ಶಿಲ್ಪ ಕಲೆಗಳ ಉಳಿವಿಗಾಗಿ ಮತ್ತು ಜಕಣಚಾರಿ ವೃತ್ತ ನಿರ್ಮಾಣಕ್ಕಾಗಿ ಪ್ರಮಾಣಿಕ ಪ್ರಯತ್ನ: ಶಾಸಕ ಜೆ.ಎನ್.ಗಣೇಶ್
A genuine effort for the survival of sculpture and the construction of Jakanachari Circle: MLA J.N.
ಕಂಪ್ಲಿ 18: ಶಿಲ್ಪ ಕಲೆಗಳ ಉಳಿವಿಗಾಗಿ ಮತ್ತು ಜಕಣಚಾರಿ ವೃತ್ತ ನಿರ್ಮಾಣಕ್ಕಾಗಿ ಪ್ರಮಾಣಿಕ ಪ್ರಯತ್ನಗಳನ್ನು ಮಾಡುವುಲಾಗುವು ಎಂದು ಶಾಸಕ ಜೆ.ಎನ್.ಗಣೇಶ್ ಅವರು ಬುಧವಾರ ಪಟ್ಟಣದ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ಕಂಪ್ಲಿ ತಾಲ್ಲೂಕು ಆಡಳಿತ ಮತ್ತು ಕಂಪ್ಲಿ ತಾಲ್ಲೂಕು ವಿಶ್ವಕರ್ಮ ಸಮಾಜ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿ, ದೇವತೆಗಳಿಗೆ ಬೇಕಾದ ಬಗೆ ಬಗೆಯ ಆಯುಧಗಳನ್ನು, ವಾಹನಗಳನ್ನು ಹಾಗೂ ಇಂದ್ರಲೋಕ, ಕೈಲಾಸ ಲೋಕಗಳನ್ನು ಮಾಡಿಕೊಟ್ಟ, ಸೂರ್ಯಮಂಡಲವನ್ನೇ ಬಳಸಿಕೊಂಡು ಮಹಾವಿಷ್ಟುವಿಗೆ ಸುದರ್ಶನ ಚಕ್ರವನ್ನು ನಿರ್ಮಿಸಿಕೊಡುವ ಮೂಲಕ ರಾಕ್ಷಸ ಸಂಹಾರಕ್ಕೆ ಸಹಕರಿಸಿದ ಮಹಾಮಹಿಮ ವಿಶ್ವಕರ್ಮನಾಗಿದ್ದಾನೆಂದ ಕಡಿಮೆ ಸಂಖ್ಯೆಯಲ್ಲಿರುವ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯವನ್ನು ಒದಗಿಸಿದೆ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವಂತೆ ತಿಳಿಸಿದರಲ್ಲದೆ ಮುಂದಿನ ದಿನಗಳಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸುವ ಜೊತೆಗೆ ಪುರಸಭೆ ಚುನಾವಣೆಯಲ್ಲಿ ಸ್ಥಾನ ನೀಡಲಾಗುವುದು ಎಂದರು.ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಡಿ.ಮೌನೇಶಾಚಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಪಟ್ಟಣದಲ್ಲಿ ವಿಶ್ವಕರ್ಮರ ಶಿಲ್ಪ ಕಲೆಗಳ ಉಳಿವಿಗಾಗಿ ಶಿಲ್ಪ ಕಲಾಕೇಂದ್ರ ಆರಂಭಿಸುವಂತೆ, ಸಮುದಾಯದ ಗುರುತಿಗಾಗಿ ಜಕಣಚಾರಿ ವೃತ್ತ ನಿರ್ಮಾಣಕ್ಕೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಜೂಗಲ್ ಮಂಜುನಾಯಕ, ಶ್ರೀಮದ್ ಆನೆಗುಂದಿ ಮೂಲಸಂಸ್ಥಾನ, ಸರಸ್ವತಿ ಪೀಠ ಡಿ ಹಿರೇಹಾಳ್‌ನ ವಿಶ್ವಕರ್ಮ ಜಗದ್ಗುರುಗಳಾದಶ್ರೀಕಾಳಹಸ್ತೇಂದ್ರಮಹಾಸ್ವಾಮಿಗಳುಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಯಕ್ರಮಕ್ಕೂ ಮುನ್ನ ವಿಶ್ವಕರ್ಮರ ಭಾವಚಿತ್ರಕೆ ವಿಶೇಷ ಪೂಜೆಯನ್ನು ಸಲ್ಲಿಸಿ ಪುಷ್ಪನಮನಗಳನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಭಟ್ಟಪ್ರಸಾದ್, ವಿಶ್ವಕರ್ಮ ಸಮುದಾಯದ ಅಧ್ಯಕ್ಷ ಡಿ.ಎ.ರುದ್ರಾ್ಪಚಾರ, ಮುಖಂಡರಾದ ಎ.ಚಂದ್ರಶೇಖರಾಚಾರ್, ಕಾಳಪ್ಪಾಚಾರ್, ನಾರಾಯಾಣಚಾರ್, ಮೌನೇಶ್, ಷಣ್ಮುಕಾಚಾರ್,ರಾಘವೇಂದ್ರ,ರವಿ, ಎ.ಗುರುಮೂರ್ತಿ, ಮಂಜುನಾಥ್ ಅಕ್ಕಸಾಲಿ,ಮಹಿಳಾ ಸಂಘದ ಡಿ.ವೀಣಾಮೌನೇಶ್,ಜಯಲಕ್ಷ್ಮೀ, ವಿಜಯಲಕ್ಷ್ಮೀ, ಕಲಾವತಿ,ವಸಂತ, ವನಜಾಕ್ಷಮ್ಮ, ಪಂಪಾಪತಿ, ಭರತ್‌ಕುಮಾರ್, ಕಿರಣ್ ಸೇರಿದಂತೆ ಸಮುದಾಯದ ಮುಖಂಡರು, ಸಿಬ್ಬಂದಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 