ಅರಸು ನಾಡು ಕಂಡ ಅಪರೂಪದ ರಾಜಕಾರಣಿ: ಲಮಾಣಿ

ರಾಣೇಬೆನ್ನೂರು-  ಅರಸು ಅವರು ಕನ್ನಡ ನಾಡಿನಲ್ಲಿ ಒಂದು ಹೊಸ ಇತಿಹಾಸವನ್ನು ಸೃಷ್ಠಿಸಿದವರು. ಕನ್ನಡ ನಾಡು ಸಮೃದ್ಧಿಗಾಗಿ ಮತ್ತು ಹಿಂದುಳಿದವರಿಗಾಗಿ ಸಾಮಾಜಿಕ ಸಮಾನತೆಯನ್ನು ತರಲು ಮುಂದಾಗಿದ್ದರು. ಅಂತಹ ಧೀಮಂತ ನಾಯಕರ ಆದರ್ಶಮಯ ತತ್ವಗಳು ಇಂದಿನ ನಾಗರೀಕರಲ್ಲಿ  ಹೊರ ಹೊಮ್ಮಬೇಕಾಗಿದೆ ಎಂದು ತಾಪಂ ಅಧ್ಯಕ್ಷೆ ಗೀತಾ ಲಮಾಣಿ ಹೇಳಿದರು. 

       ನಗರದ ವರ್ತಕರ ಸಮುದಾಯ ಭವನದಲ್ಲಿ ತಾಲೂಕು ಆಡಳಿತ, ತಾಪಂ, ನಗರಸಭೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ, ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 104 ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.      ಜಿಪಂ ಸದಸ್ಯ ಏಕನಾಥ ಬಾನುವಳ್ಳಿ ಮಾತನಾಡಿ, ಅರಸು ಅವರು ಹಿಂದುಳಿದವರ ಆಥರ್ಿಕ ಅಭಿವೃದ್ಧಿಗೆ ಶ್ರಮಿಸಿದವರಾಗಿದ್ದಾರೆ. ಸಮಾಜದಲ್ಲಿ ಇತರ ವರ್ಗಗಳಂತೆ ಹಿಂದುಳಿದವರ ಮಕ್ಕಳೂ ಶೈಕ್ಷಣಿಕವಾಗಿ ಮುಂದುವರೆಯಲಿ ಎಂಬ ಸದುದ್ಧೇಶದಿಂದ ವಸತಿನಿಲಯ ಸೌಲಭ್ಯ ಕಲ್ಪಿಸಿದ ಮಹಾನುಭಾವರಾಗಿದ್ದರು.

         ಸಮಾಜದಲ್ಲಿ ಆಥರ್ಿಕವಾಗಿ ಹಿಂದುಳಿದ ಹಾಗೂ ತುಳಿತಕ್ಕೊಳಗಾದ ಅತೀ ಕಟ್ಟ ಕಡೆಯ ವ್ಯಕ್ತಿಯು ಸಹ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಕನಸು ಅವರದಾಗಿತ್ತು ಎಂದರು.

     ಅದನ್ನು ಸಕಾರಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಇಂತಹ ಮೇರು ವ್ಯಕ್ತಿತ್ವದ ಇವರ ಬಗ್ಗೆ ಶಾಲಾ-ಕಾಲೇಜುಗಳ ವಿದ್ಯಾಥರ್ಿಗಳಲ್ಲಿ ಅರಿವು, ಮಾಹಿತಿ, ಪರಿಚಯಿಸುವ ಪ್ರಾಮಾಣಿಕ ಕಾರ್ಯವನ್ನು ಹಿಂದುಳಿದವರ್ಗ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಡಬೇಕು ಜೊತೆಗೆ ಸರ್ವರ ಸಹಕಾರ ಇರಬೇಕು ಎಂದರು.

   ತಾಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ ಮಾತನಾಡಿ, ಸಮಾಜ ಪರಿವರ್ತಕ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಹಿಂದಿಳಿದ ಸಮಾಜದವರ ಬದುಕು ಕಟ್ಟಿ ಕೊಟ್ಟವರು, ಇಂದಿನ ರಾಜಕೀಯ ನಾಯಕರು ಅವರ ಆದರ್ಶ, ನಡೆ ನುಡಿಯನ್ನು ತಮ್ಮ ರಾಜಕೀಯ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದರೆ ಭವ್ಯ ಕನರ್ಾಟಕ ನಿಮರ್ಾಣ ಮಾಡಲು ಸಾಧ್ಯ ಎಂದರು.

  ಗ್ರೇಡ್ 2 ತಹಸೀಲ್ದಾರ ಶಂಕರ ಬಿ.ಎಸ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ತಾಪಂ ಉಪಾಧ್ಯಕ್ಷೆ ಕಸ್ತೂರವ್ವ ಹೊನ್ನಾಳಿ, ಜಿಪಂ ಸದಸ್ಯ ಮಾರುತಿ ರಾಠೋಡ, ತಾಪಂ ಸದಸ್ಯರಾದ ಪುಟ್ಟಪ್ಪ ಬಿಕ್ಷಾವತರ್ಿಮಠ, ಮಂಗಳಾ ಹುಚ್ಚಣ್ಣನವರ, ರೈತ ಮುಖಂಡ ಹನುಮಂತಪ್ಪ ಕಬ್ಬಾರ, ಬಿಸಿಎಂ ವಿಸ್ತರಣಾಧಿಕಾರಿ ವಿ.ಎಸ್ ಹಿರೇಮಠ, ತಾಪಂ ಕಾರ್ಯನಿವರ್ಾಹಕ ಅಧಿಕಾರಿ ಎಸ್.ಎಂ.ಕಾಂಬಳೆ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಧರ, ನಗರಸಭಾ ಅಭಿಯಂತರ ಬಿ.ಎಸ್.ಪಾಟೀಲ, ಎಸ್.ಎಸ್.ಪ್ರಸಾದಿಮಠ, ಪ್ರಕಾಶ ಗಚ್ಚಿನಮಠ  ಸೇರಿದಂತೆ ಮತ್ತಿತರ ಗಣ್ಯರು, ಮುಖಂಡರು ಉಪಸ್ಥಿತರಿದ್ದರು.  ಭಾವನಾ ಕೋಲಕಾರ ಸಂಗಡಿಗರು ಪ್ರಾಥರ್ಿಸಿದರು, ಸೌಂದರ್ಯ ಸಂಗಡಿಗರು ನಾಡಗೀತೆ ಹಾಡಿದರು, ತಾಲೂಕಾ ವಿಸ್ತಿಣರ್ಾಧಿಕಾರಿ ವಿ.ಎಸ್ ಹಿರೇಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.