ಕುಟುಂಬದಲ್ಲಿ ತಾಯಿ ಪಾತ್ರ ಬಹುಮುಖಿಯಾಗಿರುತ್ತದೆ : ಪ್ರಾಧ್ಯಾಪಕಿ ಚಿತ್ರಾ ನಾಯಕ

 ಕುಟುಂಬದಲ್ಲಿ ತಾಯಿ ಪಾತ್ರ ಬಹುಮುಖಿಯಾಗಿರುತ್ತದೆ : ಪ್ರಾಧ್ಯಾಪಕಿ ಚಿತ್ರಾ ನಾಯಕ A mother's role in the family is multifaceted: Professor Chitra Nayak

ಲೋಕದರ್ಶನ ವರದಿ  

      ಧಾರವಾಡ 31:   ತಾಯಿ ಕುಟುಂಬ ಜೀವನದ ಅನಂತ ಬೆಳಕು. ತನ್ನ ಬದುಕಿನ ಸರ್ವಸ್ವವನ್ನೇ ಮಕ್ಕಳಿಗಾಗಿ ತ್ಯಾಗಮಾಡುವ ಕರುಣಾಮಯಿ. ಕುಟುಂಬದಲ್ಲಿ ತಾಯಿ ಪಾತ್ರ ಬಹುಮುಖಿಯಾಗಿರುತ್ತದೆ ಎಂದು ಸೊಲ್ಲಾಪುರದ ಬಿ.ಇಡಿ ಕಾಲೇಜ ವಿಶ್ರಾಂತ ಪ್ರಾಧ್ಯಾಪಕಿ ಚಿತ್ರಾ ನಾಯಕ(ಶರಯೂ ಪ್ರಭು) ಅಭಿಪ್ರಾಯ ಪಟ್ಟರು. ಕರ್ನಾಟಕ ವಿದ್ಯಾವರ್ಧಕ ಸಂಘವು ‘ದಿ. ಮಹಾಲಿಂಗಮ್ಮ ನಿಂಗಪ್ಪ ಸಾವಳಗಿ ದತ್ತಿ’ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. ಕುರಿತು ಮಾತನಾಡುತ್ತಿದ್ದರು.   

ದಿ. ಮಹಾಲಿಂಗಮ್ಮ ಸಾವಳಗಿ ಒಬ್ಬ ಶ್ರೇಷ್ಠ ತಾಯಿಯಲ್ಲಿರಬೇಕಾದ ಎಲ್ಲಾ ಗುಣಗಳಿದ್ದವು. ಸುಸ್ವಭಾವ ಸಹನಶೀಲರಾದ ಅವರು ಶರಣ ಸಂಸ್ಕೃತಿಯಂತೆ ಬಾಳಿದವರು. ಎಲ್ಲರನ್ನು ಪ್ರೀತಿಸುವ ಅನಂತ ಗುಣ ಅವರಲ್ಲಿತ್ತು. ಕೂಡು ಕುಟುಂಬದಲ್ಲಿ ಹೇಗೆ ಬದುಕಬೇಕೆಂಬುದಕ್ಕೆ ಅವರೇ ನಮಗೆಲ್ಲಾ ಮಾದರಿ. ಹಿರಿಯರ ಜೊತೆ ಕಿರಿಯರನ್ನು ಪ್ರೀತಿಸುವ ಉದಾರತೆ ಅವರಲ್ಲಿತ್ತು. ಎಲ್ಲಾ ಮಕ್ಕಳಿಗೂ ಮಮತೆಯ ಮಾತೆಯಾಗಿ ಒಳ್ಳೆ ಸಂಸ್ಕಾರ ನೀಡಿದರು. ಸಕಲರಿಗೂ ಒಳ್ಳೆಯದನ್ನೇ ಬಯಸಿದ ಮಾತೃ ಹೃದಯ ಅವರಲ್ಲಿತ್ತು. ಎಲ್ಲದರಲ್ಲೂ ನೈಪುಣ್ಯತೆ ಅವರದಾಗಿತ್ತು ಎಂದು ಹೇಳಿದರು. 

ಕ.ವಿ.ವಿ ವೇಮನ ಪೀಠದ ಸಂಯೋಜಕರಾದ ಡಾ. ಹೇಮೆರೆಡ್ಡಿ ನೀಲಗುಂದ “ಮಹಾನ ಮಹಿಳೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ” ವಿಷಯದ ಕುರಿತು ಮಾತನಾಡಿ, ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಪೂರ್ವದಲ್ಲಿ ರಡ್ಡಿ ಸಾಮ್ರಾಜ್ಯವು ಸ್ಥಾಪನೆಯಾಗಿತ್ತು. ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರು ಶರಣ ಪರಂಪರೆಯ ಒಂದು ಭಾಗವಾಗಿದ್ದರು. ಈ ಇರ್ವರೂ ಆತ್ಮಸಾಕ್ಷಿಗಣುಗುಣವಾಗಿ ಬಾಳಿ ಸಮಾಜಕ್ಕೊಂದು ದಾರಿ ದೀಪವಾಗಿದ್ದರು. ಮಹಿಳೆಯರು ಇಂದು ಈ ಶರಣರಂತೆ ಚಿಂತನಾಶೀಲರಾಗಬೇಕು. ಸತ್ಯದ ಅರಿವು ಮಾಡಿಕೊಳ್ಳಬೇಕು. ಇನ್ನೊಬ್ಬರ ಜೊತೆ ಎಂದೂ ಹೋಲಿಕೆ ಮಾಡಿಕೊಳ್ಳದೇ ಇದ್ದುದರಲ್ಲಿಯೇ ಸಂತೃಪ್ತ ಜೀವನ ನಡೆಸಬೇಕು. ಇದು ಶರಣ ಸಂಸ್ಕೃತಿ ಪರಂಪರೆ ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಕ.ವಿ.ವ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಮಾತನಾಡಿ, ಕುಟುಂಬ ಜೀವನದಲ್ಲಿ ತಾಯಿಯ ಪಾತ್ರ ಅನನ್ಯವಾದುದು ಕುಟುಂಬ ಸಮರ್ಥವಾಗಿ ನಡೆಸುವ ಶಕ್ತಿ ಮಹಿಳೆಗೆ ಮಾತ್ರ ಸಾಧ್ಯ ಎಂದು ಹೇಳಿದರು. ದತ್ತಿ ದಾನಿಗಳ ಪರವಾಗಿ ವೇದಿಕೆಯಲ್ಲಿದ್ದ ರಾಜೇಂದ್ರ ಸಾವಳಗಿ ದತ್ತಿಯ ಆಶಯ ಕುರಿತು ಮಾತನಾಡಿದರು.  ಸತೀಶ ತುರಮರಿ ಸ್ವಾಗತಿಸಿದರು, ಶಂಕರ ಕುಂಬಿ ನಿರೂಪಿಸಿದರು. ವಿಶ್ವೇಶ್ವರಿ ಬ. ಹಿರೇಮಠ ವಂದಿಸಿದರು.  

ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಬಿ. ಎಲ್‌. ಪಾಟೀಲ, ವಿಜಯಕುಮಾರ ಗಿಡ್ನವರ,  ಎಸ್‌. ಜಿ. ಪಾಟೀಲ, ಅಕ್ಕಮಹಾದೇವಿ ಸಂಕನಗೌಡರ, ವೀಣಾ ಸಂಕನಗೌಡರ, ಪ್ರಕಾಶ ಧರಣೆಪ್ಪಗೌಡರ, ಸಿ. ಎಸ್‌. ಪಾಟೀಲ, ಯಶವಂತ ನಲವಡಿ, ಅಶೋಕ ಬೆಳ್ಳಿವಾಲೆ, ಸುಪ್ರಿಯಾ ಭಟ್, ಪ್ರೊ. ಬಿ. ಎಸ್‌. ಶಿರೋಳ, ಸತ್ಯಭೋದ ಸವಣೂರ, ಯು. ಎಸ್‌. ಕುನ್ನಿಭಾವಿ, ಶಂಕರಲಿಂಗ ಶಿವಳ್ಳಿ, ಬಿ. ಎಸ್‌. ಮಾಳವಾಡ, ರಾಮಚಂದ್ರ ಗೆದ್ದೇಣ್ಣವರ, ಪ್ರೊ. ಚಲವಾದಿ, ಶಂಕರ ಬೆಟಗೇರಿ, ಸುರೇಶ ಭಂಡಾರಿ, ಶಿವನಗೌಡ ಪಾಟೀಲ ಸೇರಿದಂತೆ ಸಾವಳಗಿ ಪರಿವಾರದವರು ಇದ್ದರು.