ತರಾಸು ಅವರದ್ದು ಕಣ್ಣಿಗೆ ಕಟ್ಟುವಂಥ ಭಾಷೆ: ಶೀರೀಷ ಜೋಶಿ
A lecture on “Durghastamana” – a impression program
ಬೆಳಗಾವಿ 28: ಖ್ಯಾತ ಲೇಖಕ ತರಾಸು ಅವರು ಬರೆದ ಕಾದಂಬರಿ ‘ದುರ್ಗಾಸ್ತಮಾನ’ ದಲ್ಲಿ ಬಳಿಸಿದ ಭಾಷೆ ತುಂಬ ಅಪ್ಯಾಯಮಾನವಾದುದು. ಸಂಪೂರ್ಣ ಚಿತ್ರದುರ್ಗ, ಚಿತ್ರದುರ್ಗದ ಇತಿಹಾಸವನ್ನು ಕಣ್ಣಿಗೆ ಕಟ್ಟುವಂತೆ ತರಾಸು ಅವರು ಬರೆದಿದ್ದಾರೆ. ತರಾಸು ಅವರು ಬಳಿಸಿದಂಥ ಬಾಷೆ. ಕನ್ನಡವನ್ನು ಎಷ್ಟು ಸುಂದರವಾಗಿ, ಸಮರ್ಥ ವಾಗಿ ಬಳಿಸಿಕೊಳ್ಳಬಹುದು ಎಂಬುದಕ್ಕೊಂದು ಇವರ ಬರೆವಣಿಗೆ ಮಾದರಿಯಾಗಿದೆ. ಕಣ್ಣಿಗೆ ಕಟ್ಟವಂತಹ ಭಾಷೆ ತರಾಸು ಅವರದ್ದು ಎಂದು ಹಿರಿಯ ಲೇಖಕ ನಾಟಕಕಾರ ಶೀರೀಷ ಜೋಶಿಯವರು ಇಂದಿಲ್ಲಿ ಹೇಳಿದರು.
ನಗರದ ರಂಗಸಂಪದ ಬೆಳಗಾವಿ ತಂಡದ ಸ.ಮಾ.ಸ. ದವರು ಇದೇ ದಿ.26 ರಂದು ರವಿ ಹಿರೇಮಠ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ಖ್ಯಾತ ಕಾದಂಬರಿಕಾರ ತರಾಸು ಅವರ ಐತಿಹಾಸಿಕ ಕಾದಂಬರಿ "ದುರ್ಗಾಸ್ಥಮಾನ" ಕುರಿತ ಉಪನ್ಯಾಸ -ಅನಿಸಿಕೆ ಕಾರ್ಯಕ್ರಮ ಪ್ರಮುಖ ಭಾಷಣಕಾರರಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.
ತಪ್ಪು ಗ್ರಹಿಕೆಗಳನ್ನ ತೊಡೆದು ಹಾಕಿ ಐತಿಹಾಸಿಕವಾಗಿ ಸಾಕ್ಷಾಧಾರಗಳಿಂದ ವಸ್ತುಸ್ಥಿತಿಗಳನ್ನು ಓದುಗರೆದುರು ತೆರೆದಿಡುವುದೇ ಒಬ್ಬ ಬರೆಹಗಾರನ ಆದ್ಯ ಕರ್ತವ್ಯ. ಈ ಕಾದಂಬರಿ ಐತಿಹಾಸಿಕ ಕಾದಂಬರಿ ಬರೆಯುವವರಿಗೊಂದು ಮಾದರಿಯಾಗಿದೆ ಎಂದು ಜೋಶಿ ಅವರು ಹೇಳಿದರು.
ಡಾ.ಭವ್ಯಾ ಸಂಪಗಾರ, ಮಮತಾ ಶಂಕರ, ಮನೋಜ ಚರಂತಿಮಠ, ಪ್ರೊ. ಅಶೋಕ ಬೈಲವಾಡ ಮತ್ತು ಸೀಮಾ ಕುಲಕರ್ಣಿ ದುರ್ಗಾಸ್ತಮಾನ ಕೃತಿಯ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸಮಾಸ ಸಂಸ್ಥೆ ಸಂಚಾಲಕರಾದ ಡಾ. ಅರವಿಂದ ಕುಲಕರ್ಣಿ ಸ್ವಾಗತಿಸಿದರು. ಪದ್ಮಾ ಕುಲಕರ್ಣಿ ಸಮಾರೋಪ ನುಡಿಗಳನ್ನಾಡಿದರು. ರವಿ ಹಿರೇಮಠ ಸ್ವಾಗತಿಸಿದರು. ವೀಣಾ ಹೆಗಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಸಾದ ಕಾರಜೋಳ ವಂದಿಸಿದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 