ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಅದ್ಧೂರಿಯಾಗಿ ಜರುಗಿದ ಲಕ್ಷ ತುಳಸಿ ಅರ್ಚನಾ ಕಾರ್ಯಕ್ರಮ

A Laksh Tulsi Archana program was held in a grand manner at Sri Raghavendraswamy's Mutt

ಕೊಪ್ಪಳ 04: ಇಲ್ಲಿನ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಲಕ್ಷ ತುಳಸಿ ಅರ್ಚನಾ ಹಾಗೂ ರಾಯರ ಮಠದಲ್ಲಿ ಬೃಂದಾವನ ಪ್ರತಿಷ್ಠಾಪನೆ ಮಾಡಿದ ಶ್ರೀ ರಘುವೀರತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ ಅದ್ಧೂರಿಯಾಗಿ  ಇಂದು ಜರುಗಿತು. 

ಇಂದು ಬೆಳಿಗ್ಗೆ 5 ಗಂಟೆಗೆ ಸುಪ್ರಭಾತ ಸೇವೆಯೊಂದಿಗೆ ಪ್ರಾರಂಭವಾದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಹಿಳೆಯರಿಂದ ಜರುಗಿದ ಶ್ರೀನಿವಾಸ ಕಲ್ಯಾಣ ಪಾರಾಯಣದ ನಂತರ ಗ್ರಾಮ ಪ್ರದಕ್ಷಿಣೆ ಹಮ್ಮಿಕೊಳ್ಳಲಾಯಿತು. ನಂತರ ಲಕ್ಷ ತುಳಸಿ ಅರ್ಚನಾ ಕಾರ್ಯಕ್ರಮ ಸಾಂಗವಾಗಿ ನೇರವೇರಿತು. ನಂತರ ತೀರ್ಥಪ್ರಸಾದವನ್ನು ಹಮ್ಮಿಕೊಳ್ಳಲಾಯಿತು.  

ಸಂಜೆ ಬೆಂಗಳೂರಿನ ಪಂಡಿತ ಅಂಬರೀಷಾಚಾರ್ ಇವರಿಂದ ಪ್ರವಚನ ಜರುಗಿತು. ಹಾಗೂ ಕಲಬುರಗಿಯ ರಮೇಶ ಕುಲಕರ್ಣಿ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜನಮನ ಸೂರೆಗೊಂಡಿತು. ನಂತರ ದೀಪೋತ್ಸವ ಹಾಗೂ ಫಲಮಂತ್ರಾಕ್ಷತೆ ಕಾರ್ಯಕ್ರಮದೊಂದಗೆ ಕಾರ್ಯಕ್ರಮ ಸಂಪನ್ನಗೊಳಿಸಲಾಯಿತು. ಈ ಸಂದರ್ಭದಲ್ಲಿ ರಾಘವೇಂದ್ರ ಸ್ವಾಮಿಗಳವರ ಮಠದ ಪ್ರಧನ ಅರ್ಚಕರಾದ ರಘುಪ್ರೇಮಾಚಾರ್ ಮುಳುಗುಂದ, ಪ್ರಮೋದಾಚಾರ ಪೂಜಾರ, ಶ್ರೀನಿವಾಸಾಚಾರ ಮುತುಗಿ, ವ್ಯವಸ್ಥಾಕರಾದ ಜಗನ್ನಾಥ ಹುನುಗುಂದ ಸೇರಿದಂತೆ ಕೃಷ್ಣಾ ಸೊರಟೂರು ಮತ್ತಿತರರು ಉಪಸ್ಥಿತರಿದ್ದರು.