ಸಚ್ಚಾರಿತ್ರ್ಯದಿಂದ ಮಾತ್ರ ನೆಮ್ಮದಿಯ ಬದುಕು ಸಾಧ್ಯ


ಸಚ್ಚಾರಿತ್ರ್ಯದಿಂದ ಮಾತ್ರ ನೆಮ್ಮದಿಯ ಬದುಕು ಸಾಧ್ಯ   

ಕಂಪ್ಲಿ 08: ಇಲ್ಲಿನ ಗುರುಮಠದಲ್ಲಿ ಲಿಂ.ಓದ್ಸೋ ಕರಿಬಸಯ್ಯನವರ 62ನೇ ಪುಣ್ಯಸ್ಮರಣೆ ನಿಮಿತ್ತ ಸಂಗೀತ ಕಾರ್ಯಕ್ರಮ ಗುರುವಾರ ನಡೆಯಿತು.  

ಹೊಸಪೇಟೆ ವಿಜಯನಗರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಮೃತ್ಯುಂಜಯ ರುಮಾಲೆ ಉಪನ್ಯಾಸ ನೀಡಿ ಹಣ, ಸಂಪತ್ತು, ಆಸ್ತಿ ಐಷಾರಾಮಿ ಜೀವನಕ್ಕೆ ಕಾರಣವೇ ಹೊರತು ನೆಮ್ಮದಿಯ ಬದುಕಿಗಲ್ಲ. ಸಚ್ಚಾರಿತ್ರ್ಯದಿಂದ ಮಾತ್ರ ನೆಮ್ಮದಿಯ ಬದುಕು ಸಾಧಿಸಬಹುದು ಎನ್ನುವುದು ಲಿಂ.ಓದ್ಸೋ ಕರಿಬಸಯ್ಯನವರ ನಿಲುವು ಆಗಿತ್ತು. ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ ಸಮೃದ್ಧಗೊಳಿಸುವ ಜೊತೆಗೆ ಜಾತ್ಯಾತೀತವಾಗಿ ಸಾಂಸ್ಕೃತಿಕ, ಸಾಹಿತ್ಯಿಕ, ಧಾರ್ಮಿಕ ಹಿನ್ನೆಯಲ್ಲಿ ಪ್ರಬುದ್ಧಗೊಳಿಸಲು ಕರಿಬಸಯ್ಯನವರು ಶಿವಾನಂದಾಶ್ರಮ ಸ್ಥಾಪಿಸಿದರು. ಅವರ ತತ್ವ ಆದರ್ಶಗಳು ಸದಾ ಅನುಕರಣೀಯ ಎಂದರು.  

ಜವುಕಿನ ವೀರೇಶಸ್ವಾಮಿ ಹಿರೇಮಠರಿಂದ ಸಂಗೀತ ಗಾಯನ, ವಚನ, ತತ್ವಪದಗಳ ಹಾಡುಗಾರಿಕೆ ನಡೆಯಿತು. ಗಂಗಾವತಿಯ ಮಹ್ಮದ್ ರಿಜ್ವಾನ್ ತಬಲಾ ಸಾಥ್ ನೀಡಿದರು.  

ವೀರಶೈವ ಸಮಾಜದ ಪ್ರಮುಖರಾದ ಕೆ.ಎಂ.ಹೇಮಯ್ಯಸ್ವಾಮಿ, ಅರವಿ ಬಸವನಗೌಡ, ಎಂ.ಎಸ್‌.ಶಶಿಧರಶಾಸ್ತ್ರಿ, ಅಯೋಧ್ಯೆ ಶರಣಬಸವರಾಜ ಹಿರೇಮಠ, ಎಸ್‌.ಎಸ್‌.ಎಂ.ಚನ್ನಬಸವರಾಜ, ಎಚ್‌.ಎಂ.ಜಗದೀಶ, ಕೆ.ಎಂ.ಚಂದ್ರಶೇಖರಸ್ವಾಮಿ, ಅಕ್ಕಮಹಾದೇವಿ, ಶಿಲ್ಪಾ, ಮುಕ್ಕುಂದಿ ಶಿವಗಂಗಮ್ಮ, ವಾಲಿ ಶಕುಂತಲಾ, ಕಲ್ಗುಡಿ ರತ್ನಮ್ಮ ಸೇರಿ ಇತರರಿದ್ದರು.  

ಅ.002: ಕಂಪ್ಲಿಯ ಲಿಂ.ಓದ್ಸೋ ಕರಿಬಸಯ್ಯನವರ ಪುಣ್ಯಸ್ಮರಣಾರ್ಥದ ಸಂಗೀತ ಕಾರ್ಯಕ್ರಮದಲ್ಲಿ ಹೊಸಪೇಟೆಯ ವಿಜಯನಗರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಮೃತ್ಯುಂಜಯ ರುಮಾಲೆ ಉಪನ್ಯಾಸ ನೀಡಿದರು.