ಲಿಂಗೈಕ್ಕೆ ದಾನೇಶ್ವರ ಶ್ರೀಗಳಿಗೆ ಕಣ್ಣೀರಿನ ವಿದಾಯ ತಿಳಿಸಿದ ಭಕ್ತ ಸಮೂಹ

ಲಿಂಗೈಕ್ಕೆ ದಾನೇಶ್ವರ ಶ್ರೀಗಳಿಗೆ ಕಣ್ಣೀರಿನ ವಿದಾಯ ತಿಳಿಸಿದ ಭಕ್ತ ಸಮೂಹ  A group of devotees bid a tearful farewell to Lingayekke Daneshwara Sri

            ಗುರ್ಲಾಪುರ 06  ಶ್ರೀ ಬಸವ ಗೋಪಾಲ ನೀಲಮಾನಿಕ ಮಠ ಸುಕ್ಷೇತ್ರ ಬಂಡಿಗಣಿ ಮಠದ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಅಪ್ಪಾಜಿಯವರ  ಪಾರ್ಥಿವ ಶರೀರವು ಬೆಳಗಾವಿಯಿಂದ  ಹುಟ್ಟೂರು ಸವದಿಗೆ ಹೋಗುವ ಮಾರ್ಗ ಮಧ್ಯ ಗುರ್ಲಾಪುರ ನಲ್ಲಿ  ಪೋಲಿಸ್ ಬಿಗಿ ಬಂದೋಬಸ್ತ್‌ ನಲ್ಲಿ ಪಾರ್ಥಿವ ಶರೀರದ ವಾಹನ ಬರುತ್ತಿದ್ದಂತೆ 2 ಕಿಲೋ ಮೀಟರ್  ರಸ್ತೆ ಉದ್ದಕ್ಕೂ ಸೇರಿದ  ಗುರ್ಲಾಪೂರ ಗುರ್ಲಾಪೂರ ಇಟನಾಳ ಹಳ್ಳೂರ ಕಪ್ಪಲಗುದ್ದಿ ಮೂಡಲಗಿ ಹಾಗೂ ಸುತ್ತಮುತ್ತಲಿನ ಗ್ರಾಮದ  ಭಕ್ತರು ದಾನೇಶ್ವರ ಶ್ರೀಗಳಿಗೆ ಹೂ ಹಾರಿಸಿ ಅಂತಿಮ ದರ್ಶನ ಪಡೆದರಢದ  

              ಸಾವಿರಾರು ಭಕ್ತರ ಆಕ್ರಂದನ ಮುಗಿಲು ಮುಟ್ಟಿತು ಅನೇಕ ಗ್ರಾಮಗಳಲ್ಲಿ ಭಕ್ತರ ಕಣ್ಣಿರಿನ ವಿದಾಯ  ಪುಷ್ಪಾರ್ಚನೆ  ಸಲ್ಲಿಸಿದ ಬಕ್ತ ಸಮೂಹ .ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಾನೇಶ್ವರ ಶ್ರೀಗಳು ಫಲಕಾರಿಯಾಗದಫ ಲಿಂಗೈಕ್ಯರಾದರು.  ಕೋಟ್ಯಾಂತರ ಭಕ್ತರನ್ನು ಹೊಂದಿರುವ ಪವಾಡ ಪುರುಷ, ರಾಜ್ಯ ಹೊರ ರಾಜ್ಯಗಳಲ್ಲಿ ಅನ್ನ ದಾಸೋಹ ಜ್ಞಾನ ದಾಸೋಹ ನೀಡಿ ಪ್ರಖ್ಯಾತ ಹೊಂದಿ, ನಂಬಿದ ಭಕ್ತರನ್ನು ತನ್ನ  ಒಡಲೊಳಿಟ್ಟು ಕಾಯ್ದು, ಭಕ್ತರ ಯಮ ಬಾಧೆ ತಪ್ಪಿಸಿ ಜೀವ ಕಾಯ್ದ ಆಪತ್ಭಾಂದವ ಬೇಡಿದವರಿಗೆ ಬೇಡಿದನ್ನು ಕೊಡುವ ಕಾಮಧೇನು ಕಲ್ಪವೃಕ್ಷ, ಭಕ್ತರನ್ನು ಉದ್ಧಾರ ಮಾಡಿದ ಪರಿಪೂರ್ಣ ಪರಮಾತ್ಮ ಚಕ್ರವರ್ತಿ ದಾನೇಶ್ವರರು ವೈಕುಂಠವಾಸಿಯಾಗಿದ್ದು ಕೋಟ್ಯಾಂತರ ಭಕ್ತರಿಗೆ ತುಂಬಲಾರದ ನಷ್ಟವಾಗಿದೆ , ಭಕ್ತ ಸಮೂಹಕ್ಕೆ ಶಾಂತಿ ನೀಡುವ ಶಕ್ತಿ ಭಗವಂತ ನೀಡಲಿ.  

             ಶನಿವಾರ ಸಂಜೆ ಸಮಯದಲ್ಲಿ ಬಂಡಿಗಣಿ ಬಸವ ಗೋಪಾಲ ಮಠದ ಹತ್ತಿರ ವಿಧಿ ವಿಧಾನಗಳೊಂದಿಗೆ ಪೂಜ್ಯರ ಅಂತ್ಯ ಸಂಸ್ಕಾರ ನಾಡಿನ ಮಠಾಧೀಶರು, ರಾಜಕಿಯ ಮುಖಂಡರು ಅಪಾರ ಭಕ್ತ ಸಮೂಹ ಸೇರಿ ಅಂತ್ಯ ಸಂಸ್ಕಾರ ನೆರವೇರಿಸಿದರು.