ಪಟ್ಟಣದ ಸಂಗಮ ಗ್ರಾಮೀಣಭಿವೃದ್ಧಿ ಸಂಸ್ಥೆ ಹಾಗೂ ಬಿವಿಟಿ ಸಂಸ್ಥೆ, ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಇವರುಗಳ ಸಹಯೋಗದಲ್ಲಿ 1 ದಿನದ ವಿಶೇಷ ಸ್ವ ಉದ್ಯೋಗದ ತರಬೇತಿ ಕಾರ್ಯಾಗಾರ ಜರುಗಿತು.

A 1-day special self-employment training workshop was held in collaboration with the town's Sangama

ಲೋಕದರ್ಶನ ವರದಿ 

ಪಟ್ಟಣದ ಸಂಗಮ ಗ್ರಾಮೀಣಭಿವೃದ್ಧಿ ಸಂಸ್ಥೆ ಹಾಗೂ  ಬಿವಿಟಿ ಸಂಸ್ಥೆ, ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್  ಇವರುಗಳ ಸಹಯೋಗದಲ್ಲಿ 1 ದಿನದ ವಿಶೇಷ ಸ್ವ ಉದ್ಯೋಗದ ತರಬೇತಿ ಕಾರ್ಯಾಗಾರ ಜರುಗಿತು. 

ಸಿಂದಗಿ, 23;  ಗ್ರಾಮೀಣ  ಪ್ರದೇಶದಲ್ಲಿ ಕೌಶಲ್ಯಾಧಾರಿತ  ಉದ್ಯೋಗ ಸೃಷ್ಟಿಯಾಗಬೇಕೆಂದರೆ ತರಬೇತಿಯ ಅವಶ್ಯಕತೆ ಇದೆ ಈ ಕುರಿತಾಗಿ  ಸೆಲ್ಕೋ ಮತ್ತು ಸಂಗಮ ಸಂಸ್ಥೆ ಈಗಾಗಲೇ ಸೇವೆ ಸಲ್ಲಿಸುತ್ತಿದೆ ಎಂದು ಫಾದರ್ ಸಂತೋಷ  ಹೇಳಿದರು. 

      ಪಟ್ಟಣದ ಸಂಗಮ ಗ್ರಾಮೀಣಭಿವೃದ್ಧಿ ಸಂಸ್ಥೆ ಹಾಗೂ  ಬಿವಿಟಿ ಸಂಸ್ಥೆ, ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್  ಇವರುಗಳ ಸಹಯೋಗದಲ್ಲಿ 1 ದಿನದ ವಿಶೇಷ ಸ್ವ ಉದ್ಯೋಗದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ತಾಲೂಕಿನಲ್ಲಿ  "ಸಂಗಮ ಗ್ರಾಮೀಣಭಿವೃದ್ಧಿ ಸಂಸ್ಥೆ " ರ ಸ್ವಸಹಾಯ ಸಂಘದ ಆಸಕ್ತ 40ಕ್ಕೂ ಹೆಚ್ಚು ಮಹಿಳಾ ಸದಸ್ಯರಿಗೆ ವಿಶೇಷ ಸ್ವ ಉದ್ಯೋಗದ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಗಾರವು  ಗ್ರಾಮೀಣ ಪ್ರದೇಶದಲ್ಲಿ ಸೌರ ತಂತ್ರಜ್ಞಾನದ ಅನುಷ್ಠಾನ ಮತ್ತು ಆವಿಷ್ಕಾರದ ಕುರಿತು ಸ್ವಉದ್ಯೋಗದ ಮಾಹಿತಿ ಕಾರ್ಯಗಾರ ನಡೆಸಿ ತರಬೇತಿಯನ್ನು ಯಶಸ್ವಿ ಗೊಳಿಸಲಾಗಿದೆ ಎಂದರು. 

           ಜೀವನೋಪಾಯ ತರಬೇತಿ ವಿಭಾಗ ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ಶಿವಕುಮಾರ್ ಕೆ ಮಾತನಾಡಿ  ಗ್ರಾಮೀಣ ಪ್ರದೇಶದಲ್ಲಿ ಸೌರ ತಂತ್ರಜ್ಞಾನ ಅನುಷ್ಠಾನ ಮತ್ತು ಆವಿಷ್ಕಾರದ ಕುರಿತು ಭಾವುದ್ಯೋಗದ ಜೀವನೋಪಾಯಕ್ಕೆ ಅನುಕೂಲವಾಗುವ ಉಪಕರಣಗಳ ಕುರಿತು ಮಾಹಿತಿ ಮಾರ್ಗದರ್ಶನ ನೀಡಿದರು. 

 ಸೆಲ್ಕೋ ಸಂಸ್ಥೆ ಆರ್ಥಿಕ ಸಂಯೋಜಕ ಈರೇಶ್ ದಂಗಿ ಮಾತನಾಡಿ ಬ್ಯಾಂಕಿನ ಸಾಲ ಸೌಲಭ್ಯಗಳು ಹಾಗೂ ಇನ್ಸೂರೆನ್ಸ್‌ ಯೋಜನೆಗಳ  ಹಾಗೂ ಆರ್ಥಿಕ ಸಾಕ್ಷರತೆ ಕುರಿತು ಮಾಹಿತಿ ನೀಡಲಾಯಿತು. 

   ವಿಜಯಪುರ ಶಾಖೆಯ ವ್ಯವಸ್ಥೆಪಾಕ ಮಲ್ಲೇಶ್ ಕುಂಬಾರ್ ಮಾತನಾಡಿ ಸೌರ ತಂತ್ರಜ್ಞಾನ ದಿಂದ ಉದ್ಯೋಗ ಅವಕಾಶಗಳು ಹೆಚ್ಚು ಹೆಚ್ಚು ಸಿಗುತ್ತದೆ ಎಂದರು. 

   ಸಂಗಮ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ   ತೇಜಸ್ವಿನಿ ಹಳ್ಳದ ಕೇರಿ, ವಿಜಯ ಬಂಟನೂರ, ಬಸವರಾಜ ಬಿಸನಳ ಮತ್ತು ಸಂಗೀತಾ ಜಾಬೇನವರ  ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದು ತರಬೇತಿ ಕಾರ್ಯಗಾರವು ಯಶಸ್ವಿಯಾಗಿ ಪೂರ್ಣಗೊಂಡಿತು.