ಎಲ್‌ಎಲ್‌ಸಿ ಕಾಲುವೆ ಬಳಿ ಬಿದ್ದ ದೊಡ್ಡ ಪ್ರಮಾಣದ ಬೊಂಗಾ : ರೈತರು ಸಾರ್ವಜನಿಕರ:ಜನರ.ಆಕ್ರೋಶ .ಸ್ಥಳಕ್ಕೆ ಧಾಮಿಸದ ಅಧಿಕಾರಿಗಳು :

ಎಲ್‌ಎಲ್‌ಸಿ ಕಾಲುವೆ ಬಳಿ ಬಿದ್ದ ದೊಡ್ಡ ಪ್ರಮಾಣದ ಬೊಂಗಾ : ರೈತರು ಸಾರ್ವಜನಿಕರ:ಜನರ.ಆಕ್ರೋಶ .ಸ್ಥಳಕ್ಕೆ ಧಾಮಿಸದ ಅಧಿಕಾರಿಗಳು :                                                        A large amount of garbage fell near the LLC canal: Farmers are angry with the public. Officials did

ಕಂಪ್ಲಿ23 ತಾಲೂಕಿನ ಕಣವಿತಿಮ್ಮಲಾಪುರ ಗ್ರಾಮದಿಂದ ರಾಮಸಾಗರ ವಿದ್ಯಾಪೀರದ ಹೊಸಪೇಟೆ ರಸ್ತೆಗೆ ಸಾಗುವ ಗುಡ್ಡಗಾಡು ಪ್ರದೇಶದ ಎಲ್‌ಎಲ್‌ಸಿ ಕಾಲುವೆ ಬಳಿಯ ರಸ್ತೆಯಲ್ಲಿ ದೊಡ್ಡ ಪ್ರಮಾಣದ ಬೊಂಗಾ ಬಿದ್ದಿದ್ದು, ಅವಘಾತಕ್ಕೆ ಆಹ್ವಾನಿಸುವಂತಿದ್ದು, ಅಧಿಕಾರಿಗಳ ಕಣ್ಣಿಗೆ ಕಾಣದಂತಾಗಿದೆ.

ಕಣವಿತಿಮ್ಮಲಾಪುರ ಗ್ರಾಮದ ಸಾಕಷ್ಟು ಜನರು ಹೊಸಪೇಟೆಗೆ ಹೋಗಬೇಕಾದರೆ ಇಲ್ಲಿನ ನೆಲದ್ವಾರದಲ್ಲಿ ಹಾದು ಹೋಗಿರುವ ಕಾಲುವೆಯ ಗುಡ್ಡಗಾಡು ಪ್ರದೇಶದಲ್ಲಿರುವ ರಸ್ತೆಯ ಮೂಲಕ ಸಂಚರಿಸುತ್ತಾರೆ. ಆದರೆ, ಕಳೆದ ಶುಕ್ರವಾರ ರಾತ್ರಿ ಸಮಯದಲ್ಲಿ ಏಕಾಏಕಿ ದೊಡ್ಡದೊಂದು ಬೊಂಗಾ ಬಿದ್ದಿದೆ.. ಕಳೆದ ಎರಡ್ಮೂರು ದಿನದ ಹಿಂದೆ ಸುರಿದ ಮಳೆಯ ಆರ್ಭಟಕ್ಕೆ ಗುಡ್ಡಗಾಡಿನ ನೀರಿನ ಸೆಲೆ ಬಂದು ರಸ್ತೆ ಬದಿಯಲ್ಲಿ ನಿಂತಿದ್ದು, ಇದರಿಂದ ಇಲ್ಲಿನ ರಸ್ತೆಯ ಕೆಳಭಾಗವು ಸಂಪೂರ್ಣವಾಗಿ ನೀರಿನ ತಂಪು ಹಿಡಿದು ಬೊಂಗಾ ಬಿದ್ದಿರುವ ಲಕ್ಷಣಗಳಿಗೆ. ಬಿದ್ದಿರುವ ಬೊಂಗಾವನ್ನು ನೋಡಿದರೆ, ಕೆಳಗಡೆ ಇರುವ ನೆಲ ಕಾಣುತ್ತಿಲ್ಲ. ಹೀಗಾಗಿ ಇಲ್ಲಿನ ದೊಡ್ಡ ಪ್ರಮಾಣದಲ್ಲಿ ಬೊಂಗಾ ಬಿದ್ದಿರುವುದು ಗೋಚರವಾಗುತ್ತಿದೆ. 

ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಬೊಂಗಾ ಬಿದ್ದ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿ, ಬೊಂಗಾ ಮುಚ್ಚಿಸಿ, ದುರಸ್ಥಿ ಮಾಡುವ ಮೂಲಕ ಇಲ್ಲಿನ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ. ಮುಂದೆ ಆಗುವ ಅವಘಡವನ್ನು ತಪ್ಪಿಸಲು ಸೂಕ್ತಕ್ರಮವಹಿಸಬೇಕೆಂದು ಮುಖಂಡರಾದ ತಳವಾರ ರಾಮಲಿಸ್ಚಾಮಿ, ಶಿವಪ್ಪ, ದೊಡ್ಡನಾಗಪ್ಪ, ಬಸವರಾಜ ಆಗ್ರಹಿಸಿದರು.