ನವದೆಹಲಿ, ಜೂ 5, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜನ್ಮದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಕೋರಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಅವರು, "ಕ್ರಿಯಾತ್ಮಕ ಮತ್ತು ಶ್ರಮಜೀವಿ ಮುಖ್ಯಮಂತ್ರಿಗೆ ಜನ್ಮದಿನ ಶುಭಾಶಯಗಳು. ಅವರ ನಾಯಕತ್ವದಲ್ಲಿ, ರಾಜ್ಯ ಎಲ್ಲಾ ವಲಯಗಳಲ್ಲಿ ಪ್ರಗತಿಯ ಹೊಸ ಎತ್ತರಕ್ಕೇರುತ್ತಿದೆ. ಜನರ ಜೀವನದಲ್ಲಿ ಗಮನಾರ್ಹ ಸುಧಾರಣೆಯಾಗಿದೆ. ಅವರಿಗೆ ಸುದೀರ್ಘ ಹಾಗೂ ಆರೋಗ್ಯಪೂರ್ಣ ಜೀವನ ಲಭಿಸಲಿ" ಎಂದಿದ್ದಾರೆ. 1972ರಲ್ಲಿ ಉತ್ತರಪ್ರದೇಶದ ಪವರಿ ಗರ್ವಾಲ್ ನ ಪಂಚೌರ್ ಗ್ರಾಮದಲ್ಲಿ ಅಜಯ್ ಮೋಹನ್ ಬಿಶ್ತ್ ಎಂಬುವರಿಗೆ ಜನಿಸಿದ್ದ ಯೋಗಿ ಆದಿತ್ಯನಾಥ್ ಇಂದು 48 ವರ್ಷಕ್ಕೆ ಕಾಲಿಟ್ಟಿದ್ದಾರೆ.