ವಿದ್ಯೆ ಕಲಿಸಿದ ಗುರುವಿಗೆ ತೆರೆದ ವಾಹದಲ್ಲಿ ಭವ್ಯ ಮೆರವಣಿಗೆ
A grand procession in an open car for the teacher
ಜಮಖಂಡಿ 29: ತಾಲ್ಲೂಕಿನ ಮರೇಗುದ್ದಿ ಗ್ರಾಮದ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯ 1997-98 ಸಾಲಿನ 7 ನೇ ತರಗತಿಯ ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನದ ಕಾರ್ಯಕ್ರಮದಲ್ಲಿ ವಿದ್ಯೆಯನ್ನು ಕಲಿಸಿದ ಗುರುವಿಗೆ ಹೂವಿನ ಸುರಿಮಳೆಗೈದು ತೆರೆದ ವಾಹದಲ್ಲಿ ಭವ್ಯ ಮೆರವಣಿಗೆಯನ್ನು ಅದ್ದೂರಿಯಾಗಿ ಮಾಡಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ತೆರದ ವಾಹನದಲ್ಲಿ ವಿದ್ಯೆಯನ್ನು ಕಲಿಸಿದ ನಿವೃತ್ತ ಶಿಕ್ಷಕರಾದ ಎಸ್,ಪಿ,ಮಠಪತಿ ಹಾಗೂ ಧರ್ಮಪತ್ನಿ ಮೆರವಣಿಗೆಯೊಂದಿಗೆ ತಾವುಗಳ ಕಲಿತ ಶಾಲೆಯನ್ನು ತಲುಪಿದರು. 50 ಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳು ತಮ್ಮಗೆ ಕಲಿಸಿದ ಗುರುವಿಗೆ ಹೃದಯಪೂರ್ವಕ ಅಭಿನಂದನೆಯನ್ನು ಸಲಿಸುವ ಜೊತೆಗೆ ಸನ್ಮಾನಿಸಿ ಗೌರವಿಸಿದರು.
ನಿವೃತ್ತ ಶಿಕ್ಷಕರಾದ ಎಸ್,ಪಿ, ಮಠಪತಿ ಅವರು ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಶಾಲಾ ಮುಖ್ಯ ಶಿಕ್ಷಕಿ ಆರ್,ಬಿ, ಪಾಟೀಲ ಮಾತನಾಡಿ, ಶಿಕ್ಷಕರ ಕಣ್ಣಿನಲ್ಲಿ ತಾವುಗಳು ಕಲಿಸಿದ ಮಕ್ಕಳ ಚಿತ್ರಣ ಕಾಣಿಸುತ್ತದೆ. ಇಂತಹ ಕಾರ್ಯಕ್ರಮ ಮಾಡುವದರಿಂದ ಮುಂದಿನ ಮಕ್ಕಳಿಗೆ ಮಾರ್ಗದರ್ಶನವಾಗುತ್ತದೆ. ನಮ್ಮ ಶಾಲೆಯಲ್ಲಿ 72 ಮಕ್ಕಳು 7 ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದು. ಎಲ್ಲ ಮಕ್ಕಳಗೋಷ್ಕರ ಶಾಲೆಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳಿಗಾಗಿ ನಮ್ಮ ಶಾಲೆಯಲ್ಲಿ ಕಲಿತ ಹಳೇಯ ವಿದ್ಯಾರ್ಥಿಗಳು ಧನ ಸಹಾಯ ಹಾಗೂ ಸಹಕಾರವನ್ನು ನೀಡಿದರೆ ಮಾತ್ರ ಶಾಲೆಯು ಅಭಿವೃದ್ಧಿಯಾಗಿಲು ಸಾಧ್ಯ ಎಂದರು.
ಶಿಕ್ಷಕ ಕೆ,ಎಸ್,ಟರಕಿ ಮಾತನಾಡಿ, ಸಂಸ್ಕಾರ, ಸಂಸ್ಕೃತಿಯನ್ನು ನೀಡುವದು ನಮ್ಮ ದೇಶವಾಗಿದೆ. ದೇಶದಲ್ಲಿ ಹೆಚ್ಚಾಗಿ ಗೌರವವನ್ನು ನೀಡುವದು ಯಾರಿಗಾದರೂ ಇದ್ದರೆ ಅದು ಶಿಕ್ಷಕರಿಗೆ ಮಾತ್ರ. ಅಂತಹ ಶಿಕ್ಷಕರಾದ ಎಸ್,ಸಿ,ಮಠಪತಿ ಅವರೊಬ್ಬರು. ತಮ್ಮ ಸೇವೆಯಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ, ಸಂಸ್ಕಾರವನ್ನು ನೀಡಿದ್ದಾರೆ. ಶಾಲೆ ನಾಲ್ಕು ಗೋಡೆಯಲ್ಲಿ ಹುಟ್ಟುವದು ಒಳ್ಳೆಯ ವಿದ್ಯೆ ಮತ್ತು ಸಂಸ್ಕಾರ. ಶಾಲೆಯಲ್ಲಿ ಕಲಿಯುವ ಮಕ್ಕಳು ಉನ್ನತ ಮಟ್ಟದ ಅಧಿಕಾರಿಗಳು, ಉತ್ತಮ ಪ್ರಜೆಗಳನ್ನು ತಯಾರು ಮಾಡುವ ಶಕ್ತಿ ಶಾಲೆಯಲ್ಲಿನ ಶಿಕ್ಷಕರಿಗೆ ಮಾತ್ರ ಸಾಧ್ಯ ಎಂದರು.
ಶಿಕ್ಷಕ ಡಿ,ಎ, ಪತ್ತಾರ ಮಾತನಾಡಿ, ಶಿಕ್ಷಕರಿಗೆ ಸರಕಾರದಿಂದ ಸಾಕಷ್ಟು ಸಂಬಳವನ್ನು ನಿಡುತ್ತದೆ. ಆದರೆ ಮಕ್ಕಳಿಗೆ ಮಾನವೀಯತೆಯ ಮೌಲ್ಯಗಳನ್ನು ತಿಳಿಸುವದು ಬಹಳ ಮುಖ್ಯವಾಗಿದೆ. ಮಕ್ಕಳಲ್ಲಿ ಸಂಸ್ಕಾರ. ಸಂಸ್ಕೃತಿಯನ್ನು ನೀಡುವದು ಮುಖ್ಯವಾಗಿದೆ. ಒಂದು ಮಗು ಬೆಳೆಯಬೇಕಾದರೆ ಮೊದಲು ಶಿಕ್ಷಕ, ಪಾಲಕರು, ಸಮಾಜ ಇವರ ಜವಾಬ್ದಾರಿಯು ಬಹಳ ಮುಖ್ಯವಾಗಿದೆ. ಯಾಕೆಂದರೆ ಸಮಾಜ ಒಳ್ಳೆಯ ಸಂದೇಶವನ್ನು ನೀಡಬೇಕು. ಪಾಲಕರು ಮನೆಯಲ್ಲಿ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಶಿಕ್ಷಕಕರು ಗುಣಮಟ್ಟದ ಶಿಕ್ಷಣವನ್ನು ನೀಡಿದರೆ ಮಾತ್ರ ಒಂದು ಮಗು ದೇಶದ ಒಳ್ಳೆಯ ಪ್ರಜೆಯಾಗಲು ಸಾಧ್ಯ. ಇಂದಿನ ಮಕ್ಕಳು ಶಿಕ್ಷಣವನ್ನು ಕಲಿಸಿದ ಶಿಕ್ಷಕರನ್ನು ಪೂಜ್ಯ ಭಾವನೆಯಿಂದ ಹಾಗೂ ಗೌರವದಿಂದ ಗೌರವಿಸುವದು ಬಹಳ ಮುಖ್ಯವಾಗಿದೆ ಎಂದರು.
ಶಿಕ್ಷಕ ಸದಾಶಿವ ಮದ್ನೂರ ಮಾತನಾಡಿದರು, ವೇದಿಕೆಯಲ್ಲಿ ಹಳೆಯ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಸಿದ ನಿವೃತ್ತ ಶಿಕ್ಷಕ ಎಸ್,ಪಿ, ಮಠಪತಿ ಹಾಗೂ ಧರ್ಮಪತ್ನಿ ಪಾರ್ವತಿ ಮಠಪತಿ, ಗ್ರಾ,ಪಂ, ಅಧ್ಯಕ್ಷ ಹನುಮಂತ ಗುಡ್ಡಿ, ಎಸ್,ಎಸ್,ಕೋಲೂರ, ಶ್ರೀಮತಿ ಎ,ಕೆ,ಸಾರವಾಡ ಉಪಸ್ಥಿತರಿದ್ದರು. ಹಳೇಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ಜೊತೆಗೆ ತಮ್ಮ ಪರಿಚಯವನ್ನು ಹಂಚಿಕೊಂಡರು, ಶಾಲಾ ಮಕ್ಕಳು ಪ್ರಾರ್ಥಿನಿಸಿದರು. ಪ್ರಕಾಶ ಹುಗ್ಗೇನ್ನವರ ಸ್ವಾಗತಿಸಿದರು. ಅಡವೇಶ ವಾರದ ಪ್ರಾಸ್ತಾವಿಕ ಮಾತನಾಡಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 