ಮೂಢನಂಬಿಕೆ ಮಟ್ಟ ಹಾಕಲು ಪವಾಡ ರಹಸ್ಯ ಬಯಲು
ಹಾವೇರಿ : ಬಾಲಭವನ ಸೊಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾಯರ್ಾಲಯ ಬ್ಯಾಡಗಿ ಹಾಗೂ ಆಶಾಕಿರಣ ರೂರಲ್ ಡೆವಲಪ್ಮೆಂಟ್ ಸೊಸೈಟಿ(ರಿ) ಚಿಕ್ಕಮುಗದೂರ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಬ್ಯಾಡಗಿ ರಂಗಮಂದಿರದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರದಲ್ಲಿ ಪವಾಡ ಬಯಲು ಕಾರ್ಯಕ್ರಮವನ್ನು ಶಿಕ್ಷಕರಾದ ಆರ್.ಸಿ.ನಂದಿಹಳ್ಳಿ ನಡೆಸಿಕೊಟ್ಟರು.
ಆರ್.ಸಿ.ನಂದಿಹಳ್ಳಿ ಮಾತನಾಡಿ, ಮೂಡನಂಬಿಕೆಯನ್ನು ಮಟ್ಟಹಾಕಲು, ಮುಗ್ದ ಜನರು ಮೋಸ ಹೋಗದಂತೆ, ವೈಜ್ಞಾನಿಕ ವೈಚಾರಿಕತೆ ಬೆಳೆಸಲು ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಿರಂತರವಾಗಿ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ. ಅಲ್ಲದೆ ಮಕ್ಕಳಲ್ಲಿ ವೈಜ್ಞಾನಿಕವಾಗಿ ಚಿಂತನ-ಮಂಥನ ಮಾಡಲು ಹಾಗೂ ವಿಜ್ಞಾನ ವಿಷಯದಲ್ಲಿ ಆಸಕ್ತಿದಾಯಕ ಕಲಿಕೆಗೆ ಪೂರಕವಾಗಿದೆ ಎಂದರು.
ಆಶಾಕಿರಣ ಸಂಸ್ಥೆಯ ಅಧ್ಯಕ್ಷರಾದ ಮುತ್ತುರಾಜ ಮಾದರ ಮಾತನಾಡಿ ಮೂಡನಂಬಿಕೆ ಎಂದ ತಕ್ಷಣ ನಮಗೆ ನೆನೆಪಾಗುವುದು ಮಾಟ, ಮಂತ್ರ, ದೆವ್ವ, ಭೂತಾರಾಧನೆ, ಬೆಕ್ಕು ಅಡ್ಡ ಹೊಯಿತು, ಒಳ್ಳೆ ಸಂದರ್ಭದಲ್ಲಿ ಸೀನು, ಕುರಿ-ಕೋಣ ಬಲಿಕೊಡುವುದು, ನೊಡಿದ ತಕ್ಷಣ ಬೆಂಕಿ ಹತ್ತುವುದು, ಮಂತ್ರದ ನಿಂಬೆಹಣ್ಣು ಮುಂತಾದ ಹತ್ತು ಹಲವಾರು ಕಂದಾಚಾರಗಳಿಗೆ ಮುಗ್ದ ಜನ ಬಲಿಯಾಗುತ್ತಿದ್ದಾರೆ.
ಡೋಂಗಿ ಬಾಬಾಗಳಿಂದ ಹಾಗೂ ಸ್ವಯಂ ಘೋಷಿತ ದೇವಮಾನವರಿಂದ ಮುಗ್ದ ಮಹಿಳೆಯರು, ಅಮಾಯಕರು ಮೋಸಕ್ಕೆ ಒಳಗಾಗುತ್ತಿದ್ದಾರೆ, ಇವೆಲ್ಲವುಗಳ ಜಾಗೃತಿಗಾಗಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಎಂ.ಡಿ.ಚಿಕ್ಕಣ್ಣನವರ, ಸಂಪನ್ಮೂಲ ವ್ಯಕ್ತಿಗಳಾದ ಶ್ಯಾಮ್, ರಾಧಾ, ರಮೇಶ ನಾಯ್ಕ್, ಮಂಗಳಾ ಮತ್ತು ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 