ಲೋಕದರ್ಶನ ವರದಿ
ಲಿಂಗರಾಜ ಕಾಲೇಜಿನಿಂದ ಬೃಹತ್ ಸೈಕಲ್ ಮ್ಯಾರಾಥಾನ್
ಬೆಳಗಾವಿ 23: ಸದೃಢವಾದ ಆರೋಗ್ಯಕ್ಕೆ ಶಾರೀರಕ ವ್ಯಾಯಾಮ ಅಗತ್ಯವಾಗಿದೆ. ಉತ್ತಮವಾದ ಆರೋಗ್ಯದಿಂದ ಜೀವನವನ್ನು ಸಫಲಗೊಳಿಸಲು ಸಾಧ್ಯ. ಇಂದಿನ ಯುವ ಜನಾಂಗ ಶಾರೀರಕವಾಗಿ ಸದೃಢವಾಗಿರಬೇಕೆಂದು ಬೆಳಗಾವಿಯ ಪೋಲಿಸ್ ಆಯುಕ್ತರಾದ ಯಡಾ ಮಾರ್ಟಿನ ಮಾರ್ಬನ್ಯಾಂಗ್ ಹೇಳಿದರು.
ಅವರು ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜು, ಸಾಯಿ ಫೌಂಡೇಶನ್, ಸ್ಫೋರ್ಟ ಅರ್ಥೋರಿಟಿ ಆಫ್ ಇಂಡಿಯಾ, ಫಿಟ್ ಇಂಡಿಯಾ ಇವರ ಸಹಯೋಗದಲ್ಲಿ ’ಸಂಡೇ ಆನ್ ಸೈಕಲೋಥಾನ್’ವನ್ನು ಉದ್ಘಾಟಿಸಿ ಮಾತನಾಡಿದರು.
ದೈಹಿಕ ಹಾಗೂ ಮಾನಸಿಕವಾದ ಆರೋಗ್ಯವನ್ನು ಉತ್ತಮವಾಗಿಟ್ಟಕೊಳ್ಳುವುದು ಇಂದಿನ ಅಗತ್ಯವಾಗಿದೆ. ನಿತ್ಯ ಅಸಂಖ್ಯ ರೋಗಗಳು ಮನುಷ್ಯನನ್ನು ಆವರಿಸಿಕೊಳ್ಳುತ್ತಿವೆ. ನಮ್ಮ ಬದಲಾದ ಜೀವನ ಪದ್ಧತಿಯಿಂದ ಜೀವನ ಓಷಧೋಪಚಾರದಲ್ಲಿ ಮುನ್ನಡೆಸುವಂತಾಗುತ್ತಿದೆ. ಯುವಜನಾಂಗವು ಶಾರೀರಕವಾಗಿ ಸದೃಢವಾಗಿ ದೇಶದ ಬೆಳವಣಿಗೆಯಲ್ಲಿ ಕೈಜೋಡಿಸಬೇಕು. ಈ ಪರಿಸರವನ್ನು ಸ್ನೇಹಿಮಯವನ್ನಾಗಿ ರೂಪಿಸಬೇಕು. ನಿಮ್ಮ ಪಾತ್ರ ಬಹುದೊಡ್ಡದು. ಸಮಾಜಕ್ಕೆ ನಿಮ್ಮಿಂದ ಉತ್ತಮವಾದ ಸಂದೇಶ ಹೋಗಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಡಾ.ಎಚ್.ಎಸ್.ಮೇಲಿನಮನಿಯವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ರಚನಾತ್ಮಕ ಹಾಗೂ ಕ್ರಿಯಾಶೀಲ ಮನಸ್ಸನ್ನು ರೂಪಿಸುವಲ್ಲಿ ಸೈಕಲೋಥಾನ್ ದಂತಹ ಚಟುವಟಿಕೆಗಳು ಮಹತ್ವ ವಾಗಿವೆ. ಪರಿಸರಸ್ನೇಹಿ ಜೀವನವನ್ನು ರೂಪಿಸಿಕೊಂಡರೆ ಜಾಗತಿಕ ತಾಪಮಾನವನ್ನು ತೊಡೆದುಹಾಕಲು ಸಾಧ್ಯ. ಜನರಲ್ಲಿ ಪ್ರಜ್ಞೆಯನ್ನು ಮೂಡಿಸುವುದಕ್ಕಾಗಿ ಇಂದು ನಾವು ಸೈಕಲ್ ಜಾಥಾ ಆಯೋಜಿಸಿದ್ದೇವೆ. ಯುವಜನಾಂಗವು ನಿತ್ಯ ತಮ್ಮ ಬದುಕಿನಲ್ಲಿ ರೂಢಿಸಿಕೊಳ್ಳಬೇಕೆಂದು ಕರೆನೀಡಿದರು.
ದೈಹಿಕ ನಿರ್ದೇಶಕರಾದ ಡಾ. ಸಿ.ರಾಮರಾವ್ ಪ್ರಾಸ್ತಾವಿಕ ನುಡಿಗಳನ್ನಾಡಿ ವಿದ್ಯಾರ್ಥಿಗಳಲ್ಲಿ ದೈಹಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದನ್ನು ಆಯೋಜಿಸಲಾಗಿದೆ ಎಂದರು. ಅಂತರಾಷ್ಟ್ರೀಯ ಅಥ್ಲೇಟಿಕ್ ತರಬೇತುದಾರ ರಾಮ ಬುಡಕೆ, ದೈಹಿಕ ನಿರ್ದೇ ಶಕರಾದ ಡಾ.ರೀಚಾ ರಾವ್, ಡಾ.ಶಿವಾನಂದ ಬುಲಬುಲೆ, ಡಾ.ಎಚ್.ಎಂ.ಚನ್ನಪ್ಪಗೋಳ, ವಿಶ್ವನಾಥ ಖೋತ, ವಿನಾಯಕ ವರೂಟೆ, ಸುನೀತ ಮೂಡಲಗಿ, ವಿ.ಪಿ.ಹಿರೇಮಠ, ಪ್ರೊ. ಪಂಕಜ ದೇಸಾಯಿ ಉಪಸ್ಥಿತರಿದ್ದರು. ಡಾ.ಮಹೇಶ ಗುರನಗೌಡರ ನಿರೂಪಿಸಿ ವಂದಿಸಿದರು. ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೈಕಲೋಥಾನದಲ್ಲಿ ಪಾಲ್ಗೊಂಡಿದ್ದರು. ಬೆಳಗಾವಿ ಸ್ಮಾರ್ಟಸಿಟಿ ಪರಿಸರ ಸ್ನೇಹಿ ಬೈಸಿಕಲ್ ನೂರಕ್ಕೂ ಹೆಚ್ಚು ಸೈಕಲ್ಗಳನ್ನು ನೀಡಿ ಸಹಕಾರ ನೀಡಿ ಪ್ರೋತ್ಸಾಹಿಸಿದರು.