ನವದೆಹಲಿ, ಏ.11, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ತನ್ನ ಕ್ರೀಡಾ ಸಂಘಗಳು ಮತ್ತು ಇತರ ಸದಸ್ಯರ ಮೂಲಕ ದೇಶದಲ್ಲಿ ಹಣ ಸಂಗ್ರಹಿಸಿದ್ದು, ಕೊರೊನಾ ವೈರಸ್ “ಕೋವಿಡ್ -19” ವಿರುದ್ಧ ಹೋರಾಡಲು ಪ್ರಧಾನಿ ಪರಿಹಾರ ನಿಧಿಗೆ 10 ಕೋಟಿ ರೂ.ಗಳನ್ನು ನೀಡಲು ತೀರ್ಮಾನಿಸಿದೆ.ಈ ಮಾಹಿತಿಯನ್ನು ನೀಡಿದ ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ, ದೇಶಾದ್ಯಂತದ ಕ್ರೀಡಾ ಒಕ್ಕೂಟಗಳು ಐಒಎ ಕರೆಯ ಮೇರೆಗೆ ಈ ಮೊತ್ತವನ್ನು ನೀಡಿ ಸಹಕರಿಸಿವೆ. ಕೆಲವು ಒಕ್ಕೂಟಗಳು ನೇರವಾಗಿ ಠೇವಣಿ ಇಡುತ್ತಿವೆ ಮತ್ತು ಉಳಿದ ಮೊತ್ತವನ್ನು ಮುಂದಿನ ದಿನಗಳಲ್ಲಿ ಜಮಾ ಮಾಡಲಾಗುವುದು ಎಂದು ಅವರು ಹೇಳಿದರು.ಈವರೆಗೆ 10 ಕೋಟಿ ರೂ.ಗಳಿಗಿಂತ ಹೆಚ್ಚು ಹಣವನ್ನು ಸಂಗ್ರಹಿಸಲಾಗಿದೆ ಎಂದು ಮೆಹ್ತಾ ಮಾಹಿತಿ ನೀಡಿದರು. ಇದರಲ್ಲಿ ಹಾಕಿ ಇಂಡಿಯಾದಿಂದ ಒಂದು ಕೋಟಿ, ಓಂಪ್ರಕಾಶ್ ಶರ್ಮಾ (ದೆಹಲಿ ಟ್ರಯಥ್ಲಾನ್ ಅಸೋಸಿಯೇಷನ್) ನಿಂದ ಎರಡು ಕೋಟಿ, ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್‌ನ ಬಿ.ಪಿ.ವೈಶ್ಯ 1.50 ಕೋಟಿ, ಭುವನೇಶ್ವರ ಕಲಿತಾ (ಐಕೆಸಿಎ-ಎಒಎ) 1.10 ಕೋಟಿ, ರಾಜ್ಯಸಭಾ ಸಂಸದ ಮತ್ತು ಮಹಿಳಾ ಬಾಕ್ಸರ್ ಎಂಸಿ ಮೇರಿ ಕೋಮ್ ಒಂದು ಕೋಟಿ ಮತ್ತು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ 25 ಲಕ್ಷ ಕೊಡುಗೆ ನೀಡಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಉಳಿದ ಸಂಸ್ಥೆಗಳು ಸಹ ತಮ್ಮ ಕೈ ಲಾದ ಸಹಾಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.