. ಮಧ್ಯಾಹ್ನ 2:30ಕ್ಕೆ ವಿಶೇಷ ಚಿಣ್ಣರ ಗೋಷ್ಠಿ, ಇದ್ದು, ಶಾಸಕ ಪ್ರಕಾಶ್ ಕೋಳಿವಾಡ ಅಧ್ಯಕ್ಷತೆ ವಹಿಸುವರು.
ಸಮಗ್ರ ಶಿಕ್ಷಣ ವೇದಿಕೆ ನಿರ್ದೇಶಕಿ ಪರಿಮಳಾಮೂರ್ತಿ ವಿಶೇಷ ಅತಿಥಿಗಳಾಗಿದ್ದಾರೆ. ಬಿಇಓ ಶ್ಯಾಮಸುಂದರ ಅಡಿಗ, ರೇನ್ಬೋ ಅಧ್ಯಕ್ಷ ಸಿ.ಟಿ. ಸುರೇಶ್, ನಿಟ್ಟೂ ರ ಸೆಂಟ್ರಲ್ ಸ್ಕೂಲ್ ಆಡಳಿತಾಧಿಕಾರಿ ಲತಾ ವೆಂಕಟೇಶ್ ನಿಟ್ಟೂರ, ವಿದ್ಯಾ ವಾಹಿನಿ ಸಂಸ್ಥೆ ಅಧ್ಯಕ್ಷ ವಜ್ರೇಶ್ವರಿ ಲದ್ವಾ, ಖನ್ನೂರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ,ಪ್ರವೀಣ್ ಖನ್ನೂರ, ಜೈನ್ ಪಬ್ಲಿಕ್ ಸ್ಕೂಲ್ ಆಡಳಿತಾಧಿಕಾರಿ ಡಾ. ಸಂದೀಪ್ ಜೈನ್ ಅತಿಥಿಗಳಾಗಿದ್ದಾರೆ. ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಕುಡಚಿ ಮಾಜಿ ಶಾಸಕ ಪಿ ರಾಜೀವ ಅವರು ನಮ್ಮ ಸಂವಿಧಾನ ನಮ್ಮ ಹಕ್ಕು ವಿಷಯ ಕುರಿತು ಮಾತನಾಡುವರು. ಗದಗ ಕೆ.ಎಸ್.ಆರಿ್ಡ. ಪಿ. ಆರ್. ಯು.ಕುಲ ಸಚಿವ ಡಾ. ಸುರೇಶ ವಿ. ನಾಡಗೌಡರ, ಜಾನಪದ ವಿ.ವಿ., ಕುಲಪತಿ ಡಾ. ಟಿ. ಎಂ.ಭಾಸ್ಕರ್, ಗಂಗಾವತಿಯ ಹಾಸ್ಯ ವಾಗ್ಮಿ ಬಿ ಪ್ರಾಣೇಶ ಮತ್ತು ಹಿರಿಯ ನ್ಯಾಯವಾದಿ ಕೆ ಶಿವಲಿಂಗಪ್ಪ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಜೆ ಬಿ ಪ್ರಾಣೇಶ್, ಅವರ ಹಾಸ್ಯ ಸಂಜೆ, ಪದ್ಮಶ್ರೀ ಡಾ,ಹಾಸನ ರಘು ಪೂಜಾ ಕುಣಿತ, ಮಮತಾ ನಾಡಿಗೇರ ತಂಡದವರ ನೃತ್ಯ ರೂಪಕ ಹಾಗೂ ಅಲ್ಲಿ ಕೇರಿ ಸಾಂಸ್ಕೃತಿಕ ಸಂಘದವರ ಜೋಗತಿ ನೃತ್ಯ ಕಾರ್ಯಕ್ರಮ ಜರುಗಲಿದೆ. ಫೆಬ್ರುವರಿ 8 ರಂದು ಯುವ ಗೋಷ್ಠಿ, ಮಹಿಳಾ ಗೋಷ್ಠಿ, ಕಲಾ ಪ್ರದರ್ಶನ, 9ರಂದು ರೈತಗೋಷ್ಠಿ ಮತ್ತು ಸಂಜೆ 6: ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.