ಯಲ್ಲಾಪೂರ-ಹಳಿಯಾಳ ರಸ್ತೆಯ ಮೇಲೆ ಒಂಟಿ ಸಲಗ ಬಸ್ ಗೆ ಅಡ್ಡವಾಗಿ ನಿಂತಿದೆ

  ಯಲ್ಲಾಪೂರ-ಹಳಿಯಾಳ   ರಸ್ತೆಯ ಮೇಲೆ ಒಂಟಿ ಸಲಗ ಬಸ್ ಗೆ ಅಡ್ಡವಾಗಿ ನಿಂತಿದೆ A lone lorry stands across from a bus on the Yellapur-Haliala road.

ಲೋಕದರ್ಶನ ವರದಿ 

  ಯಲ್ಲಾಪೂರ-ಹಳಿಯಾಳ   ರಸ್ತೆಯ ಮೇಲೆ ಒಂಟಿ ಸಲಗ ಬಸ್ ಗೆ ಅಡ್ಡವಾಗಿ ನಿಂತಿದೆ 

 ದಾಂಡೇಲಿ 18:  ಹುಲಿ ಸಂರಕ್ಷಿತ ಪ್ರದೇಶ ಸೇರಿದಂತೆ ಸಮೀಪದ ಹಳ್ಳಿಗಳಲ್ಲಿ ಕಳೆದ ಒಂದು ವಾರದಿಂದ ಒಂಟಿ ಸಲಗವೊಂದು ಕಾಣಿಸಿಕೊಳ್ಳುತ್ತಿದೆ. ಕುಳಗಿ, ಬೊಮ್ಮನಳ್ಳಿ, ಕೇಗದಾಳ ಮತ್ತು ಭಾಗವತಿ ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರಮುಖ ರಸ್ತೆಗಳಲ್ಲಿ ಒಂಟಿ ಸಲಗ ನಿಂತು ವಾಹನ ಸಂಚಾರಕ್ಕೆ ತಡೆಯೊಡ್ಡುತ್ತಿದೆ. ಬುಧವಾರ ಬೆಳಿಗ್ಗೆ ಯಲ್ಲಾಪೂರ -ಹಳಿಯಾಳ ರಸ್ತೆ ಮಾರ್ಗದ ಭಾಗವತಿ ಸಮೀಪ ಒಂಟಿ ಸಲಗ ಕಾಣಿಸಿಕೊಂಡಿದೆ. ಈ ವೇಳೆ ಬಸ್ ಚಾಲಕ ಎಚ್ಚರಿಕೆಯಿಂದ ವಾಹನವನ್ನು ನಿಲ್ಲಿಸಿ, ಸಲಗ ಕಾಡಿನೊಳಗೆ ತೆರಳಿದ ನಂತರ ಸಂಚಾರ ಮುಂದುವರೆಸಿದ್ದಾರೆ. ಇದೇ ರೀತಿ ನಾಲ್ಕೈದು ದಿನಗಳ ಹಿಂದೆ ಬೊಮ್ಮನಳ್ಳಿ ಅಂಬಿಕಾನಗರ ರಸ್ತೆಯಲ್ಲಿ ಪ್ರವಾಸಿಗರ ವಾಹನ ಮತ್ತು ಬಸ್‌ಗೆ ಒಂಟಿ ಸಲಗ ಅಡ್ಡ ಬಂದು ಭೀತಿಯುಂಟು ಮಾಡಿದ ಘಟನೆ ವರದಿಯಾಗಿದ ಕಾಡಾನೆಗಳು ಬೆಳೆ ನಾಶ ಮಾಡುವದು, ಜನವಸತಿ ಪ್ರದೇಶಗಳಿಗೆ ನುಗ್ಗಿ ಭೀತಿ ಸೃಷ್ಟಿಸುವದು ಸಾಮಾನ್ಯವಾಗಿದೆ. ವಿಶೇಷವಾಗಿ ಈ ಭಾಗದಲ್ಲಿ ಬರುವ ಪ್ರವಾಸಿಗರಿಗೆ ಹಾಗೂ ವಾಹನ ಚಾಲಕರಿಗೆ ಅರಣ್ಯ ಇಲಾಖೆಯಿಂದ ವಿಶೇಷ ಸೂಚನೆ ನೀಡಲಾಗಿದ್ದು, ಅರಣ್ಯ ಪ್ರದೇಶಗಳಲ್ಲಿ ರಸ್ತೆ ಬದಿಯಲ್ಲಿ ನಿಲ್ಲಬಾರದು. ಪೋಟೋ ಅಥವಾ ವಿಡಿಯೋ ತೆಗೆದುಕೊಳ್ಳುವ ನೆಪದಲ್ಲಿ ಆನೆಗಳನ್ನು ಪ್ರಚೋದಿಸಬಾರದು  ಎಂದು  ಮನವಿ ಮಾಡಲಾಗಿದೆ.