ಶಿಕ್ಷಣ ದ ಜೊತೆಗೆ ಸಂಸ್ಕಾರದ ಬೀಜವನ್ನು ವಿದ್ಯಾಲಯಗಳು ಬಿತ್ತಿದರೆ ಮಾತ್ರ ಉತ್ತಮ ನಾಗರಿಕ ಸಮಾಜ ಕಟ್ಟಲು ಸಾಧ್ಯ ಡಾ. ಅಜಿತ ಪ್ರಸಾದ
A good civilized society can be built only if schools sow the seeds of culture along with education.
ಲೋಕದರ್ಶನ ವರದಿ
ಧಾರವಾಡ 12: ಸಾಮಾಜಿಕ ಜಾಲತಾಣಗಳ ಪ್ರಭಾವ ಹಾಗೂ ವಿದ್ಯಾರ್ಥಿಗಳಿಗೆ ಮೌಲ್ಯಯುತ ಸಂಸ್ಕಾರದ ಶಿಕ್ಷಣದಕೊರತೆಯಿಂದ ವಿದ್ಯಾರ್ಥಿಗಳಲ್ಲಿ ಅದ್ಯಯನದ ಕ್ಷಮತೆ ಕಡಿಮೆಯಾಗಿ ಅಪರಾಧ ಮನೋಭಾವ ಹೆಚ್ಚಾಗುತ್ತಿರುವುದು ಕಳವಳಕಾರಿ, ಶಿಕ್ಷಣದ ಜೊತೆಗೆ ನಮ್ಮ ನಾಡು, ನುಡಿ, ಸಂಸ್ಕೃತಿ, ಕಲೆಗಳ ಬಗ್ಗೆ ಶಿಕ್ಷಣನೀಡಿದರೆ ಉತ್ತಮ ಸಮಾಜ ನಿರ್ಮಾಣ ಸಾದ್ಯ, ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯನ್ನು ಶ್ರೀ ಹುಕ್ಕೇರಿಕರ ರಾಮರಾಯರು ಸ್ಥಾಪಿಸಿದ ಈ ಸಂಸ್ಥೆ ನಾಡು ನುಡಿಗಾಗಿ ಹೊರಾಡಿದ ಹಿರಿಯ ಸಾಹಿತಿ ಈ ವಿದ್ಯಾಲಯದ ಮೊದಲ ಪ್ರಾಂಶುಪಾಲರಾದ ಬಿ.ಎಮ್. ಶ್ರೀ ಅವರಿಂದ ಹಿಡಿದು ಇವತ್ತಿನವರೆಗೂ ಆ ಆಶಯವನ್ನು ಪಾಲಿಸುತ್ತಾ ಬಂದಿದೆ.
ಅನೇಕ ಕಲೆ, ಮತ್ತು ಸಂಸ್ಕೃತಿಗಳ ಬೆಳವಣಿಗೆಯಲ್ಲಿ ಅನೇಕ ಸಂಘ ಸಂಸ್ಥೆಗಳಿಗೆ ಸಹಾಯ ಮಾಡಿದೆ. ಆ ಕಾರಣದಿಂದ ಇಂದು ವಿದ್ಯಾಲಯ 25 ಶಾಖೆಗಳನ್ನು ಹೊಂದಿದ್ದು 25000ರಕ್ಕೂ ಹೆಚ್ವು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದರು. ಅವರು ಧಾರವಾಡದ ಸಾಕಾರ ಸಾಂಸ್ಕೃತಿಕ ಮತ್ತು ಮಾಧ್ಯಮ ಪ್ರತಿಷ್ಠಾನ ಜೆ.ಎಸ್.ಎಸ್ ಉತ್ಸವ ಹಾಲ್ ನಲ್ಲಿ ಎರಿ್ಡಸಿದ್ದ ಮಕ್ಕಳ ಯಕ್ಷಗಾನ ತರಬೇತಿ ಶಿಬಿರದ ಸಮಾರೋಪ ಸಮಾರಂಭ ದಲ್ಲಿ ತಮಗೆ ನೀಡಿದ ಕಲಾ ಪೋಷಕ ಪ್ರಶಸ್ತಿ ಸ್ವಿಕರಿಸಿ ಜೆ.ಎಸ್.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸುಪ್ರದಾ ಕಸ್ಟ್ರಕ್ಷನ್ನ ಸೀತಾರಾಮ ಶೆಟ್ಟಿ ಮಾತನಾಡಿ ಯಕ್ಷಗಾನ ಪುರಾತನ ಮತ್ತು ಅಪ್ಪಟ ಕನ್ನಡ ಕಲೆ, ಇದರಲ್ಲಿ ಎಲ್ಲಾ ಕಲೆಗಳ ಅಂಶಗಳು ಒಳಗೊಂಡಿವೆ, ದಕ್ಷಿಣ ಕರ್ನಾಟಕ್ಕೆ ಸಿಮಿತವಾದ ಈ ಕಲೆಯನ್ನು ಕಳೆದ 13 ವರ್ಷದಿಂದ ಉತ್ತರ ಕರ್ನಾಟಕದ ಮಕ್ಕಳಿಗೆ ಸಾಕಾರ ಸಂಸ್ಥೆ ಪರಿಚಯಿಸುತ್ತಿರುವುದು ಅಭಿನಂದನೀಯ ಎಂದರು. ಇನ್ನೂರ್ವ ಅತಿಥಿ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಬಸವರಾಜ ನಾಲತ್ತವಾಡ ಮಾತನಾಡಿ ಪಾಲಕರು ತಮ್ಮ ಮಕ್ಕಳಿಗೆ ಇಂತಹ ಶಿಬರಗಳಿಗೆ ಕಳಿಸಿದರೆ ಅವರಲ್ಲಿ ಜ್ಞಾನ ಹೆಚ್ವಾಗಿ, ಏಕಾಗ್ರತೆ ಮೂಡಿ ಒತ್ತಡ ನಿರ್ವಹಣೆ ಸಾಧ್ಯ. ಆ ನಿಟ್ಟಿನಲ್ಲಿ ಪಾಲಕರು ಪ್ರಯತ್ನಿಸಿ ಎಂದು ಹೆಳಿದರು.
ಇದೇ ಸಂದರ್ಭದಲ್ಲಿ ಇತ್ತಿಚಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಸ್ವಿಕರಿಸಿದ ಧಾರವಾಡದ ವಿದುಷಿ ನಾಗರತ್ನ ಹಡಗಲಿ ಅವರನ್ನು ಗೌರವಿಸಲಾಯಿತು. ನಂತರ ನಡೆದ ಯಕ್ಷಗಾನ ಪ್ರದರ್ಶನದಲ್ಲಿ ಶಿಬಿರದಲ್ಲಿ ಪಾಲ್ಗೊಂಡ 25 ಮಕ್ಕಳಿಂದ ಎರಡು ಪೌರಾಣಿಕ ಯಕ್ಷಗಾನಗಳು ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾದವು, ಡಾ. ಶುಭದಾ ಅಧ್ಯಕ್ಷತೆ ವಹಿಸಿದ್ದರು, ಐ.ಟಿ.ಐ ಕಾಲೇಜಿನ ಮಹಾವೀರ ಉಪಾಧ್ಯಾಯ, ಡಾ ಪ್ರಕಾಶ ಭಟ್, ನಾಗರಾಜ ಹಡಗಲಿ ದಾಬಡೆ ದಂಪತಿ, ಗಣ್ಯರು ಉಪಸ್ಥಿತರಿದ್ದರು
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ 