ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುಪಡಿ ಜಾರಿಗೆ ಆಗ್ರಹ
Demand for implementation of pro-Karnataka resolution in Belagavi City Corporation
ಲೋಕದರ್ಶನ ವರದಿ
ಬೆಳಗಾವಿ 04: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುಪಡಿಯನ್ನು ಅಂಗೀಕರಿಸಬೇಕೆಂದು ರಾಜ್ಯ ಸರ್ಕಾರ ನೀಡಿರುವ ಆದೇಶವನ್ನು ಜಾರಿಗೊಳಿಸುವಂತೆ ಆಗ್ರಹಿಸಿ, ಕನ್ನಡ ಸಂಘಟನೆಗಳ ಮುಖಂಡರು ಶುಕ್ರವಾರ ಸಕ್ರ್ಯೂಟ್ ಹೌಸ್ನಲ್ಲಿ ಸಭೆ ನಡೆಸಿದರು. ರಾಜ್ಯ ಸರ್ಕಾರದ ಆದೇಶವನ್ನು ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಪಕ್ಷವು ಹಗುರವಾಗಿ ಪರಿಗಣಿಸಬಾರದು. ಸರ್ಕಾರದ ಸೂಚನೆ ಬಂದ ನಂತರ ಕರ್ನಾಟಕ ಪರವಾದ ಗೊತ್ತುಪಡಿಯನ್ನು ಅಂಗೀಕರಿಸಲಾಗುವುದು ಎಂಬ ಭರವಸೆಯನ್ನು ರಾಜ್ಯದ ಕನ್ನಡಿಗರಿಗೆ ನೀಡಲಾಗಿದೆ. ಆದ್ದರಿಂದ ಶೀಘ್ರದಲ್ಲೇ ಪಾಲಿಕೆ ವಿಶೇಷ ಸಭೆ ಕರೆದು ಕರ್ನಾಟಕ ಪರವಾದ ಗೊತ್ತುಪಡಿಯನ್ನು ಅಂಗೀಕರಿಸುವ ಮೂಲಕ ಬೆಳಗಾವಿ ಪಾಲಿಕೆ ಕನ್ನಡಪರ ಸಂದೇಶವನ್ನು ರಾಜ್ಯಕ್ಕೆ ನೀಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಯಾವುದೇ ತಾಂತ್ರಿಕ ನೆಪವೊಡ್ಡಿ ಕರ್ನಾಟಕ ಪರವಾದ ಗೊತ್ತುಪಡಿ ಅಂಗೀಕಾರವನ್ನು ಮುಂದೂಡಬಾರದು ಎಂದು ಮುಖಂಡರು ಆಗ್ರಹಿಸಿದರು. ಕಳೆದ ಜೂನ್ 22ರಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ಗಡಿನಾಡ ಕನ್ನಡಿಗರ ಸೇನೆಗೆ ಭರವಸೆ ನೀಡಿ, ರಾಜ್ಯ ಸರ್ಕಾರದ ಆದೇಶ ಬಂದ ಕೂಡಲೇ ಗೊತ್ತುಪಡಿಯನ್ನು ಅಂಗೀಕರಿಸಲಾಗುವುದು ಎಂದು ತಿಳಿಸಿದ್ದರು. ಅದರಂತೆ ಅವರು ಮೇಯರ್ ಹಾಗೂ ಉಪಮೇಯರ್ ಅವರಿಗೆ ಸೂಕ್ತ ಸೂಚನೆ ನೀಡಿ, ತಮ್ಮ ಮಾತನ್ನು ಉಳಿಸಿಕೊಳ್ಳಬೇಕು ಎಂದು ಸಭೆ ಒತ್ತಾಯಿಸಿತು. ರಾಜ್ಯ ಸರ್ಕಾರದ ಆದೇಶವನ್ನು ಅನುಷ್ಠಾನ ಗೊಳಿಸುವಂತೆ ಒತ್ತಾಯಿಸಲು ಬೆಳಗಾವಿ ಕನ್ನಡ ಸಂಘಟನೆಗಳ ಮುಖಂಡರು ವಿವಿಧ ಸಮಾಜಗಳ ಪ್ರಮುಖರೊಂದಿಗೆ ಮಹಾನಗರ ಪಾಲಿಕೆಗೆ ತೆರಳಿ ಮೇಯರ್ ಹಾಗೂ ಉಪಮೇಯರ್ ಅವರನ್ನು ಭೇಟಿಯಾಗಿ ಚರ್ಚಿಸುವ ಕಾರ್ಯಕ್ರಮವನ್ನು ಶನಿವಾರದಿಂದಲೇ ಆರಂಭಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 