ಬೆಟಗೇರಿಯಲ್ಲಿ ಇನ್ನೂ 4 ವಾರದ ದಿನ ಕಟ್ಟಾವಾರ ಹಿಡಿಯಲಾಗಿದೆ
A four-day lockdown has been imposed in Betageri
ಲೋಕದರ್ಶನ ವರದಿ
ಗೋಕಾಕ 24 : ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ವಾರ ಹಿಡಿದ ಪ್ರಯುಕ್ತ ಮಂಗಳವಾರ ಜು.21ರಂದು ವಾರದ ದಿನ ಸಂಜೆ 6 ಗಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳಗಳೊಂದಿಗೆ ಪುರ ದೇವರ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ನಡೆಯಿತು.
ಸ್ಥಳೀಯರಿಂದ ಪುರದೇವರ ದೇವಸ್ಥಾನಕ್ಕೆ ತೆರಳಿ ಪೂಜೆ, ನೈವೇದ್ಯ ಸಮರ್ಿಸುವ, ದೇವಾಲಯ ಕಟ್ಟೆಗಳಿಗೆ ನೀರು ಹಾಕುವದು ಸೇರಿದಂತೆ ವಿವಿಧ ಕಟ್ಟಾ ವಾರ ಆಚರಣೆಯ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಗ್ರಾಮದ ಪ್ರಮುಖ ಬೀದಿ, ಸ್ಥಳಗಳು ಜನರ ಓಡಾಟವಿಲ್ಲದೇ ಬಿಕೋ ಎನ್ನುತ್ತಿದ್ದವು. ಇಡೀ ಊರಲ್ಲಿ ಬಂದ್ ಆಚರಣೆ ವಾತಾವರಣ ಇತ್ತು.
ಬೆಟಗೇರಿ ಗ್ರಾಮದಲ್ಲಿ ಜನ-ಜಾನುವಾರುಗಳಿಗೆ ರೋಗ-ರುಜೀನ ಬರದಂತೆ ಹಾಗೂ ಸಕಾಲಕ್ಕೆ ಮಳೆಯಾಗದಿದ್ದ ಕಾರಣ ಮುಂದೆ ಬರುವ ವಾರದ ಪ್ರತಿ ಮಂಗಳವಾರ ಜು.28, ಶುಕ್ರವಾರ ಜು.31ರಂದು ಮಂಗಳವಾರ ಆ.4 ಮತ್ತು ಮಂಗಳವಾರ ಆಗಸ್ಟ್ 11ರಂದು ಸೇರಿ ಇನ್ನೂ ನಾಲ್ಕು ದಿನವನ್ನು ಗ್ರಾಮದಲ್ಲಿ ಸಂಪ್ರದಾಯದಂತೆ ವಾರ ಹಿಡಿಯಲಾಗಿದೆ.
ಇನ್ನೂ ನಾಲ್ಕು ವಾರದ ದಿನ ಕಟ್ಟಾ ವಾರ ಆಚರಣೆ : ಸುತ್ತಲಿನ ಹತ್ತೂರು ಹಳ್ಳಿಗಳಿಗೆ ಬೆಟಗೇರಿ ಗ್ರಾಮ ವ್ಯಾಪಾರ ವಹಿವಾಟದ ವಾಣಿಜ್ಯ ಕೇಂದ್ರ ಸ್ಥಳವಾಗಿದ್ದರಿಂದ ಸ್ಥಳೀಯ ಹಾಗೂ ಸುತ್ತಲಿನ ಹತ್ತೂರಿನ ಸಾರ್ವಜನಿಕರು ಗಮಸಿಸಬೇಕು. ಇನ್ನೂ 4 ವಾರದ ದಿನ ಬೆಟಗೇರಿ ಗ್ರಾಮ ಸಂಪೂರ್ಣ ಬಂದ್ ಆಚರಿಸಿದಂತಿರುತ್ತದೆ.
ಸುತ್ತಲಿನ ಹತ್ತೂರಿನ ಸಾರ್ವಜನಿಕರು ಸಹಕರಿಸಬೇಕೆಂದು ಈ ವೇಳೆ ಮನವಿ ಮಾಡಿಕೊಂಡರು. ಬೆಟಗೇರಿ ಗ್ರಾಮದ ರೈತರಾ್ಯರೂ ವಾರದ ಇನ್ನೂ 4 ವಾರದ ದಿನಗಳಂದು ಕೃಷಿ ಚಟುವಟಿಕೆ ಕೈಗೊಳ್ಳುವಂತಿಲ್ಲ, ವಾರದ ದಿನ ಎಲ್ಲರ ಮನೆಯಲ್ಲೂ ರೊಟ್ಟಿ ಮಾಡುವಂತಿಲ್ಲ, ವಗ್ಗರಣೆಯಂತೂ ಹಾಕುವಂತಿಲ್ಲ, ಮಾಂಸಾಹಾರ ಅಡುಗೆ ತಯಾರಿಸುವಂತಿಲ್ಲ,
ಊರಿನಲ್ಲಿರುವ ಆಸ್ಪತ್ರೆ, ಓಷಧ ಅಂಗಡಿ ಹೊರತುಪಡಿಸಿ, ಕಿರಾಣಿ, ಮದ್ಯದಂಗಡಿ, ಚಹಾಅಂಗಡಿ, ಪಾನ್ ಬೀಡಾಂಗಡಿಗಳು ಸೇರಿದಂತೆ ಹೇರ್‌ಕಟಿಂಗ್ ಅಂಗಡಿ ಸಹ ಬಾಗಿಲು ತೆರೆಯದೇ ಬಂದ್ ಮಾಡಲಾಗುವುದು ಎಂದು ಸ್ಥಳೀಯ ವಾರ ಹಿಡಿದ ಆಯೋಜನೆ ಸಮಿತಿಯ ಹಿರಿಯ ನಾಗರಿಕ ಮಾಯಪ್ಪ ಬಾಣಸಿ ತಿಳಿಸಿದ್ದಾರೆ.
ಸುಭಾಷ ಕರೆಣ್ಣವರ, ವಿಠಲ ಚಂದರಗಿ, ಸಿದ್ಧಬೀರ್ಪ ಧರ್ಮಟ್ಟಿ, ಗುರ್ಪ ಮಾಕಾಳಿ, ಬಸು ಕೆಂಪನಿಂಗಪ್ಪಗೋಳ, ಮುದಕಪ್ಪ ಚಂದರಗಿ, ಸ್ಥಳೀಯ ವಿವಿಧ ದೇವರ ಅರ್ಚಕರು, ಹಿರಿಯ ನಾಗರಿಕರು, ಸ್ಥಳೀಯ ವಾರ ಹಿಡಿದ ಆಯೋಜನೆ ಸಮಿತಿಯ ಸದಸ್ಯರು, ಸ್ಥಳೀಯರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 