ಬೆಂಗಳೂರು,ಡಿ.29 ರಸ್ತೆಗೆ ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ಕೆಳಗೆ ಬಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಗುಡ್ನಹಳ್ಳಿ ಕೆರೆಯ ಬಳಿ ನಡೆದಿದೆ. ಹೊಸೂರು ರಸ್ತೆಯ ಕುಮಾರನಹಳ್ಳಿಯ ಮುನಿಯಲ್ಲಪ್ಪ(35) ಎಂದು ಮೃತಪಟ್ಟವರು. ಕಳೆ ರಾತ್ರಿ ಆನೇಕಲ್ನಿಂದ ಕುಮಾರನಹಳ್ಳಿಗೆ ಮುನಿಯಲ್ಲಪ್ಪ ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಗುಡ್ನಹಳ್ಳಿ ಕೆರೆಯ ಮೇಲೆ ನಾಯಿಗಳು ಅಡ್ಡಲಾಗಿ ಬಂದ ಪರಿಣಾಮ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದಿದ್ದಾರೆ. ತಲೆ ಹಾಗೂ ಎದೆಯ ಭಾಗಕ್ಕೆ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವದಿಂದ ಮುನಿಯಲ್ಲಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಆನೇಕಲ್ ಪೋಲಿಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.