ಗೃಹಲಕ್ಷಿ-್ಮ ಯೋಜನೆ: ಮಹಿಳೆಯ ಕೈಗೆ ಆರ್ಥಿಕ ಬಲ, ಕುಟುಂಬಕ್ಕೆ ಹೊಸ ಬೆಳಕು
A new turning point for the Grihalakshi family
ಲೋಕದರ್ಶನ ವರದಿ
ಗೃಹಲಕ್ಷಿ-್ಮ ನೆರವು ಕುಟುಂಬದ ಹೊಸ ಹೆಜ್ಜೆ ತಿರುವು
ಗದಗ 17 : ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಗೃಹಲಕ್ಷಿ-್ಮ ಯೋಜನೆ, ರಾಜ್ಯದ ಮಹಿಳೆಯರ ಬದುಕಿನಲ್ಲಿ ಆರ್ಥಿಕ ಭದ್ರತೆಯ ಹೊಸ ಅಧ್ಯಾಯವನ್ನು ಆರಂಭಿಸಿದೆ.
ಕುಟುಂಬದ ಆರ್ಥಿಕ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರವನ್ನು ಅಧಿಕೃತವಾಗಿ ಗುರುತಿಸಿ, ಅವರಿಗೆ ನೇರ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ಈ ಯೋಜನೆ ಸಮಾಜದ ತಳಮಟ್ಟದ ಕುಟುಂಬಗಳಿಗೂ ಭರವಸೆಯ ದೀಪವಾಗಿದೆ.
ಗೃಹಲಕ್ಷಿ-್ಮ ಯೋಜನೆಯ ಮೂಲ ಉದ್ದೇಶ ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವುದಾಗಿದೆ. ಕುಟುಂಬದ ಮುಖ್ಯಸ್ಥೆಯಾದ ಮಹಿಳೆಗೆ ಪ್ರತಿ ತಿಂಗಳು 2000 ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದ್ದು, ಇದರಿಂದ ಕುಟುಂಬದ ದಿನನಿತ್ಯದ ಖರ್ಚು, ಮಕ್ಕಳ ಶಿಕ್ಷಣ, ಆರೋಗ್ಯ ಸೇವೆಗಳು, ಪೌಷ್ಟಿಕ ಆಹಾರ ಮತ್ತು ಅಗತ್ಯ ವಸ್ತುಗಳ ಖರೀದಿಗೆ ನೆರವಾಗುತ್ತಿದೆ. ಈ ಹಣ ಮಹಿಳೆಯ ಕೈಗೆ ನೇರವಾಗಿ ತಲುಪುವುದರಿಂದ ಮನೆತನದ ಖರ್ಚಿನ ನಿರ್ವಹಣೆಯಲ್ಲಿ ಮಹಿಳೆಯರಿಗೆ ಸ್ವಾಯತ್ತತೆ ಸಿಕ್ಕಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಗೃಹಲಕ್ಷಿ-್ಮ ಯೋಜನೆಯ ಪರಿಣಾಮ ಇನ್ನಷ್ಟು ಸ್ಪಷ್ಟವಾಗಿದೆ. ಕೃಷಿ ಆಧಾರಿತ ಹಾಗೂ ದಿನಗೂಲಿ ಅವಲಂಬಿತ ಕುಟುಂಬಗಳಲ್ಲಿ ಈ ನೆರವು ಆರ್ಥಿಕ ನೆಮ್ಮದಿಯನ್ನು ತಂದಿದ್ದು, ಸಾಲದ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ನಗರ ಪ್ರದೇಶಗಳಲ್ಲಿಯೂ ಕಡಿಮೆ ಆದಾಯದ ಕುಟುಂಬಗಳಿಗೆ ಈ ಯೋಜನೆ ಬದುಕಿನ ಗುಣಮಟ್ಟವನ್ನು ಸುಧಾರಿಸುವ ಸಾಧನವಾಗಿದೆ.
ಅನೇಕ ಮಹಿಳೆಯರು ಈ ಹಣವನ್ನು ಸಣ್ಣ ಉಳಿತಾಯ, ಸ್ವ ಉದ್ಯೋಗ ಅಥವಾ ಮಕ್ಕಳ ಭವಿಷ್ಯಕ್ಕಾಗಿ ಬಳಕೆ ಮಾಡುತ್ತಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
ಯೋಜನೆಯ ಜಾರಿಯಲ್ಲಿ ಪಾರದರ್ಶಕತೆ ಮತ್ತು ತಂತ್ರಜ್ಞಾನಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ನೇರ ಹಣ ವರ್ಗಾವಣೆ ವ್ಯವಸ್ಥೆ (ಆಃಖಿ) ಮೂಲಕ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬಿದ್ದಿದ್ದು, ಫಲಾನುಭವಿಗಳು ತೊಂದರೆಯಿಲ್ಲದೆ ಯೋಜನೆಯ ಲಾಭ ಪಡೆಯುತ್ತಿದ್ದಾರೆ.
ಸರ್ಕಾರದ ವಿವಿಧ ಸೇವಾ ಕೇಂದ್ರಗಳು ಮತ್ತು ಗ್ರಾಮ ಪಂಚಾಯಿತಿಗಳ ಮೂಲಕ ಅರ್ಜಿ ಪ್ರಕ್ರಿಯೆಯನ್ನು ಸರಳಗೊಳಿಸಿರುವುದು ಯೋಜನೆಯ ವ್ಯಾಪಕ ತಲುಪುವಿಕೆಗೆ ಕಾರಣವಾಗಿದೆ.
ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳ ದಿಕ್ಕಿನಲ್ಲಿ ಗೃಹ ಲಕ್ಷಿ-್ಮ ಯೋಜನೆ ಮಹತ್ವದ ಹೆಜ್ಜೆಯಾಗಿದೆ. ಕುಟುಂಬದ ಆರ್ಥಿಕ ನಿರ್ಧಾರಗಳಲ್ಲಿ ಮಹಿಳೆಯರ ಪಾತ್ರವನ್ನು ಬಲಪಡಿಸುವ ಮೂಲಕ ಸರ್ಕಾರ ಸಮಾನತೆಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿದೆ. ದೀರ್ಘಾವಧಿಯಲ್ಲಿ ಮಹಿಳೆಯರ ಶಿಕ್ಷಣ, ಆರೋಗ್ಯ ಹಾಗೂ ಸ್ವಾವಲಂಬನೆಗೆ ಈ ಯೋಜನೆ ಪೂರಕವಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗುತ್ತಿದೆ.
ಒಟ್ಟಿನಲ್ಲಿ, ಗೃಹ ಲಕ್ಷಿ-್ಮ ಯೋಜನೆ ಮನೆಮನೆಗೆ ಆರ್ಥಿಕ ಭರವಸೆ ನೀಡುತ್ತಿರುವ ಜನಪರ ಕಾರ್ಯಕ್ರಮವಾಗಿದ್ದು, ಮಹಿಳಾ ಸಬಲೀಕರಣದ ದಿಟ್ಟ ಮಾದರಿಯಾಗಿ ಹೊರಹೊಮ್ಮುತ್ತಿದೆ. ಯೋಜನೆಯ ಸದುಪಯೋಗ ಪಡೆದು ಮಹಿಳೆಯರು ತಮ್ಮ ಕುಟುಂಬದ ಹಾಗೂ ಸಮಾಜದ ಭವಿಷ್ಯವನ್ನು ಇನ್ನಷ್ಟು ಬಲಪಡಿಸುವ ಸಮಯ ಬಂದಿದೆ.
ಗೃಹ ಲಕ್ಷಿ-್ಮ ಯೋಜನೆ ಮಹಿಳೆಯರಿಗೆ ಕೇವಲ ಆರ್ಥಿಕ ನೆರವಲ್ಲ, ಅದು ಅವರ ಆತ್ಮಗೌರವವನ್ನು ಹೆಚ್ಚಿಸುವ ಕಾರ್ಯಕ್ರಮವಾಗಿದೆ. ಮಹಿಳೆ ಸಬಲವಾದರೆ ಕುಟುಂಬ ಮತ್ತು ಸಮಾಜದ ಪ್ರಗತಿ ವೇಗಗೊಳ್ಳುತ್ತದೆ. ಪ್ರತಿಯೊಬ್ಬ ಅರ್ಹ ಮಹಿಳೆಗೂ ಯೋಜನೆಯ ಪ್ರಯೋಜನ ತಲುಪಿಸುವುದು ನಮ್ಮ ಸರ್ಕಾರದ ಬದ್ಧತೆ.
-ಎಚ್ ಕೆ ಪಾಟೀಲ,
ಗದಗ ಜಿಲ್ಲಾ ಉಸ್ತುವಾರಿ ಸಚಿವರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 