ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರದ ಭವ್ಯ ಮೆರವಣಿಗೆ

ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರದ ಭವ್ಯ ಮೆರವಣಿಗೆ  A grand procession of the portrait of Veerarani Kittur Rani Chennamma

ತಾಳಿಕೋಟಿ 21: ವೀರರಾಣಿ ಕಿತ್ತೂರ ಚೆನ್ನಮ್ಮಳ ಪುತ್ಥಳಿ ಸ್ಥಾಪನೆಯ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ವೀರರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿ ನಿರ್ಮಾಣ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಚೆನ್ನಮ್ಮಾಜಿ ಭಾವಚಿತ್ರದ ಭವ್ಯ ಮೆರವಣಿಗೆ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

ಸಂಜೆ 5-00 ಘಂಟೆ ಪಟ್ಟಣದ ಚೆನ್ನಮ್ಮ ವೃತ್ತ ದಲ್ಲಿರುವ ಚೆನ್ನಮ್ಮಾಜಿಯ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಹೂಮಾಲೆ ಅರ​‍್ಿಸಿ ಆರಂಭವಾದ ಮೆರವಣಿಗೆ ಕಾರ್ಯಕ್ರಮಕ್ಕೆ ನಾವದಗಿ ಬ್ರಹನ್ಮಠದ ಷ.ಬ್ರ.ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಿತ್ತೂರಿನ ವೀರರಾಣಿ ಚೆನ್ನಮ್ಮ ಶೌರ್ಯ ಮತ್ತು ಸ್ವಾಭಿಮಾನದ ಪ್ರತೀಕವಾಗಿದ್ದಾಳೆ ಕಿತ್ತೂರು ನೋಡನ್ನು ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಮಹಿಳೆ. ಅವಳ ಬದುಕಿನ ಆದರ್ಶಗಳು ನಮಗೆಲ್ಲರಿಗೂ ಮಾದರಿ ಆಗಬೇಕಾಗಿದೆ, ಅವಳ ಪುತ್ಥಳಿ ಪ್ರತಿಷ್ಠಾನದ ದ್ವಿತೀಯ ವಾರ್ಷಿಕೋತ್ಸವ ಆಚರಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು. ಮೆರವಣಿಗೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜ್ಯೋತಿಷ್ಯ ರತ್ನ ಪರಮ ಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳು ವಹಿಸಿದ್ದರು. ಹಿಕ್ಕನಗುತ್ತಿ ಲಿಂಗಾಯತ ಮಹಾಮಠದ ಪೂಜ್ಯ ಪ್ರಭುಲಿಂಗ ಶರಣರು ನೇತೃತ್ವ ವಹಿಸಿದ್ದರು. ಕಿತ್ತೂರು ಚೆನ್ನಮ್ಮ ಸರ್ಕಲ್ ದಿಂದ ಸಕಲವಾದ್ಯ ಮೇಳ ಹಾಗೂ ಜಯ ಘೋಷಗಳೊಂದಿಗೆ ಆರಂಭವಾದ ಮೆರವಣಿಗೆಯು ಶ್ರೀ ಬಸವೇಶ್ವರ ವೃತ್ತ, ಮಹಾರಾಣಾ ಪ್ರತಾಪ್ ಸಿಂಹ ವೃತ್ತ, ಶಿವಾಜಿ ವೃತ್ತ, ಕತ್ರಿ ಬಜಾರ್ ಮಾರ್ಗವಾಗಿ ರಾಜವಾಡೆಗೆ ತಲುಪಿ ನಂತರ ಅಲ್ಲಿ ಧರ್ಮಸಭೆ ಜರುಗಿತು.

ಮೆರವಣಿಗೆಯಲ್ಲಿ ವೀರರಾಣಿ ಕಿತ್ತೂರ ಚೆನ್ನಮ್ಮ ಪುತ್ಥಳಿ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷರಾದ ಚಂದ್ರಶೇಖರ ಪಾಟೀಲ,ಅಧ್ಯಕ್ಷೆ ನೀಲಮ್ಮ ಎಸ್‌. ಪಾಟೀಲ,ಉಪಾಧ್ಯಕ್ಷ ಕಲ್ಲಪ್ಪ ಪಾಟೀಲ, ಪ್ರಧಾನ ಕಾರ್ಯದರ್ಶಿ ಎಂ.ಬಿ.ಕೋಟಿ, ಕಾರ್ಯದರ್ಶಿ ಬಿ.ಕೆ.ಪಾಟೀಲ, ವಚನ ಸಾಹಿತ್ಯ ಸಮಿತಿಯ ಅಧ್ಯಕ್ಷ ಮಹಾಂತೇಶ ಮುರಾಳ, ಅಶೋಕ ಚಿನಗುಡಿ, ವಿಶ್ವನಾಥ ಪಾಟೀಲ,ಸಮಾಜದ ಗಣ್ಯರು ಹಿರಿಯರು ಹಾಗೂ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಇದ್ದರು.