ದಾನ ಧರ್ಮ ಮಾಡುವ ವ್ಯಕ್ತಿಗೆ ನಿರಂತರ ಪುಣ್ಯ ಫಲ ಪ್ರಾಪ್ತಿ: ಶಿರಹಟ್ಟಿ ಫಕೀರೇಶ ಸ್ವಾಮಿ
A person who gives charity will receive continuous meritorious results: Shirahatti Fakiresh Swami
ಶಿಗ್ಗಾವಿ 18 : ಭಗವಂತ ಕೊಟ್ಟ ಸಂಪತ್ತು ಸದುಪಯೋಗವಾಗ ಬೆಕಾದರೆ ದಾನ ಧರ್ಮ ಮಾಡಬೇಕು. ದಾನ ಧರ್ಮ ಮಾಡುವ ವ್ಯಕ್ತಿಗೆ ನಿರಂತರ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ ಎಂದು ಶಿರಹಟ್ಟಿಯ ಜಗದ್ಗುರು ಶ್ರೀ ಫಕೀರೇಶ್ವರ ಸಂಸ್ಥಾನದ ಫಕೀರ ಸಿದ್ದರಾಮೇಶ್ವರ ಮಹಾ ಸ್ವಾಮಿಗಳು ಹೇಳಿದರು.
ತಾಲೂಕಿನ ಹಿರೇಮಲ್ಲೂರ ಗ್ರಾಮದ ಗ್ರಾಮ ದೇವಿ ದೇವಸ್ಥಾನದಲ್ಲಿ ಶಿರಹಟ್ಟಿ ಸಂಸ್ತಾನಮಠದ ದಾಸೋಹಕ್ಕೆ ಧವಸ ಧಾನ್ಯಗಳನ್ನು ಸಂಗ್ರಹಣೆಗೆ ಆಗಮಿಸಿ ಆಶಿರ್ವಚನ ನೀಡಿ ಮಾತನಾಡಿದ ಅವರು ನಾಡಿನ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿ ಸಕಲ ಜನಾಂಗದ ಮೂಲಕ ದಾಸೋಹಕ್ಕೆ ಧವಸ ಧಾನ್ಯಗಳನ್ನು ಸಂಗ್ರಹಿಸುವ ಮೂಲಕ ನಿರಂತರವಾಗಿ ಅನ್ನದಾಸೋಹ ಹಾಗೂ ಜ್ಞಾನದಾಸೋಹಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಶಿರಹಟ್ಟಿಯ ಜಗದ್ಗುರು ಶ್ರೀ ಫಕೀರೇಶ್ವರ ಸಂಸ್ಥಾನ ಮಠವು ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವದ ಸ್ಥಾನ ಪಡೆದು ಹೆಸರಾಗಿದೆ. ಧಾರ್ಮಿಕ ವಿಷಯಗಳಲ್ಲಿ ಸಾಮರಸ್ಯವಿಲ್ಲದೆ ಕಲಹಗೊಳ್ಳುತ್ತಿರುವ ಈಸಂದರ್ಭದಲ್ಲಿ ಫಕೀರೇಶ್ವರ ಸಂಸ್ಥಾನ ಮಠವು ಭಾವೈಕ್ಯಕೆಯಸಂಕೇತವಾಗಿ ಬೆಳೆದು ನಾಡಿಗೆ ಮಹತ್ತರವಾದ ಸಂದೇಶವನ್ನು ನೀಡುತ್ತಾ ಬಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿವಿ ಮತ್ತಿಗಟ್ಟಿ, ಕಟ್ಟೆಪ್ಪ ಮುದ್ದಪ್ಪನವರ, ಹಿರೇಗೌಡ ಪಾಟೀಲ, ಈಶ್ವರಗೌಡ ಲಿಂಗನಗೌಡ್ರ, ಶಿವನಗೌಡ ಸುಣ್ಣಲಿಂಗನಗೌಡ್ರ, ಶೇಖರಗೌಡ ಹುತ್ತನಗೌಡ್ರ, ಈಶ್ವರಗೌಡ ಪೋಲಿಸಗೌಡ್ರ, ಶಂಕರಗೌಡ ಸಂಕನಗೌಡ್ರ, ಮಲ್ಲನಗೌಡ ಹುತ್ತನಗೌಡ್ರ, ಶಿವರಾಜ್ ಬೋರಣ್ಣನವರ, ನವೀನ್ ಮುದ್ದಪ್ಪನವರ, ಬಸವರಾಜ ಮುದ್ದಪ್ಪನವರ ಸೇರಿದಂತೆ ಗ್ರಾಮದ ಪ್ರಮುಖರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 