ಕವಿಯಾದವನು ಮನಸ್ಸನ್ನು ಅರಳಿಸಬೇಕು, ಕೆರಳಿಸಬಾರದು : ಶಾಸ್ತ್ರಿ
A poet should open the mind, not provoke it: Shastri
ಬೆಳಗಾವಿ 16: ಕವಿಗೆ ಸಾಮಾಜಿಕ ಜವಾಬ್ಧಾರಿ ಇದೆ. ಆ ಜವಾಬ್ದಾರಿಯನ್ನು ನಿಭಾಯಿಸುವಾಗ ಸಾಹಿತ್ಯದ ಮೂಲಕ ಮತ್ತೊಬ್ಬರ ಮನಸ್ಸನ್ನ ಕೆರಳಿಸಲು, ನೋಯಿಸಲು ಹೋಗಬಾರದು. ಕಾವ್ಯವಿರುವುದು ಮನಸ್ಸನ್ನ ಅರಳಿಸಲು. ಮನಸ್ಸನ್ನು ಅರಳಿಸುವಂಥ ಕೆಲಸವನ್ನು ಇಂದು ಬಿಡುಗಡೆಗೊಂಡ ನಿವೇದಿತಾ ನವಲಗುಂದ ಅವರ “ಮುಷ್ಠಿ ಹೃದಯ ಸೃಷ್ಟಿ ಪ್ರೀತಿ” ಕೃತಿಯು ಮಾಡಿದೆ ಎಂದು ಹಿರಿಯ ಪತ್ರಕರ್ತ ಎಲ್. ಎಸ್. ಶಾಸ್ತ್ರಿಯವರು ಹೇಳಿದರು.
ನಿವೇದಿತಾರ್ಣ ಅಕ್ಯಾಡಮಿ ಆಫ್ ಮ್ಯೂಜಿಕ್ ಆಂಡ್ ಆರ್ಟ್ಸ ಸಂಘಟನೆಯವರು ನಗರದ ತಿಲಕವಾಡಿಯಲ್ಲಿರುವ ವರೇರಕರ ನಾಟ್ಯಗೃಹ ಸಭಾಭವನದಲ್ಲಿ ದಿ. 14 ರವಿವಾರದಂದು ಹಮ್ಮಿಕೊಂಡಿದ್ದ ಚಂದ್ರಶೇಖರ ನವಲಗುಂದ ಸಂಪಾದಿಸಿರುವ ದಿ. ನಿವೇದಿತಾ ಚಂದ್ರಶೇಖರ ರಚನೆಯ “ಮುಷ್ಠಿ ಹೃದಯ ಸೃಷ್ಟಿ ಪ್ರೀತಿ” ಕವನ ಸಂಕಲನ ಪುಸ್ತಕ ಬಿಡುಗಡೆ ಮತ್ತು ಅಕಾಡಮಿ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರೀತಿಯನ್ನುವುದು ಕವಿಯ ಹೃದಯದಲ್ಲಿರುವ ಅಮೃತ ಕಳಸ. ಆ ಅಮೃತ ಕಳಸದಿಂದ ಜನತೆಗೆ, ಸಮಾಜಕ್ಕೆ ಒಳ್ಳೆಯದನ್ನು ಕೊಡುವುದೇ ಕವಿಯ ಕೆಲಸ, ಕರ್ತವ್ಯ ಕೂಡ ಎಂದು ಹೇಳಿದರು.
ಕೃತಿ ಪರಿಚಯ ಮಾಡಿದ ರಂಗಸಂಪದದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿಯವರು ಮಾತನಾಡುತ್ತ ಕಾವ್ಯಕ್ಷೇತ್ರಕ್ಕೆ ಪಾದಾರೆ್ಣ ಮಾಡುತ್ತಿರುವ ಕವಿಗಳಿಗೆ ನಿವೇದಿತಾರವರ “ಮುಷ್ಠಿ ಹೃದಯ ಸೃಷ್ಟಿ ಪ್ರೀತಿ” ಕೃತಿಯು ಒಂದು ಮಾದರಿಯಾಗಿದೆ. ಇಲ್ಲಿ ಬಂದಿರುವ ಎಲ್ಲ ಕವನ, ಹನಿಗವನಗಳು ತುಂಬ ನೈಜವಾಗಿ ಮೂಡಿಬಂದಿವೆ ಇದೊಂದು ಸಂಗ್ರಾಹ್ಯಯೋಗ್ಯವಾದ ಕೃತಿ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕೊಪ್ಪಳದ ಡಾ. ಕೆ.ಜಿ. ಕುಲಕರ್ಣಿ, ಅತಿಥಿಗಳಾಗಿ ಆಗಮಿಸಿದ್ದ ಧಾರವಾಡದ ಡಾ. ಅಮೃತ ಯಾರ್ದಿ, ಅತಿಥಿಗಳಾಗಿ ಆಗಮಿಸಿದ್ದ ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ, ಸಂಗೀತ ಕಲಾವಿದ ಪ್ರಭಾಕರ ಶಹಾಪುರಕರ ಮಾತನಾಡಿದರು.
ಚಂದ್ರಶೇಖರ ನವಲಗುಂದ ಸ್ವಾಗತಿಸಿದರು. ಅಕಾಡಮಿ ವಾರ್ಷಿಕ ವರದಿಯನ್ನು ಚಿದಂಬರ ನವಲಗುಂದ ಮಂಡಿಸಿದರು. ನಿರಂಜನ ನವಲಗುಂದ ವಂದಿಸಿದರು. ನಿವೇದಿತಾರ್ಣ ಅಕಾಡಮಿಯ ವಿದ್ಯಾರ್ಥಿಗಳು ಹಾಡುಗಳನ್ನು ಮತ್ತು ಕೇದಾರ ಪೊದ್ದಾರ್ ಗಿಟಾರ ವಾದನವನ್ನು ಪ್ರಸ್ತುತ ಪಡಿಸಿದರು. ಅಶ್ವಿನಿ ಜೋಶಿ ನಿರೂಪಿಸಿದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 