ಸರ್ಕಾರದ ಪಂಚಗ್ಯಾರಂಟಿ ಕುರಿತು ಬೀದಿನಾಟಕ ಪ್ರದರ್ಶನ

A street drama performance on Govt.'s Five Guarantees

ಚಿಕ್ಕೋಡಿ 21: ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ಮಕ್ಕಳ ಶಿಕ್ಷಣ ಪ್ರಗತಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ತಮ್ಮ ಮಕ್ಕಳನ್ನು  ಸರ್ಕಾರಿ ಶಾಲೆಗೆ ಕಳಿಸಿ ಎಂದು ಮನವಿ ಪ್ರಾಥಮಿಕ ಶಾಲೆಯ ಮುಖೋಪಾದ್ಯಯರಾದ ಸಿ.ಎಸ್‌.ಹತ್ತಿ ಮಾಡಿದರು. 

ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೆಳಗಾವಿ ವತಿಯಿಂದ ಚಿಕ್ಕೋಡಿ ಸಮೀಪದ ಉಮರಾಣಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗುರುವಾರ 20ರಂದು ಏರಿ​‍್ಡಸಲಾದ ಸರ್ಕಾರದ ಪಂಚಗ್ಯಾರಂಟಿ ಹಾಗೂ ಮಕ್ಕಳ ಶಿಕ್ಷಣ ಪ್ರಗತಿ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದ ಜಾನಪದ ಸಂಗೀತ  ಬೀದಿನಾಟಕ ಪ್ರದರ್ಶನದಲ್ಲಿ ಮಾತನಾಡಿದರು. 

ಪ್ರೌಢಶಾಲೆ ಮುಖೋಪಾದ್ಯಯರಾದ ವಂದನಾ ಎಸ್ ಹುಲ್ಲೋಳಿ ಅವರು ಕಾರ‌್ಯಕ್ರಮಕ್ಕೆ ವಾದ್ಯನುಡಿಸಿ ಚಾಲನೆ ನೀಡಿದರು. 

ರಂಗದರ್ಶನ ಕಲಾತಂಡದವರು ಮಕ್ಕಳ ಶಿಕ್ಷಣ ಬದುಕಿಗೆ ಆಧಾರ ಪಂಚಗ್ಯಾರಂಟಿ ಯೋಜನೆಗಳು ಬಡವರಿಗೆ ಸ್ಪೂರ್ತಿ ನೀಡಿದ “ ಬದುಕು ಕೊಟ್ಟ ಸರ್ಕಾರ”  ಶಕ್ತಿ ಯೋಜನೆ, ಗೃಹ ಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಯುವನಿಧಿ ಕುರಿತು ಕಲಾತಂಡದವರು ವಿದ್ಯಾರ್ಥಿ ಹಾಗೂ ಸಮುದಾಯಕ್ಕೆ ಮನಮುಟ್ಟುವಂತೆ ಕಲಾಪ್ರದರ್ಶನ ನೀಡಿ ಅರಿವು ಮೂಡಿಸಿದರು.  

ಕಲಾತಂಡದಲ್ಲಿ ಭರತ ಕಲಾಚಂದ್ರ, ಪ್ರಕಾಶ ಜನಮಟ್ಟಿ, ಸುಜಾತಾ ಮಗದುಮ್ಮ, ಸಾವಿತ್ರಿ ಹಳಕಲ್ಲ, ಸಂತ್ರಾಮ ಮಯೂರ, ಪುಂಡಲೀಕ ನಾಯಿಕ, ಶಂಕರ ಖೋತ, ಅಪ್ಪಾಸಾಹೇಬ ಚಿಮಣೆ ಮಹೇಶ ಪಕಾಲೆ, ಭಾಗವಹಿಸಿದರು. ಆರ್, ಎಮ್ ಗೌಡರ ಸ್ವಾಗತಿಸಿದರು ಬಿ.ಡಿ ರಾಜಗೋಳಿ ವಂದಿಸಿದರು.  

ಇದೇ ಕಲಾತಂಡ ಮೀರಾಪೂರಹಟ್ಟಿ, ಜೈನಾಪೂರ, ಜಾಗನೂರ, ಗ್ರಾಮಗಳಲ್ಲಿ ಕೂಡಾ ಪಂಚಗ್ಯಾರಂಟಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಿದರು.