ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸಂತಾಪ ಸೂಚನಾ ಸಭೆ

A condolence lecture at Rani Channamma University

ಬೆಳಗಾವಿ 10: ಮಾಜಿ ಮುಖ್ಯಮಂತ್ರಿ ಎಸ್‌.ಎಮ್‌. ಕೃಷ್ಣರವವರು ನಿಧನ ಹೊಂದಿದ್ದರಿಂದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಇಂದು ಸಂತಾಪ ಸೂಚನಾ ಸಭೆ ಏರಿ​‍್ಡಸಲಾಗಿತ್ತು.  

ಸಭೆಯಲ್ಲಿ ಮಾನ್ಯ ಕುಲಪತಿಗಳಾದ ಪ್ರೊ.ಸಿ.ಎಮ್‌. ತ್ಯಾಗರಾಜ ಅವರು ಮಾತನಾಡಿ, ಎಸ್‌.ಎಮ್‌. ಕೃಷ್ಣರವರು ಶ್ರೀಮಂತ ಮನೆತನದಿಂದ ಬೆಳೆದು ಬಂದ ರಾಜಕಾರಣಿಯಾಗಿದ್ದರು, ಆಡಂಬರ ಇರಲಿಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ ಧೀಮಂತ ಇಂದು ನಮ್ಮನ್ನೆಲ್ಲ ಅಗಲಿದ್ದು ದುಃಖದ ಸಂಗತಿಯಾಗಿದೆ. ರಾಜ್ಯದ ಗ್ರಾಮೀಣ ಬಡ ಮಕ್ಕಳಿಗೂ ಸಹ ವಿಜ್ಞಾನ ಮತ್ತು ತಂತ್ರಜ್ಞಾನದ ಶಿಕ್ಷಣ ದೊರಕುವಂತೆ ಮಾಡಿದ್ದರು ಎಂದು ತಿಳಿಸಿದರು. ಕುಲಸಚಿವರಾದ ಸಂತೊಷ ಕಾಮಗೌಡ ಅವರು ಮಾತನಾಡಿ, ಎಸ್‌.ಎಮ್‌. ಕೃಷ್ಣರವರು ಮುಖ್ಯಮಂತ್ರಿಯಾಗಿ, ಉಪ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ, ವಿಧಾನ ಸಭೆ ರಾಜ್ಯಸಭೆ ಹಾಗೂ ಸಂಸತ್ತಿನ ಸದಸ್ಯರಾಗಿ ಅನೇಕ ಕೊಡುಗೆ ನೀಡಿದ್ದನ್ನು ಸ್ಮರಿಸಿದರು.  

ಪ್ರೊ.ಕಮಲಾಕ್ಷಿ ತಡಸದ, ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಪ್ರಾಸ್ತಾವಿಕವಾಗಿ ಮಾತನಾಡಿ ಎಸ್‌.ಎಮ್‌. ಕೃಷ್ಣರವರು ಕರ್ನಾಟಕದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದು, ಬೆಂಗಳೂರು ಸಿಲಿಕಾನ್ ಸಿಟಿ ಅಭಿವೃದ್ಧಿಯಾಗುವುದರ ಹಿಂದೆ ಎಸ್‌.ಎಮ್‌. ಕೃಷ್ಣರವರ ಶ್ರಮ ಮಹತ್ವದ್ದಾಗಿದ್ದು, ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ಇತಿಹಾಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಹೆಮ್ಮೆಯ ಕನ್ನಡಿಗ ನಮ್ಮನ್ನಗಲಿರುವುದು ನೋವುಂಟು ಮಾಡಿದೆ ಎಂದರು.  

ವಿಶ್ವವಿದ್ಯಾಲಯದ ಕುಲಸಚಿವರು ಪರೀಕ್ಷಾಂಗ ವಿಭಾಗ ಡಾ.ರವೀಂದ್ರನಾಥ್ ಕದಮ್, ಹಣಕಾಸು ಅಧಿಕಾರಿ ಎಂ.ಎ ಸಪ್ನ ಸೇರಿದಂತೆ ಡೀನರು, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಬೊಧಕ, ಬೊಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ.ಪ್ರಕಾಶ ಕಟ್ಟಿಮನಿ, ರಾಜ್ಯಶಾಸ್ತ್ರ ವಿಭಾಗ ಇವರು ನಿರೂಪಿಸಿದರು.