ಕಲಾವಿದ ರಾಜು ತಾಳಿಕೋಟಿಗೆ ಭಾವಪೂರ್ಣ ಶ್ರದ್ಧಾಂಜಲಿ
A heartfelt tribute to artist Raju Talikoti
ಕಲಾವಿದ ರಾಜು ತಾಳಿಕೋಟಿಗೆ ಭಾವಪೂರ್ಣ ಶ್ರದ್ಧಾಂಜಲಿ
ತಾಳಿಕೋಟಿ 14: ನಾಡು ಕಂಡ ಶ್ರೇಷ್ಠ ಹಾಸ್ಯ ನಟ, ರಂಗ ಕಲಾವಿದ, ಚಿತ್ರನಟ ಹಾಗೂ ರಂಗಾಯಣದ ನಿರ್ದೇಶಕರಾದ ರಾಜು ತಾಳಿಕೋಟಿಯವರು ಸೋಮವಾರ ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ತಾಳಿಕೋಟಿ ಪಟ್ಟಣದ ನಾಗರಿಕರು ಶಿವಾಜಿ ವೃತದಲ್ಲಿ ಮಂಗಳವಾರ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡ ಶಿವಶಂಕರ ಹಿರೇಮಠ ಮಾತನಾಡಿ ತನ್ನ ಅದ್ಭುತವಾದ ಕಲೆಯ ಮೂಲಕ ತಾಳಿಕೋಟಿ ಪಟ್ಟಣದ ಹೆಸರನ್ನು ಇಡೀ ನಾಡು ಮತ್ತು ರಾಷ್ಟ್ರದಲ್ಲಿ ಬೆಳಗಿಸಿದ ಶ್ರೇಷ್ಠ ಹಾಸ್ಯ ಕಲಾವಿದ ರಾಜು ತಾಳಿಕೋಟಿ ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ತಮ್ಮ ಅಗಾಧವಾದ ಪ್ರತಿಭೆಯಿಂದ ಜಾತಿಯನ್ನು ಮೀರಿ ಅವರು ಬೆಳೆದವರಾಗಿದ್ದರು. ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದ ಅವರು ಇಷ್ಟೊಂದು ಎತ್ತರಕ್ಕೆ ಬೆಳೆದಿದ್ದರೂ ಅವರಲ್ಲಿ ಅಹಂಕಾರದ ಲವಲೇಶವು ಇರಲಿಲ್ಲ. ಸರ್ಕಾರ ಅವರ ಹೆಸರಿನಲ್ಲಿ ಅವರ ಪುತ್ತಳಿಯನ್ನು ನಿರ್ಮಾಣ ಮಾಡಿ ಅವರ ಸೇವೆ ಸದಾ ಸ್ಮರಿಸುವಂತೆ ಮಾಡಬೇಕು. ಭಗವಂತ ಅವರ ಕುಟುಂಬಕ್ಕೆ ಅವರ ಈ ಅಗಲಿಕೆಯನ್ನು ಸಹಿಸುವ ಶಕ್ತಿ ಹಾಗೂ ರಾಜು ತಾಳಿಕೋಟಿ ಅವರ ಆತ್ಮಕ್ಕೆ ಶಾಂತಿ ನೀಡಲೆಂದು ಎಲ್ಲರ ಪರವಾಗಿ ಪ್ರಾರ್ಥಿಸುತ್ತೇನೆ ಎಂದರು.
ಶ್ರದ್ಧಾಂಜಲಿ ಸಭೆಯಲ್ಲಿ ಕಸಾಪ ಅಧ್ಯಕ್ಷ ಆರ್. ಎಲ್.ಕೊಪ್ಪದ,ಡಾ.ನಜೀರ ಕೋಳ್ಯಾಳ, ಸಂಜೀವ ಹಜೇರಿ, ರಾಘವೇಂದ್ರ ಚವಾಣ, ರವಿ ಕಟ್ಟಿಮನಿ, ಸುವರ್ಣಾ ಬಿರಾದಾರ, ವಿಠಲ್ ಮೋಹಿತೆ, ರಾಘು ಮನೆ,ರಾಜು ಅಲ್ಲಾಪೂರ,ಆಸೀಫ ತಾಳಿಕೋಟಿ, ರಮೇಶ್ ಮೂಕೀಹಾಳ ಮತ್ತಿತರರು ಇದ್ದರು.ಅ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 