ಹುಕ್ಕೇರಿ ತಾಲೂಕಿಗೆ ಮೂಲಭೂತ ಸೌಕರ್ಯ ಕಲ್ಪಿಸಿದ ಎ. ಬಿ. ಪಾಟೀಲರು

ಹುಕ್ಕೇರಿ ತಾಲೂಕಿಗೆ ಮೂಲಭೂತ ಸೌಕರ್ಯ ಕಲ್ಪಿಸಿದ ಎ. ಬಿ. ಪಾಟೀಲರು A. B. Patil provided infrastructure to Hukkeri Taluk

ಸಂಕೇಶ್ವರ 10: ಹುಕ್ಕೇರಿ ತಾಲೂಕಿನ ಸಂಕೇಶ್ವರ ಹಾಗೂ ಹುಕ್ಕೇರಿ ಪಟ್ಟಣ ಒಳಗೊಂಡು ಕುಡಿಯುವ ನೀರಿನ ಭೀಕರ ಬರಗಾಲ ಆವರಿಸುತ್ತಿತ್ತು ಮಾಜಿ ಸಚಿವ ಎ.ಬಿ. ಪಾಟೀಲರು ದಿ: ಜೆ.ಎಚ್‌. ಪಟೇಲ ಸಂಪುಟದಲ್ಲಿ ಭೂ ಗಣಿ ಮತ್ತು ವಿಜ್ಞಾನ ಸಚಿವರಿದ್ದಾಗ ಹಿಡಕಲ್ ಜಲಾಶಯದಿಂದ ಹುಕ್ಕೇರಿ ಮತ್ತು ಸಂಕೇಶ್ವರ ಹನ್ನೊಂದು ಗ್ರಾಮಗಳು ಮತ್ತೆ 16 ಗ್ರಾಮಗಳು ಈಗ ಒಟ್ಟು 22 ಗ್ರಾಮಗಳಿಗೆ ಹಿಡಕಲ್ ಜಲಾಶಯದಿಂದ 22 ಕೀ.ಮೀ. ಪೈಪಲೈನಗಳ ಮುಖಾಂತರ ಕುಡಿಯುವ ನೀರಿನ ಭೀಕರತೆ ನಿವಾರಿಸುವಲ್ಲಿ ಎ.ಬಿ. ಪಾಟೀಲರ ಪ್ರಯತ್ನವನ್ನು ಇಂದಿಗೂ ಸಹ ಹುಕ್ಕೇರಿ ತಾಲೂಕಿನ ಜನತೆ ಈ ಜನನಾಯಕನನ್ನು ಕೊಂಡಾಡುತ್ತಿದ್ದಾರೆ.  

ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಪರಮೋಚ್ಛ ನಾಯಕ ಹೆಚ್‌.ಡಿ. ದೇವೆಗೌಡರ ಮುಖ್ಯಮಂತ್ರಿ ಆಡಳಿತ ಅವಧಿಯಲ್ಲಿ ಎ.ಬಿ. ಪಾಟೀಲರು ಶಿಕ್ಷಣ ಸಚಿವರಿದ್ದಾಗ ಸಂಕೇಶ್ವರದಲ್ಲಿ ಸುಮಾರು 38 ಕೊಳವೆ ಬಾವಿಗಳನ್ನು ಕೊರೆಯಿಸಿ ಬಹಳಷ್ಟು ಮಟ್ಟಿಗೆ ನೀರಿನ ಭೀಕರತೆಯನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿರುತ್ತಾರೆ.  

ಸಚಿವರಾಗಿ, ಶಾಸಕರಾಗಿ ಅವರ ಕಾಲಾವಧಿಯಲ್ಲಿ ಅವರು ಮಾಡಿದ ಸಾಧನೆಗಳು ಅಪಾರ 

ಸಂಕೇಶ್ವರ, ಹುಕ್ಕೇರಿ ಹಾಗೂ ಇತರ 22 ಹಳ್ಳಿಗಳಿಗೆ ಹಿಡಕಲ್ ಜಲಾಶಯದಿಂದ ಕುಡಿಯುವ ನೀರಿನ ಸೌಲಭ್ಯ, ಸಂಕೇಶ್ವರ ಪಟ್ಟಣದಲ್ಲಿ ಅಗ್ನಿಶಾಮಕ ದಳದ ಸ್ಥಾಪನೆ, ಸಂಕೇಶ್ವರದಲ್ಲಿ ಜೆ.ಎಂ.ಎಫ್‌.ಸಿ ನ್ಯಾಯಾಲಯ ಸ್ಥಾಪನೆ, ಸಂಕೇಶ್ವರದಲ್ಲಿ ಗ್ರಂಥಾಲಯ ಸ್ಥಾಪನೆ, ಹುಕ್ಕೇರಿ, ಚಿಕ್ಕೋಡಿ ತಾಲೂಕಿನ 22 ಕೆರೆಗಳಿಗೆ ನೀರು ತುಂಬಿಸುವ ಸಲುವಾಗಿ ಬಿ.ಆರ್ ಸಂಗಪ್ಪಗೋಳ ಅವರ ಜೊತೆಗೂಡಿ ಹೋರಾಟ ನಡೆಸಿ ಸರ್ಕಾರದಿಂದ ಆಡಳಿತಾತ್ಮಕ ಹಾಗೂ ಹಣಕಾಸು ಮಂಜೂರಿ ಮಾಡಿಸಿದ್ದು, ದಡ್ಡಿ ಭಾಗದಲ್ಲಿ ಸರ್ಕಾರಿ ಮಾಧ್ಯಮಿಕ ಶಾಲೆಗಳು, ವಸತಿ ನಿಲಯಗಳ ಸ್ಥಾಪನೆ ಮಾಡಿದ್ದು, ಸಂಕೇಶ್ವರದ ಹರಗಾಪೂರ ಗಡದಲ್ಲಿ ಮೂರಾರ್ಜಿ ದೇಸಾಯಿ ವಸತಿ ಶಾಲೆ, ನಿಡಸೋಸಿ ಗೇಟ್ ಬಳಿ ಸರ್ಕಾರಿ ಆಸ್ಪತ್ರೆ ಆರಂಭಿಸಿದ್ದು, ಎಸ್‌.ಡಿ.ವಿ.ಎಸ್ ಸಂಘಧ ಅಧ್ಯಕ್ಷರಾದ ನಂತರ, ಸಿ.ಬಿ.ಎಸ್‌.ಇ ಶಾಲೆ, ಬಿ.ಬಿ.ಎ. ಎಂ.ಬಿ.ಎ, ಐ.ಟಿ.ಐ,ನರ್ಸಿಂಗ, ಪ್ಯಾರಾಮೆಡಿಕಲ್ ಕಾಲೇಜುಗಳು ಸ್ಥಾಪಿಸಿ ಆ ಮೂಲಕ ಗಡಿ ಭಾಗಕ್ಕೆ ಶೈಕ್ಷಣಿಕ ಸೌಲಭ್ಯ ನೀಡಿದರು, ಸಂಕೇಶ್ವರದ ಸಮುದಾಯ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿದ್ದು ಮತ್ತು ನಿಡಸೋಶಿಯ ಪಾಲಿಟೆಕ್ನಿಕ್ ಕಾಲೇಜ ಮತ್ತು ಇಂಜಿನಿಯರಿಂಗ ಈ ಕಾಲೇಜುಗಳಿಗೆ ದಿ. ರಾಮಕೃಷ್ಣ ಹೆಗಡೆ ಇವರು ಮುಖ್ಯಮಂತ್ರಿ ಇದ್ದಾಗ ಎ.ಬಿ. ಪಾಟೀಲರು ಸರ್ಕಾರದಿಂದ ಮಾನ್ಯತೆ ದೊರಕಿಸಿಕೊಟ್ಟಿದ್ದಾರೆ. ಎ.ಬಿ. ಪಾಟೀಲರು ಸಜ್ಜನಿಕೆ ರಾಜಕಾರಣಿ ಮತ್ತು ಪ್ರಬುದ್ಧ ರಾಜಕಾರಣಿಗೆ ಹೆಸರುವಾಸಿಯಾಗಿದ್ದಾರೆ.