ಬಾಲಕಿಯರ ಹ್ಯಾಂಡ್ ಬಾಲ್ ಸ್ಪರ್ಧೆಗಳ ಆಕರ್ಷಕ ಪ್ರದರ್ಶನA fascinating display of girls' handball competitions
Lokadrshan Daily
1/4/25, 3:23 AM ಪ್ರಕಟಿಸಲಾಗಿದೆ
ಕೊಪ್ಪಳ 08: ಆನೆಗೊಂದಿ ಉತ್ಸವದ ಅಂಗವಾಗಿ ಮಹಿಳೆಯರ ಕುಸ್ತಿ ಮತ್ತು ಪುರುಷರ ಕುಸ್ತಿ ಸ್ಪಧರ್ೆಗಳು ಹಾಗೂ ಬಾಲಕಿಯರ ಹ್ಯಾಂಡ್ ಬಾಲ್ ಸ್ಪರ್ಧೆಗಳ ಆಕರ್ಷಕ ಪ್ರದರ್ಶನ ನಡೆಯಿತು.
ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವದ ನಿಮಿತ್ತ ಇಂದು (ಜ.8) ಹಮ್ಮಿಕೊಳ್ಳಲಾದ ಮಹಿಳಾ ಕುಸ್ತಿ ಮತ್ತು ಪುರುಷ ಕುಸ್ತಿ ಹಾಗೂ ಹ್ಯಾಂಡ್ ಬಾಲ್ ಪ್ರದರ್ಶನಕ್ಕೆ ಆನೆಗೊಂದಿ ಶ್ರೀಕೃದೇವರಾಯ ಮುಖ್ಯ ವೇದಿಕೆಯಲ್ಲಿ ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿ ಅವರು ಚಾಲನೆ ನೀಡಿದರು.
ಮಹಿಳೆಯರ ಕುಸ್ತಿ 45 ಕೆ.ಜಿ ವಿಭಾಗದಲ್ಲಿ 4 ಸ್ಪರ್ಧೆಗಳು, 50 ಕೆ.ಜಿ ಯಲ್ಲಿ 5, 55 ಕೆ.ಜಿ ವಿಭಾಗದಲ್ಲಿ 6, 55 ಪ್ಲಸ್ ಕೆ.ಜಿ ವಿಭಾಗದಲ್ಲಿ 9 ಸ್ಪಧರ್ಿಗಳು ಭಾಗವಹಿಸಿದ್ದಾರೆ. ಪುರುಷರ ಕುಸ್ತಿ 55 ಕೆ.ಜಿ ವಿಭಾಗದಲ್ಲಿ 4 ಸ್ಫರ್ಧೆ ಗಳು, 61 ಕೆ.ಜಿ ವಿಭಾಗದಲ್ಲಿ 14, 65. ಕೆ.ಜಿ ವಿಭಾಗದಲ್ಲಿ 12, 70 ಕೆ.ಜಿ ವಿಭಾಗದಲ್ಲಿ 07, 75 ಕೆ.ಜಿ ವಿಭಾಗದಲ್ಲಿ 06, 85 ಕೆ.ಜಿ ವಿಭಾಗದಲ್ಲಿ 06, 97 ಕೆ.ಜಿ ಪ್ಲಸ್ ವಿಭಾಗದಲ್ಲಿ 5 ಸ್ಪಧರ್ಿಗಳು ಭಾಗವಹಿಸಿದ್ದಾರೆ. ಒಟ್ಟು ಪುರುಷರ ಕುಸ್ತಿ ಸ್ಪಧರ್ೆಯಲ್ಲಿ 54, ಮಹಿಳೆಯರ ಕುಸ್ತಿ ಸ್ಪಧರ್ೆಯಲ್ಲಿ 24 ಸ್ಪಧರ್ಿಗಳು ಭಾಗವಹಿಸಿದ್ದಾರೆ.
ಮಹಿಳೆಯರ ಕುಸ್ತಿ ಫಲಿತಾಂಶ 45 ಕೆ.ಜಿ ವಿಭಾಗದಲ್ಲಿ ಪ್ರಥಮ ಗೋಪವ್ವ ಎಂ.ಖೋಡಿ, ದ್ವೀತಿಯ ಸ್ಥಾನ ಮಮತಾ ಕೇಳೊಜಿ, ತೃತೀಯ ಶ್ವೇತಾ ಜಾಧವ್ ಚತುರ್ಥ ಪ್ರೀಯಾಂಕ ಕರಿಗಾರ್, 50 ಕೆ.ಜಿ 1 ಬಸಿರಾ ವಕಾರದ ತಂಡದ 2 ಜ್ಯೋತಿ 3 ಸೋನಿಯಾ 4 ಅಂಕಿತಾ ಗದಗ, 55 ಕೆ.ಜಿ 1 ಪ್ರೇಮಾ ಹುಚ್ಚಣ್ಣನವರ ಗದಗ 2 ಶಾಹಿದಾ ಬಳಿಗಾರ ಗದಗ 3 ಸಹಾನ್ ಪಿ.ಎಸ್ 4 ನಿಕೀತಾ ಡೇಫಿ, 55 ಕೆ.ಜಿ ಪ್ಲಸ್ 1 ಲೀನಾ ಸಿದ್ದಿ ಹರಿಯಾಣ 2 ಶ್ವೇತಾ ಬೆಳ್ಳಟ್ಟಿ ಗದಗ 3 ಡೆಲ್ಫಿ ಎನ್ 4 ಅಕ್ಷತಾ ಬುಲರ್ಿ ಆಳ್ವಾಸ್ ಸ್ಥಾನಗಳನ್ನು ಪಡೆದಿದ್ದಾರೆ.
ಪುರುಷರ ಕುಸ್ತಿ ಫಲಿತಾಂಶ 57 ಕೆ.ಜಿ ವಿಭಾಗದಲ್ಲಿ ಪ್ರಥಮ ಪ್ರತೀಕ್ ಬಿ.ಎಸ್ ದ್ವೀತಿಯ ಪ್ರವೀಣ್ ಕೊಲಂಬಿ, ತೃತೀಯ ಶ್ರೀಕಾಂತ ಮಡಿವಾಳರ್ ಚತುರ್ಥ ಲಕ್ಷ್ಮಣ್, 61 ಕೆ.ಜಿ 1. ಮಹೇಶ್ ಗೌಡ 2 ಶಿವಾಜಿ ದನಕರಿ 3 ನೀಲಪ್ಪ ಭುಜಿ 4 ಮಲ್ಲಪ್ಪ ಮರ್ನರು 65 ಕೆ.ಜಿ ವಿಭಾಗದಲ್ಲಿ 1 ರಮೇಶ ಹೊಸಕೋಟೆ 2 ಸಂತೋಷ ಮೇತ್ರಿ 3 ಮುರಗೇಶ ತಮದಡ್ಡಿ 4 ಶಿವಾನಂದ ತಳವಾರ್ 70 ಕೆ.ಜಿ ವಿಭಾಗದಲ್ಲಿ 1 ಆಕಾಶ ಘಾಡಿ 2 ಅನೀಲ್ ದಳವಾಯು 3 ಹೊಳಬಸು ಹೆಬ್ಬಾಳ 4 ಯೋಗೇಶ್ ಬಿ. 75 ಕೆ.ಜಿ ವಿಭಾಗದಲ್ಲಿ 1 ಪ್ರಸಾದ ಅಷ್ಟಗಿ 2 ರವಿ ಕೆಂಪಣ್ಣವರ್ 3 ಸುನೀಲ್ ಹೊಸಕೋಟೆ 4 ಮಾಳಪ್ಪ ಕುಡುಚಿ 85 ಕೆ.ಜಿ ವಿಭಾಗದಲ್ಲಿ 1 ಪಾಂಡು ರಾಘವ ಶಿಂಥೆ 2 ಬಿರೇಶ ಲಂಗೋಟಿ 3 ಅಮಗೊಂಡ ಎಮ್ ನಿವರ್ಾಣಿ 4 ಗೋಪಾಲ ತಂಶಿ 97 ರಿಂದ 130 ಕೆ.ಜಿ ವಿಭಾಗದಲ್ಲಿ 1 ಲೋಕೆಶ ತಲಶೆಟ್ಟಿ 2 ಎಮ್.ವೈ ಪಾಟೀಲ 3 ಶ್ರೀಶೈಲ ಯಲಶೆಟ್ಟಿ 4 ಮಲ್ಲಪ್ಪ ಮೇತ್ರಿ ಸ್ಥಾನಗಳನ್ನು ಪಡೆದಿದ್ದಾರೆ.
ಬಾಲಕಿಯರು ಹ್ಯಾಂಡ್ ಬಾಲ್ ಸ್ಪಧರ್ೆಯಲ್ಲಿ 11 ತಂಡಗಳು ಭಾಗವಹಿಸಿದ್ದವು, ಅಂತಿಮ ಫೈನಲ್ ಪಂದ್ಯದಲ್ಲಿ ಎಸ್.ಜಿ.ವಿ.ಆರ್ ಧರಣಿ ತಂಡ ಗಂಗಾವತಿ ವಿರುದ್ದ ಜಿ.ಎಚ್.ಎಸ್ ಚಿಕ್ಕಡಣಕನಕಲ್ ತಂಡ 4-1 ರಿಂದ ಜಯಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಎಸ್.ಜಿ.ವಿ.ಆರ್ ತಂಡ ಎರಡನೇ ಸ್ಥಾನ ಪಡೆದಿದೆ. ಪೈಯಸರ್್ ಗಲ್ಸ್ ತಂಡ ಶ್ರಿರಾಮನಗರ ತಂಡ ವಿರುದ್ಧ ಎಸ್.ಜಿ.ವಿ ಆರ್ ತೆಲುಗು ಮೀಡಿಯಮ್ ಪ್ರಗತಿನಗರ ತಂಡ 4-3 ರಿಂದ ಜಯ ಸಾಧಿಸಿ ಮೂರನೆ ಸ್ಥಾನ ಪಡೆಯಿತು.