ಯುವ ಪೀಳಿಗೆ ವ್ಯಸನ ಮುಕ್ತವಾದಾಗ ಮಾತ್ರ ಸಮರ್ಥ ಭಾರತ ನಿರ್ಮಾಣ ಸಾಧ್ಯ
A capable India can only be built when the young generation is free from addiction
ಅಥಣಿ 06 : "ಹಿಂದೂ ಸಮಾಜದ ಯುವ ಪೀಳಿಗೆಯು ಇಂದಿನ ದಿನಗಳಲ್ಲಿ ವಿವಿಧ ವ್ಯಸನಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ವಿಷಯ. ಸಮಾಜವು ಸುದೃಢವಾಗಬೇಕಾದರೆ ಯುವಶಕ್ತಿ ಮೊದಲು ವ್ಯಸನಮುಕ್ತವಾಗಬೇಕು," ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ್ಯ ಪ್ರಚಾರ ಪ್ರಮುಖರಾದ ಶ್ರೀ ಕೃಷ್ಣ ಜೋಶಿ ಅವರು ಕರೆ ನೀಡಿದರು.ಸೋಮವಾರ ಸಂಜೆ 6 ಗಂಟೆಗೆ ಅಥಣಿ ನಗರದ ಶ್ರೀ ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ’ಸಾಮರಸ್ಯ ಗತಿವಿಧಿ - ಸಮರಸ ಹಿಂದೂ, ಸಮರ್ಥ ಭಾರತ’ ವೇದಿಕೆಯ ಪ್ರಮುಖರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಸಮಾಜದ ಪ್ರಮುಖರ ಪಾತ್ರ ಮಹತ್ವದ್ದು, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, "ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಮತ್ತು ಯುವಜನತೆಯನ್ನು ಸರಿದಾರಿಗೆ ತರಲು ಸಮಾಜದ ವಿವಿಧ ಸಮುದಾಯಗಳ ಮುಖಂಡರ ಪಾತ್ರ ಬಹಳ ದೊಡ್ಡದಿದೆ. ಎಲ್ಲರೂ ಒಂದಾಗಿ ಶ್ರಮಿಸಿದಾಗ ಮಾತ್ರ ಸಮರ್ಥ ಭಾರತದ ಕನಸು ನನಸಾಗಲು ಸಾಧ್ಯ," ಎಂದು ತಿಳಿಸಿದರು.ಈ ಸಭೆಯಲ್ಲಿ ಅಥಣಿ ನಗರದ 40ಕ್ಕೂ ಹೆಚ್ಚು ವಿವಿಧ ಸಮುದಾಯಗಳ ಪ್ರಮುಖರು ಪಾಲ್ಗೊಂಡು ಸಮಾಜದ ಹಿತದೃಷ್ಟಿಯಿಂದ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು. ತಾಲೂಕು ಸಹ ಕಾರ್ಯವಾಹರಾದ ಬಾಳಪ್ಪ ಬಾಡಗಿ ಅವರು ಎಲ್ಲರನ್ನೂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಭೆಯ ಕೊನೆಯಲ್ಲಿ ಮಹೇಶ್ ನಿಡಗುಂದಿ ಅವರು ವಂದನಾರೆ್ಣ ಮಾಡಿದರು.
ಸಭೆಯಲ್ಲಿ ಅಥಣಿ ನಗರದ ಆರ್ ಎಸ್ ಎಸ್ ಮುಖಂಡ ಅರವಿಂದರಾವ ದೇಶಪಾಂಡೆ ಮತ್ತು ಬೆಳಗಾವಿ ವಿಭಾಗ ಶಾರೀರಿಕ ಪ್ರಮುಖ ಮಹಾಂತೇಶ್ ಗುಡ್ಡಾಪುರ ಅವರು ಗಣ್ಯರು ಹಾಗೂ ಸಂಘದ ಪ್ರಮುಖ ಕಾರ್ಯಕರ್ತರಾದ ಸಚಿನ ಕುಲಕರ್ಣಿ, ಮಹಾದೇವ ಐಗಳಿ, ಸಂಗಮೇಶ, ಸಿದ್ರಾಮ, ಮಹೇಶ್ ನಿಡಗುಂದಿ, ಮಕರಂದ ನಾಯಿಕ ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 